Satya Darshana
ಬಿಸಿ ಬಿಸಿ ಸುದ್ದಿ
ಕ್ರೀಡೆಬಿಸಿ ಬಿಸಿ ಸುದ್ದಿ

ಐಸಿಸಿ ಟಿ20 ವಿಶ್ವಕಪ್ ಟೂರ್ನಿಯ ಉದ್ಘಾಟನಾ ಪಂದ್ಯದಲ್ಲಿ ಆಸೀಸ್‌-ಆಫ್ರಿಕಾ ಮುಖಾಮುಖಿ

ಅಬುಧಾಬಿ(ಅ.23): ಬಲಿಷ್ಠ ಆಸ್ಪ್ರೇಲಿಯಾ ಹಾಗೂ ದಕ್ಷಿಣ ಆಫ್ರಿಕಾ ನಡುವಿನ ಸೆಣಸಾಟದೊಂದಿಗೆ 7ನೇ ಆವೃತ್ತಿಯ ಐಸಿಸಿ ಟಿ20 ವಿಶ್ವಕಪ್‌ನ ಸೂಪರ್‌-12 ಹಂತಕ್ಕೆ ಚಾಲನೆ ದೊರೆಯಲಿದೆ. ಆಸ್ಪ್ರೇಲಿಯಾ ಲಯದ ಸಮಸ್ಯೆ ಎದುರಿಸುತ್ತಿದ್ದು, ಆತ್ಮವಿಶ್ವಾಸದ ಅಲೆಯಲ್ಲಿ ತೇಲುತ್ತಿರುವ ದಕ್ಷಿಣ ಆಫ್ರಿಕಾದಿಂದ ಕಠಿಣ ಸವಾಲು ಎದುರಿಸಲಿದೆ.
ಚೊಚ್ಚಲ ಟಿ20 ವಿಶ್ವಕಪ್‌ ಗೆಲ್ಲಲು ಉಭಯ ತಂಡಗಳು ಪಣತೊಟ್ಟಿವೆ. ಆದರೆ ಆಸೀಸ್‌ ಇತ್ತೀಚಿಗೆ ಬಾಂಗ್ಲಾದೇಶ, ವೆಸ್ಟ್‌ಇಂಡೀಸ್‌, ನ್ಯೂಜಿಲೆಂಡ್‌, ಭಾರತ ಹಾಗೂ ಇಂಗ್ಲೆಂಡ್‌ ವಿರುದ್ಧ ದ್ವಿಪಕ್ಷೀಯ ಟಿ20 ಸರಣಿಗಳನ್ನು ಸೋತು ಆಘಾತಕ್ಕೊಳಗಾಗಿದೆ. ತಂಡದ ಪ್ರಮುಖ ಆಟಗಾರರು ಬಹುತೇಕ ಸರಣಿಗಳಲ್ಲಿ ಆಡಿರಲಿಲ್ಲ. ಹೀಗಾಗಿ ಆಸ್ಪ್ರೇಲಿಯಾ ಕೇವಲ 5 ಗೆಲುವು ಸಾಧಿಸಿ,13 ಸೋಲು ಕಂಡಿತ್ತು. ಬಹುತೇಕ ಆಟಗಾರರು ಸರಿಯಾದ ಅಭ್ಯಾಸವಿಲ್ಲದೆ ವಿಶ್ವಕಪ್‌ನಲ್ಲಿ ಆಡಲಿದ್ದಾರೆ.
ಆರಂಭಿಕ ಬ್ಯಾಟರ್‌ ಹಾಗೂ ಬ್ಯಾಟಿಂಗ್‌ ಆಧಾರಸ್ತಂಭ ಎನಿಸಿರುವ ಡೇವಿಡ್‌ ವಾರ್ನರ್‌ ತೀರಾ ಕಳಪೆ ಲಯದಲ್ಲಿದ್ದು, ತಂಡದ ತಲೆನೋವಿಗೆ ಕಾರಣವಾಗಿದೆ. ವಾರ್ನರ್‌ರನ್ನು ಹೊರಗಿಟ್ಟು ಆಡುವ ಧೈರ್ಯವೂ ಆಸೀಸ್‌ಗೆ ಇದ್ದಂತ್ತಿಲ್ಲ. ಇನ್ನು ನಾಯಕ ಆ್ಯರೋನ್‌ ಫಿಂಚ್‌ ಮಂಡಿ ಶಸ್ತ್ರಚಿಕಿತ್ಸೆ ಬಳಿಕ ಸಂಪೂರ್ಣವಾಗಿ ಚೇತರಿಸಿಕೊಂಡಂತೆ ಕಾಣುತ್ತಿಲ್ಲ. ಉಪನಾಯಕ ಪ್ಯಾಟ್‌ ಕಮಿನ್ಸ್‌ ಸಹ ಐಪಿಎಲ್‌ಗೆ ಗೈರಾದ ಕಾರಣ ಅವರೂ ಲಯದಲಿಲ್ಲ. ಸ್ಟೀವ್‌ ಸ್ಮಿತ್‌ , ಗ್ಲೆನ್‌ ಮ್ಯಾಕ್ಸ್‌ವೆಲ್‌ , ಮಿಚೆಲ್ ಸ್ಟಾರ್ಕ್ ಮೇಲೆ ತಂಡ ಹೆಚ್ಚು ಅವಲಂಬಿತಗೊಂಡಿದೆ.
ಇನ್ನು ದಕ್ಷಿಣ ಆಫ್ರಿಕಾ ವಿಂಡೀಸ್‌, ಐರ್ಲೆಂಡ್‌ ಹಾಗೂ ಶ್ರೀಲಂಕಾ ವಿರುದ್ಧ ಸತತ 3 ಸರಣಿಗಳನ್ನು ಜಯಿಸಿತ್ತು. ಅಲ್ಲದೇ 2 ಅಭ್ಯಾಸ ಪಂದ್ಯಗಳಲ್ಲೂ ಜಯಭೇರಿ ಬಾರಿಸಿತ್ತು. ಫಾಫ್‌ ಡು ಪ್ಲೆಸಿ ಅನುಪಸ್ಥಿತಿಯಲ್ಲೂ ತಂಡ ಮಿಂಚಲು ಎದುರು ನೋಡುತ್ತಿದೆ. ಕ್ವಿಂಟನ್‌ ಡಿ ಕಾಕ್‌ ವರ್ಸಸ್‌ ಸ್ಟಾರ್ಕ್‌, ರಬಾಡ ವರ್ಸಸ್‌ ವಾರ್ನರ್ ನಡುವಿನ ಪೈಪೋಟಿಯನ್ನು ಕಣ್ತುಂಬಿಕೊಳ್ಳಲು ಕ್ರಿಕೆಟ್ ಅಭಿಮಾನಿಗಳು ತುದಿಗಾಲಿನಲ್ಲಿ ನಿಂತಿದ್ದಾರೆ.
ಇನ್ನೊಂದು ಕಡೆ ಆಸ್ಟ್ರೇಲಿಯಾ ಆಟಗಾರರು ಲಯ ಕಳೆದುಕೊಂಡಿದ್ದರೂ, ಯಾವುದೇ ಕ್ಷಣದಲ್ಲಾದರೂ ತಿರುಗೇಟು ನೀಡುವ ಸಾಮರ್ಥ್ಯ ಹೊಂದಿದ್ದಾರೆ. ಫಿಂಚ್, ವಾರ್ನರ್ ಮಾತ್ರವಲ್ಲದೇ ಸ್ಟೀವ್ ಸ್ಮಿತ್, ಗ್ಲೆನ್ ಮ್ಯಾಕ್ಸ್‌ವೆಲ್, ಆಸ್ಟನ್ ಅಗರ್, ಮಾರ್ಕಸ್‌ ಸ್ಟೋಯ್ನಿಸ್, ಮಿಚೆಲ್ ಸ್ಟಾರ್ಕ್‌ ಅವರನ್ನು ಹೆಚ್ಚಾಗಿ ನೆಚ್ಚಿಕೊಂಡಿದೆ.

 

ಪಂದ್ಯ: ಮಧ್ಯಾಹ್ನ 3.30ಕ್ಕೆ,

 

 

Related posts

ದೇಶಿ ಉಡುಪಿನಲ್ಲಿ ಕುಂಭಹೊತ್ತು ಎತ್ತಿನ ಬಂಡಿಯಲ್ಲಿ ಬಂದ ವಿದ್ಯಾರ್ಥಿಗಳು

satyadarshana

ನಮ್ಮದು ನುಡಿದಂತೆ ನಡೆದ ಸರ್ಕಾರ: ಮುಖ್ಯಮಂತ್ರಿ ಸಿದ್ಧರಾಮಯ್ಯ

satyadarshana

70 ವರ್ಷಗಳಲ್ಲಿ ಆಗದ ಅಭಿವೃದ್ಧಿ 10 ವರ್ಷದಲ್ಲಿ ಆಗಿದೆ : ಡಾ. ಕ್ಯಾವಟರ್

satyadarshana

Leave a Comment