Satya Darshana
ಬಿಸಿ ಬಿಸಿ ಸುದ್ದಿ
ಬಿಸಿ ಬಿಸಿ ಸುದ್ದಿರಾಜ್ಯ

ಪೊಲೀಸ್ ಹುತಾತ್ಮರ ಸ್ಮಾರಕಕ್ಕೆ ಹೂಗುಚ್ಛ ಸಮರ್ಪಿಸಿದ. ಸಿಎಂ ಬಸವರಾಜ್ ಬೊಮ್ಮಾಯಿ

ಸತ್ಯದರ್ಶನ

ಸುದ್ದಿಮೂಲ : ಹುಬ್ಬಳ್ಳಿ ಹಳೇ ಸಿ.ಆರ್ ಮೈದಾನದಲ್ಲಿ ಆಯೋಜಿಸಲಾದ ಪೊಲೀಸ್ ಸಂಸ್ಮರಣ ದಿನಾಚರಣೆಯಲ್ಲಿ ಪಾಲ್ಗೊಂಡು ಪೊಲೀಸ್ ಹುತಾತ್ಮರ ಸ್ಮಾರಕಕ್ಕೆ ಹೂಗುಚ್ಛ ಸಮರ್ಪಿಸಿ ಅವರು ಮಾತನಾಡಿದರು. ವಿಶ್ವದ ಹಲವು ರಾಷ್ಟ್ರಗಳು ಆಂತರಿಕ ಕ್ಷೋಭೆ, ಭಯೋತ್ಪಾದಕರ ಕೈಗೆ ಸಿಲುಕಿ ಅಲ್ಲಿನ ಮನುಷ್ಯರ ಬದುಕು ಶಾಂತಿಯುತವಾಗಿಲ್ಲ.
ರಾಷ್ಟ್ರದ ಆಂತರಿಕ ಭದ್ರತೆ ಹಾಗೂ ಶಾಂತಿಪಾಲನೆಗೆ ತಮ್ಮ ಪ್ರಾಣ ನೀಡಿದ ಪೊಲೀಸ್ ಹುತಾತ್ಮರನ್ನು ಸ್ಮರಿಸುವ ದಿನ ಇಂದಿನದಾಗಿದೆ. ದೇಶದ ಪ್ರಗತಿಗೆ ಶಾಂತಿ ಅವಶ್ಯಕ. ಶಾಂತಿ ಇಲ್ಲದಿದ್ದರೆ ದೇಶದ ಪ್ರಗತಿ ಇಲ್ಲ. ರಾಷ್ಟ್ರದ ಆಂತರಿಕ ಭದ್ರತೆ ಹಾಗೂ ಪ್ರಗತಿಗೆ ಪೊಲೀಸ್ ಸೇವೆ ಅಗತ್ಯ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.
ಪೊಲೀಸರು ಕುಟುಂಬವನ್ನು ಮರೆತು ಹಗಲಿರುಳು ದುಡಿಯುತ್ತಾರೆ. ರಾಜ್ಯ ಸರ್ಕಾರ ಪೊಲೀಸರಿಗೆ ದೊರಕಬೇಕಾದ ಸವಲತ್ತುಗಳನ್ನು ನೀಡಲು ಸಿದ್ದವಿದೆ. ಇಲಾಖೆಯಲ್ಲಿ ನೆಲೆಗುದಿಗೆ ಬಿದ್ದ ಹಲವು ಯೋಜನೆಗಳನ್ನು ಪ್ರಾರಂಭಿಸಿದ್ದೇವೆ. ಪೊಲೀಸರ ಸೇವೆ ಉತ್ತಮ ಗೊಳಿಸಲು ಪ್ರಯತ್ನ ಮಾಡಲಾಗಿದೆ.
ಆಫಿಸರ್ ಆನ್ ಕ್ರೈಮ್ ಹುದ್ದೆಗಳನ್ನು ಸೃಜಿಸಿ ನೇಮಕಾತಿ ಮಾಡಿಕೊಳ್ಳಲಾಗುತ್ತಿದೆ. ಈಗಾಗಲೇ 10 ಸಾವಿರ ಪೊಲೀಸ್ ವಸತಿ ಗೃಹಗಳನ್ನು ನಿರ್ಮಿಸಲಾಗಿದೆ. ಮುಂದಿನ ವರ್ಷದಲ್ಲಿ 11 ಸಾವಿರ ಮನೆ ನಿರ್ಮಾಣಕ್ಕೆ ಯೋಜಿಸಲಾಗಿದೆ. ಪೊಲೀಸ್‍ರು ಹೆಣ್ಣುಮಕ್ಕಳ ಸುರಕ್ಷತೆಗೆ ಆಧ್ಯತೆ ನೀಡಬೇಕು.ಪೊಲೀಸ್ ಠಾಣೆಗಳು ಜನಸ್ನೇಹಿ ಆಗಬೇಕು. ಕಾನೂನಿಗೆ ಬದ್ದವಾಗಿ ಕೆಲಸ ನಿರ್ವಹಿಸಬೇಕು. ಪ್ರತಿ ಕಾಲೇಜಿನಲ್ಲಿ ಹೆಣ್ಣುಮಕ್ಕಳಿಗೆ ಸ್ವರಕ್ಷಣೆಗೆ ತರಬೇತಿ ನೀಡಲಾಗುವುದು ಎಂದರು.
ವಿಧಾನ್ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ, ಕೈಮಗ್ಗ, ಜವಳಿ, ಸಕ್ಕರೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಶಂಕರಪಾಟೀಲ ಮುನೇನಕೊಪ್ಪ, ಬಾಲ ವಿಕಾಸ ಅಕಾಡಮಿ ಅಧ್ಯಕ್ಷ ಈರಣ್ಣ ಜಡಿ, ಹುಡಾ ಆಯುಕ್ತ ನಾಗೇಶ್ ಕಲಬುರ್ಗಿ, ಹೆಚ್ಚುವರಿ ಪೊಲೀಸ್ ಮಹಾ ನಿರ್ದೇಶಕ ಪ್ರತಾಪ್ ರೆಡ್ಡಿ, ಶಾಸಕ ಪ್ರಸಾದ್ ಅಬ್ಬಯ್ಯ, ಜಿಲ್ಲಾಕಾರಿ ನಿತೇಶ್ ಪಾಟೀಲ್, ನೈರುತ್ಯ ರೈಲ್ವೇ ಪ್ರಧಾನ ವ್ಯವಸ್ಥಾಪಕ ಸಂಜೀವ್ ಕುಮಾರ್, ಆರ್.ಪಿ.ಎಫ್ ಐಜಿಪಿ ಅಲೋಕ್ ಕುಮಾರ್, ಉಪ ಪೊಲೀಸ್ ಆಯುಕ್ತ ರಾಮರಾಜನ್, ಪಾಲಿಕೆ ಆಯುಕ್ತ ಡಾ.ಸುರೇಶ್ ಇಟ್ನಾಳ್,
ಸಂಚಾರ ಸಹಾಯಕ ಪೆÇಲೀಸ್ ಆಯುಕ್ತ ಎಮ್.ಎಸ್.ಹೊಸಮನಿ, ಪೊಲೀಸ್ ಇನ್ಸ್‍ಪೆಕ್ಟರ್ ಶ್ಯಾಮರಾವ್, ಸಬ್.ಇನ್ಸ್ಪೆಕ್ಟರ್ ಸಜ್ಜನ್, ಸಹಾಯಕ ಸಬ್ ಇನ್ಸ್‍ಪೆಕ್ಟರ್ ಮಹಾದೇವ್ ಅಥಣಿ,ಪೊಲೀಸ್ ಕಾನ್ಸ್ ಟೆಬಲ್‍ಗಳಾದ ಆನಂದ ಕೆ ದೇಶಪಾಂಡೆ, ಪದ್ಮಾವತಿ ನವಲಗುಂದ, ಪ್ರಭುಲಿಂಗ್ ಗುಬ್ಟೆ, ನಿವೃತ್ತ ಡಿ.ಐ.ಜಿ ರವಿ ನಾಯಕ್, ಮಾಜಿ ಲೋಕಸಭಾ ಸದಸ್ಯ ಐ.ಜಿ.ಸನದಿ, ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಗಣಪತಿ ಗಂಗೊಳ್ಳಿ ಸೇರಿದಂತೆ ಇತರೆ ಗಣ್ಯರು ಪೊಲೀಸ್ ಹುತಾತ್ಮರ ಸ್ಮಾರಕಕ್ಕೆ ಹೂಗುಚ್ಛ ಸಮಪರ್ಪಿಸಿದರು.
ಪೆÇಲೀಸ್ ಆಯುಕ್ತ ಲಾಭುರಾಮ್ ಪೊಲೀಸ್ ಹುತಾತ್ಮರ ಸ್ಮಾರಕಕ್ಕೆ ಹೂಗುಚ್ಛ ಸಮಪರ್ಪಿಸಿ ದೇಶದಾಂತ್ಯ ಹುತಾತ್ಮರಾದ ಪೊಲೀಸರ ಹೆಸರನ್ನು ಓದಿದರು. ಅಕ್ಟೋಬರ್ 1 ರಿಂದ ಆಗಸ್ಟ್ 31 ರವರೆಗೆ ದೇಶದಲ್ಲಿ 377 ಪೊಲೀಸರು ಕರ್ತವ್ಯ ಸಮಯದಲ್ಲಿ ಹುತಾತ್ಮರಾಗಿದ್ದಾರೆ. ಕರ್ನಾಟಕದಲ್ಲಿ 16 ಪೆÇಲೀಸರು ವೀರ ಮರಣ ಹೊಂದಿದ್ದಾರೆ.
ಹುತಾತ್ಮರಾದವರು: ಎ.ಎಸ್.ಐಗಳಾದ ಮಾರುತಿ ಜಿ, ರಂಗಣ್ಣ, ನಾರಾಯಣ ನಾಯ್ಕ್, ರಮೇಶ್.ಎಸ್, ಎಮ್.ಎನ್.ಮೂರ್ತಿ, ನಟರಾಜ ಎಸ್.ಎ. ಪೊಲೀಸ್ ಹಡ್ ಕಾನ್ಸಟೇಬಲ್ ಗಳಾದ ವೆಂಕಟೇಶ. ಡಿ.ಸಿ, ಬಿ.ತಿಮ್ಮಪ್ಪ, ಶಾಂತಕುಮಾರ್, ಹೆಚ್.ಎಂ.ಶಿವಕುಮಾರ್, ಮಲ್ಲಪ್ಪ, ಸಿದ್ದರಾಜ ನಾಯ್ಕ್, ಮದುಸೂಧನ್, ಗೌತಮ್ ಬುದ್ದ, ಪೊಲೀಸ್ ಕಾನ್ಸ್‍ಟೇಬಲ್‍ಗಳಾದ ಚೇತನ್, ರಾಮಾಚಾರಿ.
ಸಹಾಯಕ ಪೊಲೀಸ್ ಆಯುಕ್ತೆ ಅನುಷಾ.ಜಿ ಪೊಲೀಸ್ ತುಕಡಿಯ ಪರೇಡ್ ನೇತೃತ್ವ ವಹಿಸಿದ್ದರು.

 

 

 

Related posts

ಸೋಮವಾರದಿಂದ ಎಲ್ಲಾ ಮಾದರಿಯ ಪ್ರಾಥಮಿಕ ಮತ್ತು ಪ್ರೌಢ ಶಾಲೆಗಳು ಆರಂಭವಾಗಲಿವೆ. ಮಕ್ಕಳಿಗೆ ಗುಲಾಬಿ ಹೂ, ಚಾಕೊಲೇಟ್‌ ನೀಡಿ ಸ್ವಾಗತ:

satyadarshana

ಪ್ರಪಂಚದಲ್ಲಿಯೇ ದೊಡ್ಡ ಪ್ರಜಾಪ್ರಭುತ್ವ ರಾಷ್ಟ್ರ ಭಾರತ. -ಪ್ರಾ. ಮಾದಿ.

satyadarshana

ಅಧಿಕಾರಿಗಳೊಂದಿಗೆ ಸಭೆ: ಮುಂಗಾರು ಹಂಗಾಮಿನ ಪ್ರಗತಿ ಪರಿಶೀಲನೆ.

satyadarshana

Leave a Comment