ಸುದ್ದಿಮೂಲ ಸತ್ಯದರ್ಶನ
ಗಜೇಂದ್ರಗಡ: ಗಜೇಂದ್ರಗಡ ತಾಲೂಕಿನ ಸೂಡಿ ಗ್ರಾಮದಿಂದ ನಿರ್ಮಾಣಗೊಂಡ ರಸ್ತೆ ಸಂಪೂರ್ಣ ಕಳಪೆಯಾಗಿದ್ದು ಅಧಿಕಾರಿವರ್ಗ ಶಾಮೀಲಾಗಿ ರಸ್ತೆಗೆ ಕೇವಲ ಕಡಿಯನ್ನು ಉದುರಿಸಿ ವಾಹನಗಳಿಗೆ ಪ್ರಯಾಣಿಕರಿಗೆ ತೊಂದರೆಯನ್ನುಂಟು ಮಾಡಿದೆ ರಸ್ತೆ ನಿರ್ಮಾಣದ ವಹಿಸಬೇಕಾದ ಎಚ್ಚರಿಕೆ ಕ್ರಮಗಳನ್ನು ವಹಿಸದೆ ಕೇವಲ ಕಳಪೆಯಾಗಿ ನಿರ್ವಹಿಸುವಂತೆ ಸ್ಥಳೀಯ ಮತ್ತು ಇತರೆ ಕೆಳದರ್ಜೆಯ ಗುತ್ತಿಗೆದಾರರಿಗೆ ಕಾರ್ಯ ಒಪ್ಪಿಸಿ ಕಣ್ಣು ಮುಚ್ಚಿ ಕುಳಿತಿರುವ ಅಧಿಕಾರಿಗಳು ತ್ರೀಮ್ಯಾನ್ ಕಮಿಟಿ ರಚಿಸಿ ತಪಾಸಣೆಗೆ ವಹಿಸಬೇಕುಇಲ್ಲದೆ ಹೋದರೆ ಉಗ್ರ ಹೋರಾಟ ಮಾಡಲಾಗುವುದು
ಎಂದು ಕ್ಷೇತ್ರದ ಜನತೆ ಸತ್ಯದರ್ಶನ ಪತ್ರಿಕೆಗೆ ತಮ್ಮ ಪಿರಿಯಾದೆ ನೀಡಿದ್ದು ವರದಿಯಾದ ವಾರದೊಳಗೆ ಕಾರ್ಯಗತಗೊಳಿಸಿ ರಸ್ತೆಯನ್ನು ಉತ್ತಮಗೊಳಿಸುವಂತೆ ಆಗ್ರಹಿಸಿದ್ದಾರೆ ಸದರಿ ರಸ್ತೆ ಉತ್ತಮಗೊಳಿಸದೆ ಹೋದಲ್ಲಿ ಪ್ರತಿಭಟನೆ ನಡೆಸಲಾಗುವುದೆಂದು
ಡಿಎಸ್ಎಸ್ ಮುಖಂಡರು ಪತ್ರಿಕೆಯೊಂದಿಗೆ ಹಂಚಿಕೊಂಡಿದ್ದಾರೆ ಪ್ರತಿ ವಾಹನಗಳು ಡ್ಯಾನ್ಸ್ ಮಾಡುತ್ತಲೇ ಚಲಿಸಬೇಕಾದ ಪರಿಸ್ಥಿತಿ ಎದುರಾಗಿದೆ ಗರ್ಭಿಣಿ ಸ್ತ್ರೀಯರು ಹೆರಿಗೆಯಾದ ಎಷ್ಟು ಪ್ರಕರಣಗಳು ನಡೆದೆ ಬಗ್ಗೆ ವರದಿಯಾಗಿದೆ ಅಧಿಕಾರಿಗಳು ಕೂಡಲೇ ಎಚ್ಚೆತ್ತು ರಸ್ತೆ ಸುಧಾರಣೆಗೆ ಕ್ರಮ ಜಾರಿಗೆ ಪಡಿಸಬೇಕು ಇಲ್ಲದೆ ಹೋದರೆ ಕರ್ನಾಟಕ ರಕ್ಷಣಾ ವೇದಿಕೆ ಅಡಿಯಲ್ಲಿ ಉಗ್ರ ಹೋರಾಟ ಆರಂಭಿಸುತ್ತೆವೇ ಎಂದರು.
