ಗಜೇಂದ್ರಗಡ. ಸತ್ಯದರ್ಶನ
ಇಂದು ದಿನಾಂಕ 19.10.2021 ರಂದು ಗಜೇಂದ್ರಗಡ ನಗರದಲ್ಲಿ ಪ್ರವಾದಿ ಮೊಹಮ್ಮದ್ ಪೈಗಂಬರ್ ಅವರ ಜಯಂತಿಯ ಪ್ರಯುಕ್ತ ಸಮಾಜ ಸೇವಕರಾದ ಶ್ರೀ ಅಶೋಕ್ ಬಾಗಮಾರ ಹಾಗೂ ಶ್ರೀ ಮಕ್ತುಮ್ ಸಾಬ್ ವಾಯ್ ಮುಧೋಳ (ಸಾಗರ್) ಅವರು ಮತ್ತು ಸಮಾಜದ ಮುಖಂಡರು ಹಾಗೂ ಸಮಾಜ ಬಾಂಧವರು ಹಾಲು ವಿತರಣೆ ಮಾಡಿದರು
ಪ್ರವಾದಿ ಮುಹಮದ್ ಅವರ ಜನ್ಮದಿನವಾದ ಮಿಲಾದ್- ಉನ್- ನಬಿ ಸಂದರ್ಭದಲ್ಲಿ ಎಲ್ಲ ನಾಗರಿಕರಿಗೆ, ವಿಶೇಷವಾಗಿ ಮತ್ತು ನಮ್ಮ ನಾಡಿನ ಜನತೆಗೆ ನಮ್ಮ ಮುಸ್ಲಿಂ ಸಹೋದರ-ಸಹೋದರಿಯರಿಗೆ ಶುಭಾಶಯಗಳು. ಪೈಗಂಬರ ಸಾರ್ವತ್ರಿಕವಾದ ಸಹೋದರತ್ವ ಮತ್ತು ಸಹಾನುಭೂತಿಯ ಸಂದೇಶವು ಎಲ್ಲರ ಯೋಗಕ್ಷೇಮಕ್ಕಾಗಿ ಕೆಲಸ ಮಾಡಲು ನಮಗೆ ಪ್ರೇರಣೆ ನೀಡಲಿ
ಮಿಲಾದಗ-ಉನ್-ನಬಿಯ ಶುಭಾಶಯಗಳು. ಪ್ರವಾದಿ ಮಹಮ್ಮದ್ ಅವರ ಆಲೋಚನೆಗಳಿಂದ ಪ್ರೇರಿತರಾಗಿ ಈ ದಿನ ಸಮಾಜದಲ್ಲಿ ಸಾಮರಸ್ಯ ಮತ್ತು ಸಹಾನುಭೂತಿಯ ಮನೋಭಾವವನ್ನು ಮತ್ತಷ್ಟು ಹೆಚ್ಚಿಸಲಿ. ಸುತ್ತಲೂ ಶಾಂತಿ ಇರಲಿ ಎಂದು ಅಶೋಕ್ ಬಾಗಮಾರ ಶುಭಕೋರಿದರು
