Satya Darshana
ಬಿಸಿ ಬಿಸಿ ಸುದ್ದಿ
ರಾಜ್ಯ

ಕಾನೂನು ಸುವ್ಯವಸ್ಥೆ ವಿಭಾಗದಲ್ಲಿ ಕೆಲಸ ಮಾಡುವ ಪೊಲೀಸರು ತಮ್ಮ ದೇಹಗಳಿಗೆ ಕ್ಯಾಮರ ಕಡ್ಡಾಯ ಮಾಡಿ ಆದೇಶ

ಬೆಂಗಳೂರು, ಮಾ.10- ಕಾನೂನು ಸುವ್ಯವಸ್ಥೆ ವಿಭಾಗದಲ್ಲಿ ಕೆಲಸ ಮಾಡುವ ಪೊಲೀಸರು ತಮ್ಮ ದೇಹಗಳಿಗೆ ಕ್ಯಾಮರ ಅಳವಡಿಸಿಕೊಳ್ಳುವುದನ್ನು ಕಡ್ಡಾಯ ಮಾಡಿ ಆದೇಶ ಹೊರಡಿಸಲಾಗಿದೆ ಎಂದು ಗೃಹ ಸಚಿವ ಆರಗಜ್ಞಾನೇಂದ್ರ ತಿಳಿಸಿದ್ದಾರೆ. ವಿಧಾನ ಪರಿಷತ್ ನ ಪ್ರಶ್ನೋತ್ತರ ಅವಧಿಯಲ್ಲಿ ಕಾಂಗ್ರೆಸ್ ಸದಸ್ಯ ಸಲೀಂ ಅಹಮ್ಮದ್ ಬಾಲಕೃಷ್ಣರಾವ್ ವರದಿ ಪ್ರಕಾರ ಪೊಲೀಸ್ ನೇಮಕಾತಿ ನಡೆಯುತ್ತಿದೆಯೇ ಎಂದಾಗ ಉತ್ತರ ನೀಡಿದ ಸಚಿವರು, 2011ರ ಜನಗಣತಿ ಪ್ರಕಾರ ರಾಜ್ಯದಲ್ಲಿ 6.10 ಕೋಟಿ ಜನಸಂಖ್ಯೆ ಇದೆ. ಒಟ್ಟು 1,05,864 ಪೊಲೀಸ್ ಅಧಿಕಾರಿಗಳು ಮತ್ತು ಸಿಬ್ಬಂದಿಗಳಿದ್ದಾರೆ.

ದೇಶದಲ್ಲಿ 568 ಮಂದಿಗೆ ಒಬ್ಬ ಪೊಲೀಸ್ ಸಿಬ್ಬಂದಿ ಇದ್ದರೆ, ರಾಜ್ಯದಲ್ಲಿ 577 ಜನರಿಗೆ ಒಬ್ಬ ಪೊಲೀಸ್ ಸಿಬ್ಬಂದಿ ಇದ್ದಾರೆ ಎಂದರು. ಪೊಲೀಸ್ ಅಧಿಕಾರಿಗಳು ಸ್ಥಳಕ್ಕೆ ಹೋದಾಗ ಒರಟಾಗಿ ವರ್ತಿಸುತ್ತಾರೆ. ದರ್ಪ ಪ್ರದರ್ಶಿಸುತ್ತಾರೆ ಎಂಬ ಆರೋಪಗಳು ಕೇಳಿ ಬರುತ್ತವೆ. ಅದನ್ನು ತಪ್ಪಿಸಲು ಇನ್ನೂ ಮುಂದೆ ಅಪರಾಧ ನಡೆದಾಗ ಸ್ಥಳಕ್ಕೆ ತೆರಳುವ ಪೊಲೀಸ್ ರು ಬಾಡಿ ಕ್ಯಾಮರಾ ಹೊಂದಿರುವುದು ಕಡ್ಡಾಯ ಮಾಡಿ ಆದೇಶ ಹೊರಡಿಸಲಾಗಿದೆ.

ಸಂಚಾರಿ ಪೊಲೀಸರು ಬಾಡಿ ಕ್ಯಾಮರ ಅಳವಡಿಸಿಕೊಳ್ಳುವುದನ್ನು ಕಡ್ಡಾಯಗೊಳಿಸಿದಂತೆ ಕಾನೂನು ಸುವ್ಯವಸ್ಥೆ ವಿಭಾಗದ ಪೊಲೀಸರು ಬಾಡಿ ಕ್ಯಾಮರ ಅಳವಡಿಕೊಳ್ಳಬೇಕಿದೆ. ಯಾರಾದರೂ ಬಾಡಿ ಕ್ಯಾಮರ ಅಳವಡಿಸಿಕೊಂಡಿಲ್ಲ ಎಂದು ಮಾಹಿತಿ ನೀಡಿದರೆ ಕ್ರಮ ಕೈಗೊಳ್ಳಲಾಗುವುದು ಎಂದರು.

ಟ್ರಾಫಿಕ್ ಪೋ ಲಿಸರ ಜವಾಬ್ದಾರಿಯೂ ಹೆಚ್ಚಾಗಿದೆ. ವ್ಯವಸ್ಥೆಯನ್ನು ಸುಧಾರಿಸುತ್ತಿದ್ದೇವೆ. ಆಕ್ಷೇಪಕ್ಕೆ ಗುರಿಯಾಗಿದ್ದ ಟೋಯಿಂಗ್ ನ್ನು ಸದ್ಯಕ್ಕೆ ನಿಲ್ಲಿಸಿದ್ದೇವೆ. ಮುಂದೆ ಅದನ್ನು ಬದಲಾವಣೆ ಮಾಡಲು ಹಿರಿಯ ಅಧಿಕಾರಿಗಳು ಚರ್ಚೆ ಮಾಡುತ್ತಿದ್ದಾರೆ.

ಮುಖ್ಯಮಂತ್ರಿಯವರ ಜೊತೆ ಚರ್ಚೆ ಮಾಡಿ ಅತ್ಯಾಧುನಿಕ ಜನ ಸ್ನೇಹಿ ಟ್ರಾಫಿಕ್ ವ್ಯವಸ್ಥೆ ತರಲು ಚಿಂತನೆ ನಡೆದಿದೆ. ಇನ್ನೂ ಮುಂದೆ ರಸ್ತೆಯಲ್ಲಿ ಅಡ್ಡ ಹಾಕಿ ನಿಲ್ಲಿಸಿ ತಪಾಸಣೆ ಮಾಡುವುದು, ಕಿರುಕುಳ ನೀಡುವುದು ತಪ್ಪಲಿದೆ ಎಂದರು. ಸ್ಮಾರ್ಟ್ ಸಿಟಿ ಯೋಜನೆಯ ಅನುದಾನ ಬಳಕೆ ಮಾಡಿ ನಗರ ಪ್ರದೇಶದಲ್ಲಿ ಅತ್ಯಾಧುನಿಕ ಕ್ಯಾಮರಗಳನ್ನು ಅಳವಡಿಸಿದ್ದೇವೆ, ಇವು ಕಳ್ಳತನದ ವಾಹನಗಳು ಹಾದು ಹೋದರೆ ಗುರುತಿಸಿ ಪೊಲೀಸರಿಗೆ ಮಾಹಿತಿ ನೀಡುತ್ತವೆ ಎಂದು ಹೇಳಿದರು. ಐದು ವರ್ಷಗಳ ಹಿಂದೆ ಪೊಲೀಸ್ ಇಲಾಖೆಯಲ್ಲಿ 35 ಸಾವಿರ ಹುದ್ದೆಗಳು ಖಾಲಿ ಇದ್ದವು.

ಆರು ವರ್ಷದಲ್ಲಿ 3365 ಪಿಎಸ್ ಐ ಗಳನ್ನು ನೇಮಕಾತಿ ಮಾಡಿದ್ದೇವೆ., ಅವರು ತರಬೇತಿ ಪಡೆದು ಬಂದರೆ ಪಿಎಸ್ ಐ ಹುದ್ದೆಗಳು ಖಾಲಿ ಇರಲ್ಲ. 35521 ಕಾನ್ಸ್‍ಟೇಬಲ್ ಗಳನ್ನು ಭರ್ತಿ ಮಾಡಲಾಗಿದೆ. ಮುಂದೆ ಪ್ರತಿ ವರ್ಷ ನಾಲ್ಕು ಸಾವಿರ ಹುದ್ದೆಗಳಿಗೆ ನೇಮಕಾತಿ ನಡೆಯಲಿದೆ, ತೆರವಾಗುವು ಪಿಎಸ್ ಐ ಹುದ್ದೆಗಳಿಗೆ ಕಾಲ ಕಾಲಕ್ಕೆ ನೇಮಕಾತಿಗಳು ನಡೆಯಲಿದೆ ಎಂದರು.

ವಿಧಿ ವಿಜ್ಞಾನ ಪ್ರಯೋಗಾಲಯಗಳ ಸಂಖ್ಯೆಯನ್ನು ಹೆಚ್ಚಿಸಲಾಗಿದೆ. ಮೊದಲು ಆರು ವಿ ವಿಜ್ಞಾನ ಪ್ರಯೋಗಾಲಯಗಳಿದ್ದವು, ಕೇವಲ ಆರು ವಿಷಯಗಳಿಗೆ ಮಾತ್ರ ಪರೀಕ್ಷೆ ನಡೆಸಲಾಗುತ್ತಿತ್ತು. ಉಳಿದ ವಿಷಯಗಳ ಪರೀಕ್ಷೆಗೆ ಪೂನಾ ಮತ್ತು ಹೈದರಾಬಾದ್‍ಗೆ ಕಳುಹಿಸಲಾಗುತ್ತಿತ್ತು.

ಈಗ ಬೆಂಗಳೂರಿನಲ್ಲಿ ಎಲ್ಲಾ ವಿಷಯಗಳ ಪರೀಕ್ಷೆಗೂ ಪ್ರಯೋಗಾಲಯ ಆರಂಭಿಸಲಾಗಿದೆ. ಇತ್ತೀಚೆಗೆ ಹುಬ್ಬಳ್ಳಿ, ಬಳ್ಳಾರಿಯಲ್ಲಿ ಎರಡು ಪ್ರಯೋಗಾಲಯಗಳನ್ನು ಶುರು ಮಾಡಿದ್ದೇವೆ. ಎಲ್ಲಾ ವಿಷಯಗಳು ಅಲ್ಲಿರಲಿವೆ, ಡಿಎನ್‍ಎನ್ ಪರೀಕ್ಷಾ ವರದಿ ಪಡೆಯಲು ಎರಡು ವರ್ಷವಾಗುತ್ತಿತ್ತು. ಹುಬ್ಬಳ್ಳಿಯಲ್ಲಿ ಡಿಎನ್ ಎ ಪರೀಕ್ಷೆಗೆ ಒತ್ತು ನೀಡಲಾಗಿದೆ ಎಂದು ಗೃಹ ಸಚಿವ ಅರಗ ಜ್ಞಾನೇಂದ್ರ ಅವರು ಹೇಳಿದರು.

 

Related posts

ವಿದ್ಯಾವಂತರೇ ಸೈಬರ್ ಕ್ರೈಂನಲ್ಲಿ ಬಕ್ರಾ ಆಗುತ್ತಿದ್ದಾರೆ 

satyadarshana

ಯಲಬುರ್ಗಾ: ತಾಲೂಕಿನ ಮುಧೋಳ ಗ್ರಾಮದಲ್ಲಿ ಮೊರಹಂ ಕೊನೆಯ ದಿನ ಆಚರಣೆ

satyadarshana

ಎರಡು ಬಾರಿ ಹಾಜರಾತಿ ಕಡ್ಡಾಯ : ಸಂತೋಷಕುಮಾರ ಪಾಟೀಲ್ ಹೇಳಿಕೆ

satyadarshana

Leave a Comment