Satya Darshana
ಬಿಸಿ ಬಿಸಿ ಸುದ್ದಿ
ಜಿಲ್ಲೆ

ಕಲ್ಯಾಣ ಕರ್ನಾಟಕ ಮಾನವ ಸಂಪನ್ಮೂಲ ಕೃಷಿ ಹಾಗೂ ಸಾಂಸ್ಕೃತಿಕ ಸಂಘದಿಂದ ನೀಡಿದ ಸ್ಮಾರ್ಟ್ ಕ್ಲಾಸನ್ನು ಹಾಲಪ್ಪ ಆಚಾರ್ ಉದ್ಘಾಟಿಸಿದರು

ಸುದ್ದಿಮೂಲ ಸತ್ಯದರ್ಶನ

ಯಲಬುರ್ಗಾ.ಇಂದು ವಜ್ರಬಂಡಿ ಸರ್ಕಾರಿ ಪ್ರೌಢಶಾಲೆಯಲ್ಲಿ ಕಲ್ಯಾಣ ಕರ್ನಾಟಕ ಮಾನವ ಸಂಪನ್ಮೂಲ ಕೃಷಿ ಹಾಗೂ ಸಾಂಸ್ಕೃತಿಕ ಸಂಘದಿಂದ ನೀಡಿದ ಸ್ಮಾರ್ಟ್ ಕ್ಲಾಸನ್ನು ಮಾನ್ಯ ಶ್ರೀ ಹಾಲಪ್ಪ ಬಸಪ್ಪ ಆಚಾರ್ ಗಣಿ ಮತ್ತು ಭೂವಿಜ್ಞಾನ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ, ಹಿರಿಯ ನಾಗರಿಕರ ಸಬಲೀಕರಣ ಇಲಾಖೆ ಸಚಿವರು ಹಾಗೂ ಕಲ್ಯಾಣ ಕರ್ನಾಟಕ ಆಡಳಿತ ಮಂಡಳಿಯ ಸದಸ್ಯರಾದ ಶ್ರೀ ಪ್ರಭುರಾಜ್ ಸಿದ್ರಾಮಪ್ಪ ಕಲಬುರ್ಗಿ ಸರ್ ಉದ್ಘಾಟಿಸಿದರು. ಕಾರ್ಯಕ್ರಮದಲ್ಲಿ ಯಲಬುರ್ಗಾ ತಾಲೂಕಿನ ಕ್ಷೇತ್ರಶಿಕ್ಷಣಾಧಿಕಾರಿಗಳಾದ ಶ್ರೀ ಮೌನೇಶ ಬಡಿಗೇರ ,ಕುಕನೂರು ತಾಲೂಕಿನ ವಿಕಾಸ ಅಕಾಡೆಮಿ ಸಂಚಾಲಕರಾದ ಶ್ರೀ ಸಿದ್ದು ಉಳಾಗಡ್ಡಿ, ತಾಲೂಕು ಸಲಹಾ ಸಮಿತಿ, ಸದಸ್ಯರಾದ ಶೇಖರಗೌಡ ಮಾಲಿಪಾಟೀಲ್,ಅಯ್ಯನಗೌಡ ಕೆಂಚಮ್ಮನವರ, ಮತ್ತು ಜಿಲ್ಲಾ ಸಂಚಾಲಕರಾದ ನೇತ್ರಾವತಿ ಕುಂಬಾರ, ತಾಲೂಕು ಸಂಯೋಜಕರಾದ ಯಮನೂರಪ್ಪ ರಗಡದ, ಶಾರದಾ ಹೂಗಾರ, ರವಿಚಂದ್ರ ಹೊಸಮನಿ, ಮಲ್ಲೇಶ್, ಬಸವರಾಜ ಅಳ್ಳಳ್ಳಿ, ಸವಿತಾ ಭಾವಿಮನಿ, ಉಪಸ್ಥಿತರಿದ್ದರು.ಹಾಗೂ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು, ಅಧ್ಯಕ್ಷರು, ಸರ್ವ ಸದಸ್ಯರು, ಶಾಲಾ ಸಿಬ್ಬಂದಿ ವರ್ಗ, ಎಸ್ ಡಿ ಎಮ್ ಸಿ , ಅಧ್ಯಕ್ಷರು, ಸದಸ್ಯರು, ಗ್ರಾಮದ ಗುರುಹಿರಿಯರು,ಮಖಂಡರು.ಭಾಗವಹಿಸಿದ್ದರು.

 ವರದಿ. ರವಿ ಹೊಸಮನಿ

Related posts

ಗದಗ ಜಿಲ್ಲೆಯ ಪ್ರಮುಖ ಸ್ಥಳಗಳಲ್ಲಿ ಕೋಟಿ ಕಂಠ ಗಾಯನ ಆಯೋಜಿಸಿ ಯಶಸ್ವಿಗೊಳಿಸಿ> ಜಿಲ್ಲಾಧಿಕಾರಿ ವೈಶಾಲಿ ಎಂ.ಎಲ್ಅಧಿಕಾರಿಗಳಿಗೆ ಕರೆ

satyadarshana

ಮಹಿಳೆಯರು ಕ್ರೀಯಾಶೀಲ ಗುಣಗಳನ್ನು ಬೆಳೆಸಿಕೊಳ್ಳಿ : ಡಾ. ಜ್ಯೋತಿ

satyadarshana

ಮಾರ್ಚ 10 ರಂದು ಗ್ರಾಮೀಣಾಭಿವೃದ್ಧಿ ಪಂಚಾಯತರಾಜ್ ವಿಶ್ವವಿದ್ಯಾಲಯದ ಮೂರನೇ ಘಟಿಕೋತ್ಸವ ರಾಜ್ಯಪಾಲರಾದ ಥಾವರಚಂದ್ ಗೆಹ್ಲೋಟ ಅವರಿಂದ ಗೌರವ ಡಾಕ್ಟರೇಟ ಪದವಿ ಪ್ರಧಾನ

satyadarshana

Leave a Comment