ಪುನೀತ್ ಹುಟ್ಟಿದಾಗ ಡಾ.ರಾಜ್ಕುಮಾರ್ರ ವೃತ್ತಿ ಜೀವನ ಉತ್ತುಂಗದಲ್ಲಿತ್ತು. ಪಾರ್ವತಮ್ಮ ರಾಜ್ಕುಮಾರ್ ಪುನೀತ್ರನ್ನು ಎತ್ತಿಕೊಂಡೇ ಚೆನ್ನೈ, ಬೆಂಗಳೂರು, ಹುಬ್ಬಳ್ಳಿ ಹೀಗೆ ಹಲವು ಕಡೆಗಳಲ್ಲಿ ಸಿನಿಮಾ ಕೆಲಸಗಳಿಗಾಗಿ ಸಂಚರಿಸುತ್ತಿದ್ದರು.
ಅಮ್ಮನ ಮುದ್ದಿನ ಮಗನಾದ ಪುನೀತ್, ಮಾಸ್ಟರ್ ಲೋಹಿತ್ ಆಗಿ ‘ಪ್ರೇಮದ ಕಾಣಿಕೆ’ ಚಿತ್ರದ ಮೂಲಕ ಬಾಲ ನಟನಾಗಿ ಚಿತ್ರರಂಗಕ್ಕೆ ಎಂಟ್ರಿಕೊಟ್ಟರು. ಭಾಗ್ಯವಂತ, ಬೆಟ್ಟದ ಹೂವು, ಚಲಿಸುವ ಮೋಡಗಳು, ಶಿವಮೆಚ್ಚಿದ ಕಣ್ಣಪ್ಪ, ಪರಶುರಾಮ್, ಯಾರಿವನು, ಭಕ್ತ ಪ್ರಹ್ಲಾದ, ವಸಂತ ಗೀತ ಸಿನಿಮಾಗಳಲ್ಲಿ ಬಾಲ ನಟರಾಗಿ ಮಿಂಚಿದರು. ‘ಬೆಟ್ಟದ ಹೂ’ ಚಿತ್ರದ ನಟನೆಗಾಗಿ ಅತ್ಯುತ್ತಮ ಬಾಲ ನಟ ರಾಷ್ಟ್ರ ಪ್ರಶಸ್ತಿಯನ್ನು ಸಹ ಪುನೀತ್ ಪಡೆದುಕೊಂಡಿದ್ದರು. 40ಕ್ಕೂ ಹೆಚ್ಚು ಸಿನಿಮಾಗಳಲ್ಲಿ ನಟಿಸಿದ್ದಾರೆ. ಹಲವು ಸಿನಿಮಾಗಳಿಗೆ ಹಾಡಿದ್ದಾರೆ.
1999ರಲ್ಲಿ ಅಶ್ವಿನಿ ಅವರ ಜೊತೆ ಪುನೀತ್ ವೈವಾಹಿಕ ಜೀವನಕ್ಕೆ ಕಾಲಿಟ್ಟರು. ವಂದಿತಾ, ಧೃತಿ ಎಂಬ ಇಬ್ಬರು ಹೆಣ್ಣು ಮಕ್ಕಳಿದ್ದಾರೆ.