ಸುದ್ದಿಮೂಲ ಸತ್ಯದರ್ಶನ
ಗಜಂದ್ರಗಡ. ರಾಜ್ಯದಲ್ಲಿ ನಡೆಯುತ್ತಿರುವ ಹಿಂದೂ ದೇವಾಲಯಗಳ ತೆರವು ಕಾರ್ಯಕ್ರಮವನ್ನು ವಿರೋಧಿಸಿ ಗದಗ ಜಿಲ್ಲೆಯ ಸೂಡಿ ಗ್ರಾಮದ ಭಜರಂಗದಳದ ವತಿಯಿಂದ ಪ್ರತಿಭಟನೆ ಮುಖಾಂತರ ಅಧಿಕಾರಿಗಳಿಗೆ ಮನವಿ ಸಲ್ಲಿಸಿದರು.
ಸರ್ಕಾರ ಸುಪ್ರೀಂ ಕೊರ್ಟ್ ಆದೇಶವನ್ನೇ ನೆಪವಾಗಿಟ್ಟುಕೊಂಡು ತೆರವು ಕಾರ್ಯಾಗಾರ ಕೈಗೊಳ್ಳುವದು ಸರಿಯಲ್ಲ, ದೇವಾಲಯಗಳೆಂದರೆ ಕೇವಲ ಕಲ್ಲು ಮಣ್ಣು ಗೋಡೆಗಳಲ್ಲ ಹಿಂದೂಗಳ ಪಾಲಿಗೆ ಭಾವನಾತ್ಮಕ ವಿಷಯವಾಗಿದೆ, ಇಂದು ರಾಜ್ಯದಲ್ಲಿ ನಡೆದಂತ ಈ ದೇವಸ್ಥಾನಗಳ ನೆಲಸಮ ಕಾರ್ಯ ಕೋಟ್ಯಾಂತರ ಹಿಂದೂಗಳ ಭಾವನೆಗಳಿಗೆ ದಕ್ಕೆಯಾಗಿದೆ.
ಸುಪ್ರೀಂ ಕೋರ್ಟ್ ಕೂಡಾ ಸಂಚಾರಕ್ಕೆ ಅಡಚಣೆಯಾಗುವ ಪ್ರಾರ್ಥನಾ ಮಂದಿರಗಳನ್ನು ಪರಿಶೀಲನೆಗೊಳಿಸಿ, ಸಂಬಂಧಪಟ್ಟವರ ಭಾವನೆಗಳಿಗೆ ದಕ್ಕೆಯಾಗುವದಾದರೆ ಭಲವಂತವಾಗಿ ತೆರವು ಕಾರ್ಯ ಕೈಗೊಳ್ಳಬಾರದು, ಅಲ್ಲದೆ ಹಿಂದೂಗಳ ದೇವಸ್ಥಾನ, ಪ್ರಾರ್ಥನಾ ಮಂದಿರ, ಹಿಂದೂ ದೇವರ ಮೇಲೆ ಸತತವಾಗಿ ಪ್ರಹಾರ ನಡೆಯುತ್ತಿದ್ದರು ಕಣ್ಮುಚ್ಚಿ ಕುಳಿತು ಸರ್ಕಾರ ತನ್ನ ಪಕ್ಷಪಾತ ಧೋರಣೆಯಿಂದ ಹೊರಬರಬೇಕು. ಬರದೇ ಇದ್ದಲ್ಲಿ ಜಾಗೃತ ಹಿಂದೂ ಸಮಾಜ ಮತ್ತು ವಿಎಚ್ ಪಿ, ಭಜರಂಗದಳ ಎಂದಿಗೂ ಸಹಿಸಿಕೊಳ್ಳುವದಿಲ್ಲ. ಮುಂಬರುವ ದಿನಗಳಲ್ಲಿ ರಾಜ್ಯದಲ್ಲಿರುವ ಎಲ್ಲ ದೇವಸ್ಥಾನಗಳನ್ನು ಸಕ್ರಮಗೊಳಿಸುವ ಕ್ರಮ ಕೈಗೊಳ್ಳಬೇಕು ಇಲ್ಲದೆ ಹೋದಲ್ಲಿ ಸಂಘಟನೆಯ ಮುಖಾಂತರ ಉಗ್ರ ಹೋರಾಟ ಎದುರಿಸಬೇಕಾಗುತ್ತದೆ ಎಂದು ವಿಶ್ವ ಹಿಂದೂ ಪರಿಷದ್ ಭಜರಂಗದಳದ ತಾಲೂಕು ಕಾರ್ಯದರ್ಶಿ ಸಂಜೀವ್ ಜೋಶಿ ಮಾತನಾಡಿದರು.
ಈ ಸಂದರ್ಭದಲ್ಲಿ ಬಸವರಾಜ ಬಾರಕೇರ, ಸಂಜು ಧನೋಜಿ, ವೀರೇಶ ದಡ್ಡೆನವರ, ಮಂಜು ಅಲ್ಲದೆ ಭಜರಂಗ ದಳದ ನೂರಾರು ಕಾರ್ಯಕರ್ತರಿದ್ದರು.
