Satya Darshana
ಬಿಸಿ ಬಿಸಿ ಸುದ್ದಿ
ಜಿಲ್ಲೆಬಿಸಿ ಬಿಸಿ ಸುದ್ದಿ

‘ಗಂಗಾ ಕಲ್ಯಾಣ’ ಪಂಪಸೆಟ್‌ಗಳು ಸದ್ಬಳಕೆ ಮಾಡಿಕೊಂಡು ಫಲಾನುಭವಿಗಳು ಆರ್ಥಿಕ ಪ್ರಗತಿ ಹೊಂದಬೇಕು’ಬಯ್ಯಾಪುರ ಅಮರೇಗೌಡ,

ಕುಷ್ಟಗಿ: ಗಂಗಾ ಕಲ್ಯಾಣ ಯೋಜನೆಯಲ್ಲಿ ಸರ್ಕಾರ ನೀಡಿರುವ ಪಂಪಸೆಟ್‌ಗಳನ್ನು ಸದ್ಬಳಕೆ ಮಾಡಿಕೊಂಡು ಫಲಾನುಭವಿಗಳು ಆರ್ಥಿಕ ಪ್ರಗತಿ ಹೊಂದಬೇಕು’ಮಹರ್ಷಿ ವಾಲ್ಮೀಕಿ ಪರಿಶಿಷ್ಟ ಪಂಗಡಗಳ ಅಭಿವೃದ್ಧಿ ನಿಗಮದ ವತಿಯಿಂದ 2019 ರಿಂದ 2022ನೇ ವರ್ಷಗಳ ಅವಧಿಯಲ್ಲಿನ ಗಂಗಾ ಕಲ್ಯಾಣ ಯೋಜನೆಯಲ್ಲಿ ಆಯ್ಕೆಯಾದ ಫಲಾನುಭವಿಗಳಿಗೆ ಪಂಪ್‌ಸೆಟ್‌ ಸಲಕರಣೆಗಳನ್ನು ಹಸ್ತಾಂತರಿಸಿ ಅವರು ಮಾತನಾಡಿದರು.

ಗಂಗಾ ಕಲ್ಯಾಣ ಯೋಜನೆಯಲ್ಲಿ ಸರ್ಕಾರ ನೀಡಿರುವ ಪಂಪಸೆಟ್‌ಗಳನ್ನು ಸದ್ಬಳಕೆ ಮಾಡಿಕೊಂಡು ಫಲಾನುಭವಿಗಳು ಆರ್ಥಿಕ ಪ್ರಗತಿ ಹೊಂದಬೇಕು’ ಎಂದು ಶಾಸಕ ಅಮರೇಗೌಡ ಬಯ್ಯಾಪುರ ಹೇಳಿದರು.

ಪಂಪ್‌ಸೆಟ್‌ಗಳು ಸದ್ಬಳಕೆಯಾಗಬೇಕು. ಮಾರಾಟ ಮಾಡಿ ದುರ್ಬಳಕೆ ಮಾಡಿಕೊಳ್ಳಬಾರದು. ಅಷ್ಟೇ ಅಲ್ಲ ಕನಿಷ್ಠ ಒಂದು ಎಕರೆ ಪ್ರದೇಶದಲ್ಲಾದರೂ ಉತ್ತಮ ಬೆಳೆ ಬೆಳೆದು ಪ್ರತಿನಿಧಿಗಳು, ಅಧಿಕಾರಿಗಳನ್ನು ತಮ್ಮ ಜಮೀನುಗಳಿಗೆ ಆಹ್ವಾನಿಸಿ ಫಲಾನುಭವಿಗಳು ತಾವು ಮಾಡಿದ ಸಾಧನೆ ತೋರಿಸಿದರೆ ಸರ್ಕಾರದ ಯೋಜನೆ ಸಾರ್ಥಕವಾಗುತ್ತದೆ ಎಂದರು.

ನಿಗಮದ ಅಧಿಕಾರಿಗಳು ಕೇವಲ ಪಂಪ್‌ಸೆಟ್‌ಗಳನ್ನು ವಿತರಿಸಿದರೆ ಸಾಲದು ಫಲಾನುಭವಿಗಳು ಹೇಗೆ ಬಳಕೆ ಮಾಡಿಕೊಳ್ಳುತ್ತಿದ್ದಾರೆ. ಯೋಜನೆ ಆಶಯ ಈಡೇರಿದೆಯೇ ಎಂಬುದರ ಬಗ್ಗೆ ಪರಿಶೀಲನೆ ನಡೆಸಿ ಮಾಹಿತಿ ನೀಡಬೇಕು ಎಂದರು.

ಈ ಸಂದರ್ಭದಲ್ಲಿ ಒಟ್ಟು 92 ಫಲಾನುಭವಿಗಳಿಗೆ ಕೊಳವೆಬಾವಿಗೆ ಅಳವಡಿಸುವ ಸಬ್‌ಮರ್ಸಿಬಲ್‌ ಮೋಟರ್‌ ಪಂಪ್‌ ಹಾಗೂ ಇತರೆ ಸಲಕರಣೆಗಳನ್ನು ವಿತರಿಸಲಾಯಿತು.

ಕಲ್ಲಪ್ಪ ತಳವಾರ, ಪುರಸಭೆ ಅಧ್ಯಕ್ಷ ಜಿ.ಕೆ.ಹಿರೇಮಠ, ಸದಸ್ಯರಾದ ಖಾಜಾ ಮೈನುದ್ದೀನ್‌ ಮುಲ್ಲಾ. ನಿಗಮದ ಜಿಲ್ಲಾ ವ್ಯವಸ್ಥಾಪಕ ವಿ.ಎನ್‌.ಕಾಳೆ, ತಾಲ್ಲೂಕಿನ ಕ್ಷೇತ್ರಾಧಿಕಾರಿ ಪರಸಪ್ಪ, ಸಾಮಗ್ರಿ ಪೂರೈಕೆದಾರ ದೇವೇಂದ್ರಗೌಡ ಪಾಟೀಲ, ಉಮೇಶ ಮಂಗಳೂರು ಹಾಗೂ ಮಂಜುನಾಥ ಕಟ್ಟಿಮನಿ ಇದ್ದರು.

Related posts

ಸಮಾಜದ ಏಳಿಗೆಗೆ ಸದಾ ತುಡಿತವಿರಲಿ: ಬಿ.ಹೆಚ್.ಎಂ.ತಿಪ್ಪೇರುದ್ರಸ್ವಾಮಿ

satyadarshana

ರೈತ ಬಾಂಧವರಿಗೆ ಇ- ಕೆವೈಸಿ ಕಡ್ಡಾಯ

satyadarshana

ವಿಶ್ವ ಮಾನಸಿಕ ಆರೋಗ್ಯ ದಿನಾಚರಣೆ-2024”

satyadarshana

Leave a Comment