ಗದಗ.: ದೇಶದ ಪ್ರತಿಯೊಬ್ಬರಿಗೂ ಆಧಾರ ಗುರಿತಿನ ಚೀಟಿ ಕಡ್ಡಾಯವಾದುದಾಗಿದೆ. ಈ ಆಧಾರ ಕಾರ್ಡಿನಲ್ಲಿ ಕೆಲ ತಪ್ಪುಗಳು ಆಗಿರುವುದರಿಂದ ತಿದ್ದುಪಡಿ ಅನಿವಾರ್ಯವಾಗಿರುತ್ತದೆ. ಹೀಗಾಗಿ ಗಜೇಂದ್ರಗಡದ ಛಾಂಗ್ ದೇವ ಡಿಜಿಟಲ್ ಸೇವಾ ಕೇಂದ್ರದ ವತಿಯಿಂದ ಸಿ ಎಸ್ ಆಧಾರ ಕಾರ್ಡು ತಿದ್ದುಪಡಿ ಕೇಂದ್ರ ಉದ್ಘಾಟನೆಗೊಂಡಿತು.
ಸಾರ್ವಜನಿಕರು ತಮ್ಮ ಆಧಾರಕಾರ್ಡಿನ ಯಾವುದೇ ಲೋಪದೋಶಗಳನ್ನು ಸರಿಪಡಿಸಿಕೊಳ್ಳುಲು ಸಹಕಾರಿಯಾಗಲಿದೆ ಎಂದು ಎಸ್ ಎಂ ಬಿ ಪ್ರೌಢಶಾಲೆಯ ಬಿಎಸ್ ಜಾಗ್ರಿಯವರು ಉದ್ಘಾಟಿಸಿ ಮಾತನಾಡಿದರು.
ಈ ಸಂದರ್ಭದಲ್ಲಿ ಚಾಂಗ್ ದೇವ ಸೇವಾ ಕೇಂದ್ರದ ನಿರ್ದೇಶಕರಾದ ಕೃಷ್ಣಾ ಇಟಗಿ, ಶಿವಕುಮಾರ ಇಟಗಿ, ಕೇಂದ್ರದ ಉದ್ದೇಶ ತಿಳಿಸಿದರು.
ಈ ಸಂದರ್ಭದಲ್ಲಿ ಶಿಕ್ಷಕರಾದ ನಾಡಗೇರ, ಸುಣಗಾರ, ಹಿರೇಮಠ ಅನ್ನದಾನೇಶ್ವರ ಅಂಗಡಿ, ರಾಜು ನಿಟ್ಟಾಲಿ, ಪರಶುರಾಮ್ ಗುರಿಕಾರ, ವೀರಣ್ಣ ಪಾಟೀಲ್, ರಮೇಶ ಕಾತರಕಿ, ಸಾಹಿತಿ, ಪ್ರೋ. ಬಿ ಕೆ ಮಾದಿ, ಪುರಸಭೆ ಸದಸ್ಯರಾದ ಶ್ರೀಮತಿ ಸವಣೂರ ಸೇರಿದಂತೆ ಇತರರು ಉಪಸ್ಥಿತರಿದ್ದರು.
