Satya Darshana
ಬಿಸಿ ಬಿಸಿ ಸುದ್ದಿ
ಜಿಲ್ಲೆಬಿಸಿ ಬಿಸಿ ಸುದ್ದಿ

ದೇವರು ವರ ಕೊಟ್ಟರೂ ಪೂಜಾರಿ ಕೊಡಲಿಲ್ಲ ಎಂಬಂತಾಗಿದೆ ಸಾಲಗುಂದಾ ಸರ್ಕಾರಿ ಪ್ರೌಢಶಾಲೆ..

ಸತ್ಯದರ್ಶನ

ಸಿಂಧನೂರು : ಸಿಂಧನೂರು ತಾಲೂಕಿನ ಸಾಲಗುಂದಾ ಗ್ರಾಮದ  ದೇವರು ವರ ಕೊಟ್ಟರೂ ಪೂಜಾರಿ ಕೊಡಲಿಲ್ಲ ಎಂಬಂತಾಗಿದೆ ಸಾಲಗುಂದಾ ಸರ್ಕಾರಿ ಪ್ರೌಢಶಾಲೆ (ಆರ್‌ಎಂಎಸ್‌ಎ) ಶಾಲೆ ವ್ಯಥೆ. ಸುಸಜ್ಜಿತ ಕಟ್ಟಡ ನಿರ್ಮಾಣವಾಗಿ ಎರಡು ವರ್ಷ ಕಳೆದರೂ ಸ್ಥಳಾಂತರ ಭಾಗ್ಯವಿಲ್ಲದಾಗಿದೆ. ಶಾಲೆ ಹಿಂಬದಿಯಲ್ಲಿ ನಿರ್ಮಿಸಿದ ಚಿಕ್ಕದಾದ ಕೊಠಡಿಗಳಲ್ಲಿ ಪ್ರೌಢ ಶಿಕ್ಷಣ ಮುಂದುವರಿದಿದೆ. ಜಾಗದ ಕೊರತೆಯಿಂದ ಪ್ರಾಥಮಿಕ ಶಾಲೆ ಹಿಂಭಾಗದಲ್ಲಿ ಕೊಠಡಿಗಳನ್ನು ನಿರ್ಮಿಸಲಾಗಿದೆ. ಅಲ್ಲಿಗೆ ಹೋಗಬೇಕಾದರೆ ವಿದ್ಯಾರ್ಥಿಗಳು ಪ್ರಾಥಮಿಕ ಶಾಲೆ ಕೊಠಡಿ ಮೂಲೆಯಿಂದ ಹಿಂಬದಿಗೆ ಹೋಗಬೇಕು.

2017-18ನೇ ಸಾಲಿನಲ್ಲಿ ಕಲ್ಯಾಣ ಕರ್ನಾಟಕ ಅಭಿವೃದ್ಧಿ ಮಂಡಳಿಯಡಿ ಅನುದಾನ ನೀಡಲಾಗಿದೆ. ಪ್ರತಿ ಕೊಠಡಿಗೆ 12 ಲಕ್ಷ ರೂ. ನಂತೆ 60 ಲಕ್ಷ ರೂ.ನಷ್ಟು ಖರ್ಚು ಮಾಡಲಾಗಿದೆ. ಗ್ರಾಮದ ಹೊರಭಾಗದಲ್ಲಿ ಹೈಸ್ಕೂಲ್‌ ಗಾಗಿಯೇ 5 ಸುಸಜ್ಜಿತ ಕೊಠಡಿಗಳು ತಲೆ ಎತ್ತಿವೆ. ನರೇಗಾ ಯೋಜನೆಯಡಿ 20 ಲಕ್ಷ ರೂ. ಮೀಸಲಿಟ್ಟ ಶಾಲೆ ಸುತ್ತಲೂ ಕಾಂಪೌಂಡ್‌ ನಿರ್ಮಿಸಿ ಗೇಟ್‌ ಅಳವಡಿಸಲಾಗಿದೆ. ಶೌಚಾಲಯಕ್ಕೆ 2 ಲಕ್ಷ ರೂ., ಬಿಸಿಯೂಟ ಕೊಠಡಿ 3 ಲಕ್ಷ ರೂ. ಖರ್ಚು ಮಾಡಲಾಗಿದೆ. ಸಾಕಷ್ಟು ಅನುದಾನ ವಿನಿಯೋಗಿಸಿದ್ದರೂ ಇಲ್ಲಿ 8,9 ಮತ್ತು 10ನೇ ತರಗತಿ ಓದುತ್ತಿರುವ 299 ವಿದ್ಯಾರ್ಥಿಗಳಿಗೆ ಹೊಸ ಶಾಲೆಗೆ ಪ್ರವೇಶ ಭಾಗ್ಯ ದೊರೆಯದಾಗಿದೆ.

ಗ್ರಾಮದ ಹನುಮಂತಮ್ಮ ಗೋವಿಂದಪ್ಪ ದಾಸರ ಕುಟುಂಬ ಶಾಲೆಗಾಗಿ 1 ಎಕರೆ 10 ಗುಂಟೆ ಜಮೀನು ದಾನ ನೀಡಿದೆ. ಇದಕ್ಕೆ ಪೂರಕವಾಗಿ ಅವರ ಕುಟುಂಬದ ಹೆಸರಿಡುವುದಕ್ಕೆ ಸಂಬಂಧಿಸಿ ದಾನಪತ್ರದಲ್ಲಿ ನಮೂದಿಸಬೇಕಿತ್ತು. ಆ ಕೆಲಸ ಮಾಡಿಲ್ಲ. ಇಲಾಖೆ ಮಾಡಿದ ಎಡವಟ್ಟಿನಿಂದ ದಾನಿಗಳಿಗೆ ತೊಂದರೆಯಾಗಿದೆ. ಹೊಸ ಕಟ್ಟಡ ನಿರ್ಮಿಸಿದ ನಂತರ ಕಾಂಪೌಂಡ್‌ಗೆ ಜಾಗ ದಾನಿಗಳ ಹೆಸರು ಹಾಕಲಾಗಿದೆ. ಶಾಲೆಗೆ ಹೆಸರಿಡಲು ಇಲಾಖೆ ನಿರ್ಣಯ ಕೈಗೊಂಡಿಲ್ಲ. ಬದಲಿಗೆ ಸಮಸ್ಯೆ ಕುರಿತು ಮೇಲಾಧಿಕಾರಿಗಳಿಗೆ ಪತ್ರ ಬರೆದು ಕೈ ಚೆಲ್ಲಿ ಕುಳಿತಿದೆ.

Related posts

ಗಣೇಶ ಹಬ್ಬ:ಯಲಬುರ್ಗಾ, ಬೇವೂರ, ಕುಕನೂರಲ್ಲಿ ಮದ್ಯೆ ಮಾರಾಟ ನಿಷೇಧಿಸಿ ಆದೇಶ

satyadarshana

ಮೇಕೆದಾಟು ಯೋಜನೆ ಜಾರಿ ಬಗ್ಗೆ ಮನವರಿಕೆ ಮಾಡಿದ್ದೇವೆ; ಶೀಘ್ರವೇ ಡಿಪಿಆರ್​ಗೆ ಮಾನ್ಯತೆ: ಬಸವರಾಜ ಬೊಮ್ಮಾಯಿ

satyadarshana

ಎಸ್.ಸಿ.ಎಸ್.ಪಿ ಹಾಗೂ ಟಿ.ಎಸ್.ಪಿ. ಪ್ರಗತಿ ಪರಿಶೀಲನೆ ನಿಗದಿಪಡಿಸಿದ ಗುರಿ ಸಾಧಿಸಲು ಸೂಚನೆ

satyadarshana

Leave a Comment