ಸಿನಿಮಾ ಸುದ್ದಿ ರಾಜ್ಯಾದ್ಯಂತ ಬರೋಬ್ಬರಿ 300 ಚಿತ್ರಮಂದಿರಗಳಲ್ಲಿ ಸಿನಿಮಾ ತೆರೆಗೆ ಬರುತ್ತಿದೆ
ಮುಂಜಾನೆ ಐದು ಗಂಟೆಗೇ ಶೋ
ಸಾಮಾನ್ಯವಾಗಿ 10 ಗಂಟೆಯಿಂದ ಸಿನಿಮಾ ಪ್ರದರ್ಶನ ಕಾಣುತ್ತದೆ. ಆದರೆ, ‘ಭಜರಂಗಿ 2’ಗಾಗಿ ವಿಶೇಷ ಫ್ಯಾನ್ಸ್ ಶೋ ಆಯೋಜನೆ ಮಾಡಲಾಗಿದೆ. ಬೆಂಗಳೂರಿನ ಜೆ.ಪಿ. ನಗರದ ಸಿದ್ದೇಶ್ವರ ಚಿತ್ರಮಂದಿರ ಹಾಗು ಗೌಡನ ಪಾಳ್ಯದ ಶ್ರೀನಿವಾಸ ಥಿಯೇಟರ್ನಲ್ಲಿ ಮುಂಜಾನೆ 5 ಘಂಟೆಗೆ ಸಿನಿಮಾ ಪ್ರದರ್ಶನ ಕಾಣಲಿದೆ. ಫ್ಯಾನ್ಸ್ ಶೋಗಾಗಿ ಭರ್ಜರಿ ಪ್ಲ್ಯಾನ್ ನಡೆದಿದೆ. ಈ ಶೋಗೆ ಶಿವರಾಜ್ಕುಮಾರ್ ಹಾಗೂ ವಸಿಷ್ಠ ಸಿಂಹ ಆಗಮಿಸೋ ಸಾಧ್ಯತೆ ಇದೆ. ಗಾಂಧಿನಗರದ ಅನುಪಮ ಚಿತ್ರಂಮದಿರದಲ್ಲಿ 10 ಘಂಟೆಗೆ ಶೋ ಆರಂಭಆಗಲಿದೆ.
ಶಿವರಾಜ್ಕುಮಾರ್ ನಟನೆಯ ‘ಭಜರಂಗಿ 2’ ಸಿನಿಮಾ ರಿಲೀಸ್ಗೆ ಅದ್ದೂರಿಯಾಗಿ ಪ್ಲ್ಯಾನ್ ಮಾಡಿಕೊಳ್ಳಲಾಗಿದೆ. ಈಗಾಗಲೇ ಸಿನಿಮಾದ ಕಟೌಟ್ಗಳನ್ನು ಚಿತ್ರಮಂದಿರಗಳ ಎದುರು ನಿಲ್ಲಿಸಲಾಗಿದೆ. ಇದಕ್ಕೆ ಅಭಿಮಾನಿಗಳು ಹಾಲಿನ ಅಭಿಷೇಕ ಮಾಡಲಿದ್ದಾರೆ.
ಹರ್ಷ-ಶಿವಣ್ಣ ಕಾಂಬಿನೇಷನ್ನಲ್ಲಿ ಮೂರನೇ ಸಿನಿಮಾ
ಹಲವು ಕಾರಣಗಳಿಗಾಗಿ ‘ಭಜರಂಗಿ 2’ ಸಿನಿಮಾ ಮೇಲೆ ನಿರೀಕ್ಷೆ ಮೂಡಿದೆ. ಕೆಲವೇ ದಿನಗಳ ಹಿಂದೆ ಬಿಡುಗಡೆ ಆಗಿರುವ ಟ್ರೇಲರ್ ಕಂಡು ಫ್ಯಾನ್ಸ್ ಫಿದಾ ಆಗಿದ್ದಾರೆ. ಸೂಪರ್ ನ್ಯಾಚುರಲ್ ಕಥೆ, ಬೃಹತ್ ಸೆಟ್ಗಳು, ಕಲಾವಿದರ ಭಿನ್ನ ವಿಭಿನ್ನ ಗೆಟಪ್ಗಳು ಗಮನ ಸೆಳೆಯುತ್ತಿವೆ. ಶಿವರಾಜ್ಕುಮಾರ್ ಮತ್ತು ನಿರ್ದೇಶಕ ಎ. ಹರ್ಷ ಕಾಂಬಿನೇಷನ್ನಲ್ಲಿ ಮೂಡಿಬಂದಿರುವ ಮೂರನೇ ಸಿನಿಮಾ ಇದಾಗಿದ್ದು, ಸಾಕಷ್ಟು ಹೈಪ್ ಸೃಷ್ಟಿ ಮಾಡಿದೆ.
ಪಾತ್ರವರ್ಗ
ಶಿವರಾಜ್ಕುಮಾರ್ ಸಿನಿಮಾದಲ್ಲಿ ಹೀರೋ ಆಗಿ ನಟಿಸಿದ್ದಾರೆ. ಈ ಸಿನಿಮಾದಲ್ಲಿ ಹಿರಿಯ ನಟಿ ಶ್ರುತಿ, ಭಜರಂಗಿ ಲೋಕಿ, ಭಾವನಾ ಮೆನನ್, ಶಿವರಾಜ್ ಕೆ.ಆರ್. ಪೇಟೆ, ಚೆಲುವ ರಾಜು ಮುಂತಾದವರು ಅಭಿನಯಿಸಿದ್ದಾರೆ. ಈ ಚಿತ್ರಕ್ಕೆ ಅರ್ಜುನ್ ಜನ್ಯ ಸಂಗೀತ ನಿರ್ದೇಶನ ಮಾಡಿದ್ದಾರೆ. ರಘು ನಿಡುವಳ್ಳಿ ಸಂಭಾಷಣೆ ಬರೆದಿದ್ದಾರೆ. ಸ್ವಾಮಿ ಜೆ. ಗೌಡ ಛಾಯಾಗ್ರಹಣ, ದೀಪು ಎಸ್. ಕುಮಾರ್ ಸಂಕಲನದ ಜವಾಬ್ದಾರಿ ನಿಭಾಯಿಸಿದ್ದಾರೆ.
