Satya Darshana
ಬಿಸಿ ಬಿಸಿ ಸುದ್ದಿ
ಬಿಸಿ ಬಿಸಿ ಸುದ್ದಿರಾಜ್ಯ

ಕುಡಿಯುವ ನೀರಿಗಾಗಿ ಆಗ್ರಹಿಸಿ ಅಖಂಡ ಕರ್ನಾಟಕ ರೈತ ಸಂಘದ ವತಿಯಿಂದ ಉಪವಾಸ ಸತ್ಯಾಗ್ರಹ..

ಆಲಮಟ್ಟಿ.: ಇಲ್ಲಿನ ಕೃಷ್ಣಾ ಭಾಗ್ಯ ಜಲ ನಿಗಮ ಮುಖ್ಯ ಅಭಿಯಂತರರ ಕಚೇರಿ ಆವರಣದಲ್ಲಿ ಕಳೆದ ಎಂಟು ದಿನಗಳಿಂದ ನಡೆಯುತ್ತಿರುವ ಅಹೋರಾತ್ರಿ ಧರಣಿಗೆ ಸ್ಪಂದಿಸದ ಸರ್ಕಾರದ ನಿಲುವನ್ನು ಖಂಡಿಸಿ ಸೋಮವಾರದಿಂದ ಆರಂಭಗೊಂಡ ಉಪವಾಸ ಧರಣಿ ಸತ್ಯಾಗ್ರಹದಲ್ಲಿ ಇಬ್ಬರು ನಾಯಕರು ಅಸ್ವಸ್ಥರಾಗಿ ರುವುದರಿಂದ ಧರಣಿ ಸ್ಥಳದಲ್ಲಿಯೇ ವೈದ್ಯರು ಪರೀಕ್ಷೆಗೊಳಪಡಿಸಿದರು.

ಜಿಲ್ಲೆಯ ಜನ-ಜಾನುವಾರುಗಳ ಕುಡಿಯುವ ನೀರಿಗಾಗಿ ಆಗ್ರಹಿಸಿ ಅಖಂಡ ಕರ್ನಾಟಕ ರೈತ ಸಂಘದ ವತಿಯಿಂದ ನಡೆಯುತ್ತಿರುವ ಉಪವಾಸ ಸತ್ಯಾಗ್ರಹ ನಿರತರಾಗಿರುವ ಪ್ರಧಾನ ಕಾರ್ಯದರ್ಶಿ ಅರವಿಂದ ಕುಲಕರ್ಣಿ ಹಾಗೂ ರೈತ ಮುಖಂಡ ವಿಠ್ಠಲ ಬಿರಾದಾರ್ ಅಸ್ವಸ್ಥರಾದ ಘಟನೆ ಬುಧವಾರ ಸಂಭವಿಸಿದೆ.

ಕೃಷ್ಣಾಕಾಡಾ ಮಾಜಿ ಅಧ್ಯಕ್ಷರಾಗಿರುವ ಬಸವರಾಜ ಕುಂಬಾರ ಭೇಟಿ ನೀಡಿ ನೈತಿಕ ಬೆಂಬಲ ವ್ಯಕ್ತಪಡಿಸಿದರು.

ಈ ವೇಳೆ ಮಾತನಾಡಿದ ಅವರು ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಧರಣಿ ಹಾಗೂ ಹೋರಾಟಗಳು ಸರಕಾರದ ಗಮನಸೆಳೆಯುವ ಅಸ್ತ್ರ ಗಳಾಗಿವೆ ಆದರೆ ಅಖಂಡ ಕರ್ನಾಟಕ ರೈತ ಸಂಘದ ವತಿಯಿಂದ ನಡೆಯುತ್ತಿರುವ ಆಮರಣ ಉಪವಾಸ ಸತ್ಯಾಗ್ರಹ ಹಣ್ಣು ಕೈಬಿಟ್ಟು ಅನಿರ್ದಿಷ್ಟ ಧರಣಿಯನ್ನು ಮುಂದುವರೆಸಲು ವಿನಂತಿಸಿದರು.

ಅವಳಿ ಜಲಾಶಯಗಳ ನಿರ್ಮಾಣಕ್ಕಾಗಿ ಒಂದು 173 ಗ್ರಾಮಗಳು ಮುಳುಗಡೆ ಹೊಂದಿ ಲಕ್ಷಾಂತರ ಕುಟುಂಬಗಳು ಸಂತ್ರಸ್ತರಾಗಿದ್ದಾರೆ ರಾಷ್ಟ್ರದ ಹಿತಾಸಕ್ತಿಗಾಗಿ ತ್ಯಾಗ ಮಾಡಿದ ಸಂತ್ರಸ್ತ ಕುಟುಂಬಗಳು ಅತಂತ್ರ ಸ್ಥಿತಿಯಲ್ಲಿ ಬದುಕುತ್ತಿದ್ದಾರೆ ಜಲಾಶಯ ನಿರ್ಮಾಣಕ್ಕೆ ತ್ಯಾಗ ಮಾಡಿದ ಜಿಲ್ಲೆಯ ಜನತೆಯ ಕುಡಿಯುವ ನೀರಿಗೆ ತೊಂದರೆಯಾಗದಂತೆ ಸರ್ಕಾರ ಶಾಸ್ತ್ರಿ ಜಲಾಶಯದ ವ್ಯಾಪ್ತಿಯ ಕಾಲುವೆಗಳ ಮೂಲಕ ಕೆರೆಗಳನ್ನು ತುಂಬಬೇಕು ಎಂದು ಹೇಳಿದರು.

ಶಾಸ್ತ್ರಿ ಜಲಾಶಯ ವ್ಯಾಪ್ತಿಯಲ್ಲಿ ಸುಮಾರು ಎರಡು 240 ಕೆರೆಗಳಿವೆ ಅವುಗಳನ್ನು ಅತಿಶೀಘ್ರವಾಗಿ ತುಂಬುವುದರಿಂದ ಅಂತರ್ಜಲ ಮಟ್ಟ ಹೆಚ್ಚಾಗುತ್ತದೆ ಮತ್ತು ಕೆರೆಗಳಿಂದ ಜನ ಜಾನುವಾರು ವನ್ಯಜೀವಿಗಳು ನೀರನ್ನು ಕುಡಿಯಲು ಅನುಕೂಲವಾಗುತ್ತದೆ ವಿಜಯಪುರ ಜಿಲ್ಲೆಯ 8.22ಲಕ್ಷ ಹೆಕ್ಟೇರ್ ಪ್ರದೇಶ ಸಾಗುವಳಿ ಭೂಮಿಯಾಗಿದೆ ಇದರಲ್ಲಿ ಈಗಾಗಲೇ ಎರಡು ಲಕ್ಷ ಹೆಕ್ಟೇರ್ ನೀರಾವರಿಗೆ ಒಳಪಟ್ಟಿದೆ ಎಂದು ಹೇಳಿದರು.

ಉಪವಾಸ ನಿರತ ಅಖಂಡ ಕರ್ನಾಟಕ ರೈತ ಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಅರವಿಂದ ಕುಲಕರ್ಣಿ ಮಾತನಾಡಿ ರಾಷ್ಟ್ರದ ಹಿತಕ್ಕಾಗಿ ಜಲಾಶಯ ನಿರ್ಮಾಣದ ತ್ಯಾಗ ಮಾಡಿದ ವಿಜಯಪುರ ಜಿಲ್ಲೆಯ ಜನತೆಯ ಕುಡಿಯುವ ನೀರಿಗಾಗಿ ಉಪವಾಸ ಸತ್ಯಾಗ್ರಹ ಕೈಗೊಳ್ಳುವಂತೆ ಆಗಿರುವುದು ದುರ್ದೈವದ ಸಂಗತಿ ಜನಪ್ರತಿನಿಧಿಗಳು ತ್ಯಾಗ ಮಾಡಿದ ಜಿಲ್ಲೆಯ ಜನತೆಯ ನೀರಿನ ದಾಹ ನೀಗಿಸಲು ಪ್ರಯತ್ನಿಸದಿರುವುದು ಜಿಲ್ಲೆಯ ಜನರ ಬಗ್ಗೆ ಇರುವ ಕಾಳಜಿಯನ್ನು ಎತ್ತಿ ತೋರುತ್ತದೆ ಆದ್ದರಿಂದ ಜಿಲ್ಲೆಯ ಯುವಕರು ಪಕ್ಷ ಜಾತಿ ಆಮಿಷಗಳಿಗೆ ಮರುಳಾಗದೆ ರೈತರಿಗಾಗಿ ದುಡಿಯುವ ವ್ಯಕ್ತಿಗಳನ್ನು ಗುರುತಿಸಿ ಮತದಾನ ಮಾಡುವುದರಿಂದ ನಮ್ಮ ಹಕ್ಕನ್ನು ನಾವು ಪಡೆಯಬಹುದಾಗಿದೆ ಎಂದರು.

ನೀರಿಗಾಗಿ ನೆಲೆ ಕಳೆದುಕೊಂಡ ಜಿಲ್ಲೆಯ ಜನರು ತಮ್ಮ ಹಕ್ಕಾಗಿರುವ ಕುಡಿಯುವ ನೀರು ಪಡೆಯಲು ಹೋರಾಟ ಮಾಡುವಂತಾಗಿದೆ ಇದು ನಾಚಿಕೆಪಡುವ ಸಂಗತಿಯಾಗಿದೆ ಎಂದು ಹೇಳಿದರು.

ವಿಶೇಷವೆಂದರೆ 519.6 ಮೀಟರ್ ಎತ್ತರದಲ್ಲಿ 123 081 ಟಿಎಂಸಿ ನೀರು ಸಂಗ್ರಹ ಆಲಮಟ್ಟಿ ಜಲಾಶಯದಲ್ಲಿ ಅಪಾರ ಪ್ರಮಾಣದಲ್ಲಿ ನೀರು ಸಾಗುತ್ತಿದ್ದರು ಆಲಮಟ್ಟಿ ಜಲಾಶಯ ವ್ಯಾಪ್ತಿಯ ಕಾಲುವೆಗಳಿಗೆ ಹಿಂಗಾರು ಮತ್ತು ಮುಂಗಾರು ಸೇರಿದಂತೆ ಒಟ್ಟು 15 ಟಿಎಂಸಿ ಎಷ್ಟು ನೀರನ್ನು ಅವಳಿ ಜಿಲ್ಲೆಯ ರೈತರ ಜಮೀನಿಗೆ ಕಾಲುವೆಗಳ ಮೂಲಕ ಹರಿಸಲಾಗುತ್ತದೆ ಇನ್ನುಳಿದಂತೆ ಸಹೋದರ ಜಲಾಶಯವಾಗಿರುವ ನಾರಾಯಣಪುರ ಜಲಾಶಯ ವ್ಯಾಪ್ತಿಯಲ್ಲಿ 132 ಟಿಎಂಸಿ ನೀರನ್ನು ಬಳಸಿಕೊಂಡು ಉಳಿದ ಜಿಲ್ಲೆಯ ರೈತರ ಜಮೀನಿಗೆ ನೀರುಣಿಸಲಾಗುತ್ತಿದೆ ಆದರೆ ಜಲಾಶಯಗಳ ನಿರ್ಮಾಣಕ್ಕೆ ತ್ಯಾಗ ಮಾಡಿದ ಅವಳಿ ಜಿಲ್ಲೆಗಳಿಗೆ ಕೇವಲ 15 ಟಿಎಂಸಿ ನೀರು ತ್ಯಾಗ ಮಾಡದೇ ಇರುವ ಜಿಲ್ಲೆಗಳಿಗೆ ಒಂದು 132 ಟಿಎಂಸಿ ನೀರು ಕೊಡಲಾಗುತ್ತದೆ ವಿಜಯಪುರ ಜಿಲ್ಲೆಯ ಜನ ಕಾಲುವೆಗಳ ಮೂಲಕ ನೀರು ಕೇಳಿದರೆ ಹಂತಗಳ ನೆಪ ಹೇಳಲಾಗುತ್ತದೆ ಇದರಿಂದ ಅವಳಿ ಜಿಲ್ಲೆಯ ರೈತರಿಗೆ ಮಹಾ ಮೋಸವಾಗುತ್ತದೆ ಈ ಕುರಿತು ರೈತರು ಜಾಗೃತರಾಗದಿದ್ದಲ್ಲಿ ನಮ್ಮ ಹಕ್ಕನ್ನು ಪಡೆಯಲು ಸಾಧ್ಯವಾಗುವುದಿಲ್ಲ ಚುನಾವಣೆಯ ಸಂದರ್ಭಗಳಲ್ಲಿ ರೈತಬಾಂಧವರು ಪಕ್ಷ ಜಾತಿ ಹಣದ ಆಮಿಷಗಳಿಗೆ ಒಳಗಾಗದೆ ರೈತಪರ ಕಾಳಜಿ ಇರುವ ವ್ಯಕ್ತಿಗಳನ್ನು ಬೆಂಬಲಿಸುವಂತೆ ಆಗಬೇಕು ಎಂದು ವಿನಂತಿಸಿದರು ಧರಣಿಯಲ್ಲಿ ವಿಠ್ಠಲ ಬಿರಾದಾರ್ ಸದಾಶಿವ ಬರಟಗಿ ಮಾಂತಯ್ಯ ಚಿಕ್ಕಮಠ ಸಂತೋಷ್ ಬಿರಾದಾರ್ ಮಾದೇವಪ್ಪ ಬಿರಾದಾರ್ ಸೇರಿದಂತೆ ಸುಮಾರು 50ಕ್ಕೂ ಅಧಿಕ ರೈತರು ಉಪಸ್ಥಿತರಿದ್ದರು.

 

Related posts

ನಿಮ್ಮ ಗ್ರಾಮದಲ್ಲಿ ಸಮಸ್ಯೆಯೇ? 8277506000 ಡೈಲ್ ಮಾಡಿ : ಸಿಇಓ ಭರತ್ ಎಸ್

satyadarshana

ಶಾಲಾ ವಾರ್ಷಿಕೋತ್ಸವ ಉತ್ತಮವಾದ ವೇದಿಕೆ: ಗಿರೀಶ್ ವೇರ್ಣೇಕರ.

satyadarshana

ಕೋಟಿ ಖರ್ಚಾದರೂ ಹನಿ ನೀರೂ ಸಿಕ್ಕಿಲ್ಲ

satyadarshana

Leave a Comment