Satya Darshana
ಬಿಸಿ ಬಿಸಿ ಸುದ್ದಿ
ಜಿಲ್ಲೆಬಿಸಿ ಬಿಸಿ ಸುದ್ದಿ

ಕನ್ನಡ ನಮ್ಮ ಉಸಿರಾಗಲಿ: ಕೊಡತಗೇರಿ

ಸತ್ಯ ದರ್ಶನ
ಗಜೇಂದ್ರಗಡ:   ಕನ್ನಡ ಭಾಷೆಯು ಸಾವಿರಾರು ವರ್ಷಗಳ ಇತಿಹಾಸ ಹೊಂದಿದ್ದು ಕನ್ನಡಿಗರ ಹೋರಾಟದ ಫಲವಾಗಿ ಕನ್ನಡ ನಾಡು ಉದಯವಾಗಿ ಇಂದಿಗೆ 66 ವರ್ಷಗಳು ಸಂದಿವೆ.
ಕನ್ನಡ ಭಾಷೆ ನಮ್ಮ ಉಸಿರಾಗಲಿ ಎಂದು ಕನರ್ಾಟಕ ರಕ್ಷಾಣಾ ವೇದಿಕೆ ಯುವಸೈನ್ಯ ರಾಜ್ಯಾಧ್ಯಕ್ಷರಾದ ಕೆ ಎಸ್ ಕೊಡತಗೇರಿ ಹೇಳಿದರು.

ಇಲ್ಲಿಗೆ ಸಮೀಪದ ಗೋಗೇರಿ ಗ್ರಾಮದಲ್ಲಿ ಕನ್ನಡ ರಾಜ್ಯೋತ್ಸವದ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಕನರ್ಾಟಕ ಏಕೀಕರಣಕ್ಕಾಗಿ ಹೋರಾಡಿದ ಹುತಾತ್ಮರನ್ನು ನಾವು ಸ್ಮರಿಸಬೇಕು. ಕನ್ನಡ ಭಾಷೆ ಸಂಸ್ಕೃತಿ ನೆಲ, ಜಲ ಗಡಿಗಳಿಗೆ ಧಕ್ಕೆಯಾದಾಗ ನಾವೆಲ್ಲರೂ ಒಗ್ಗೂಡಿ ಕನ್ನಡದ ಕೆಲಸಕ್ಕೆ ಮುಂದಾಗಬೇಕು ಎಂದರು.
ಪ್ರಾಸ್ತಾವಿಕವಾಗಿ ಮಾತನಾಡಿದ ಶಿಕ್ಷಕ ಆರ್ ಕೆ ಬಾಗವಾನ ಕನ್ನಡದ ನೆಲೆದ ಹಬ್ಬ ಈ ಕನ್ನಡ ರಾಜ್ಯೋತ್ಸವ ನಮಗೆಲ್ಲ ಸಂಭ್ರಮ ಸಡಗರದ ದಿನ. ಹಾಗೆಯೇ ನಾಡು-ನುಡಿಯ ಬಗ್ಗೆ ಗಂಭೀರವಾಗಿ ಚಿಂತನೆ ನಡೆಸುವ ದಿನವೂ ಆಗಿದೆ. ಕನ್ನಡತ್ವ ಮತ್ತು ಕನರ್ಾಟಕತ್ವದ ಪ್ರಜ್ಞೆ ಇಂದಿನ ಪೀಳಿಗೆಗೆ ಪರಿಚಯಿಸುವುದು ಅವಶ್ಯವಾಗಿದೆ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಮಲ್ಲಿಕಾಜರ್ುನ ಗಾರಗಿ ಮಾತನಾಡಿ ನಮ್ಮ ಚೆಲುವ ಕನ್ನಡನಾಡು ಕಲೆ, ಸಾಹಿತ್ಯ, ಸೌಂದರ್ಯದ ತವರೂರು ಪ್ರವಾಸಿಗನ್ನು ಕೈ ಬೀಸಿ ಕರೆಯುವ ನಮ್ಮ ನಾಡು ಹಲವು ವೈಶಿಷ್ಟ್ಯಗಳ ಆಗರವಾಗಿದೆ ಎಂದರು. ಎ ಪಿ ಎಂ ಸಿ ಮಾಜಿ ಉಪಾಧ್ಯಕ್ಷರಾದ ಹನಮಪ್ಪ ಹೊರಪೇಟಿ ಭುವನೇಶ್ವರಿ ದೇವಿಯ ಭಾವಚಿತ್ರಕ್ಕೆ ಮಾಲಾರ್ಪಣೆ ಮಾಡಿದರು. ಕಾರ್ಯಕ್ರಮದಲ್ಲಿ ಆಯ್ ಎಚ್ ಬಾಗವಾನ, ಕಳಕಪ್ಪ ಸೂಡಿ, ಹನಮಪ್ಪ ಮಾದರ, ಹುಸೇನಸಾಬ ಬಡಿಗೇರ, ಎಂ ಡಿ ಭೋಸಲೆ, ಕಳಕಯ್ಯ ಹಿರೇಮಠ, ಡಾ ಬಿ ಎಸ್ ಪಾಟೀಲ, ಮಲ್ಲಪ್ಪ ಭೋಸಲೆ, ಕಟ್ಟೆಪ್ಪ ಮಾದರ, ಇಮಾಮಸಾಬ ಬಾಗವಾನ, ಪಿಡಿಓ ಶರಣಪ್ಪ ನರೇಗಲ್ಲ, ಸದಾಶಿವನಗೌಡ ಪಾಟೀಲ ಇದ್ದರು ಶಿವಾಜಿ ಹೋರಪೆಟಿ ಕಾರ್ಯಕ್ರಮ ನಿರೂಪಿಸಿದರು, ಚಂದ್ರು ಗಾರಗಿ ವಂದಿಸಿದರು

Related posts

ಸಿಎಂ ಬೊಮ್ಮಾಯಿ ಚೊಚ್ಚಲ ಬಜೆಟ್‍ಗೆ ಕೌಂಟ್‍ಡೌನ್-ಚುನಾವಣಾ ಪೂರ್ವ ಬಜೆಟ್ ಮೇಲೆ ಹಲವು ನಿರೀಕ್ಷೆ

satyadarshana

ನಾಳೆಯಿಂದ ಕೊಪಣ ಮೀಡಿಯಾ ಫೆಸ್ಟ್-2೦24 ಜಿಲ್ಲೆಯಲ್ಲಿ ಪ್ರಪ್ರಥಮ ಬಾರಿಗೆ ಮಾದ್ಯಮ ಹಬ್ಬ

satyadarshana

ನೊಂದವರಿಗೆ ನ್ಯಾಯ ಒದಗಿಸುವುದು ಕಾನೂನಿನ ಮುಖ್ಯ ಉದ್ದೇಶ : ದಿವಾನಿ ನ್ಯಾಯಾಧೀಶ ಆದಿತ್ಯ ಬಿ. ಕಲಾ

satyadarshana

Leave a Comment