ವರದಿ: ಮಲ್ಲು ದೊಡ್ಡಮನಿ
ರಾಯಬಾಗ:22.08.2021
ತಮ್ಮ ಸಮಸ್ಯೆಗಳ ಕುರಿತು ಎಸ್ಸಿ. ಎಸ್ಟಿ ಕುಂದುಕೊರತೆ ಸಭೆಯಲ್ಲಿ ಪೊಲೀಸ್ ಇಲಾಖೆಯ ಗಮನಕ್ಕೆ ತಂದು
ಇಲಾಖೆಯ ಅಧಿಕಾರಿಗಳಿಗೆ ತಮ್ಮ ಅಳಲನ್ನು ದಲಿತ ನಾಯಕರು ತೋಡಿಕೊಂಡರು.
ರವಿವಾರ.22ರಂದು ತಾ.ಪಂ ಸಭಾಂಗಣದಲ್ಲಿ ಡಿ.ವಾಯ್.ಎಸ್.ಪಿ ಎಸ್.ವಿ.ಗಿರೀಶರವರ ಅಧ್ಯಕ್ಷತೆಯಲ್ಲಿ ಎಸ್ಸಿ.ಎಸ್ಟಿ ಕುಂದು ಕೊರತೆ ಸಭೆ ನಡೆಯಿತು.
*ಚಾಲನಾ ಪರವಾನಗಿ ನೀಡುವ ಸಲುವಾಗಿ ಆರ್.ಟಿ.ಓ.ಕ್ಯಾಂಪಗೇ ಮನವಿ*
ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಜನರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ತಾಲೂಕಿನಲ್ಲಿ ಸಾರಿಗೆ ಇಲಾಖೆಯ ಅಧಿಕಾರಿಗಳಿಗೆ ಚಾಲನಾ ಪರವಾನಿಗೆ ನೀಡುವ ಸಲುವಾಗಿ ಒಂದು ಕ್ಯಾಂಪ ನಡೆಸುವಂತೆ ದಲಿತ ನಾಯಕ ಮಹಾವೀರ ಐಹೊಳೆ ಇಲಾಖೆಯ ಅಧಿಕಾರಿಗಳಿಗೆ ಸೂಚಿಸಿದರು.
*ಬಾಲ ಕಾರ್ಮಿಕ ಪದ್ಧತಿ ಇನ್ನೂ ಜೀವಂತ ವಾಗಿದೆ ಇದನ್ನು ತಡೆಯಲು ಕೊರಿಕೆ*
ತಾಲೂಕಿನ ರಾಯಬಾಗ,ನಂದಿಕುರಳಿ,ಬ್ಯಾಕೂಡ ಗ್ರಾಮದಲ್ಲಿ ಕಾರ್ಯನಿರ್ವಹಿಸುತ್ತಿರುವ ಕ್ರಷರ್ಗಳಲ್ಲಿ ಬಾಲಕಾರ್ಮಿಕ ರನ್ನು ಕೆಲಸಕ್ಕೆ ಹಚ್ಚುತ್ತಿರುವುದನ್ನು ನಿಲ್ಲಿಸಬೇಕು ಎಂದು ಕಂಕಣವಾಡಿ ಗ್ರಾಮದ ಸಚೀನ ಸೊನಾವಣೆ ಆಗ್ರಹಿಸಿದರು.
*ವೇಶ್ಯಾವಾಟಿಕೆ ತಡೆಯಲು ಆಗ್ರಹ*
ತಾಲೂಕಿನ ಬೆಕ್ಕೇರಿ ಗ್ರಾಮದ ಲ್ಲಿ 16.17.18 ವಯಸ್ಸಿನ ಹೆಣ್ಣು ಮಕ್ಕಳನ್ನು ವೆಶ್ಯಾವಾಟಿಕೆಗೆ ತಳ್ಳುತ್ತಿದ್ದಾರೆ ಇವರ ಮೇಲೆ ಕ್ರಮ ಕೈಗೊಳ್ಳಬೇಕು ಎಂದು ಡಿ.ಎಸ್.ಎಸ್.ಮುಖಂಡ ಪರಶುರಾಮ ಟೊನಪೆ ಆಗ್ರಹಿಸಿದರು.
*ಕಳ್ಳಭಟ್ಟಿ ಸಾರಾಯಿ ಮಾರಾಟ ನಿಷೇಧಿಸಲು ಆಗ್ರಹ*
ಮೊರಬ ಗ್ರಾಮದ ಬಸವೇಶ್ವರ ನಗರದಲ್ಲಿ ಅವ್ಯಾಹತವಾಗಿ ಕಳ್ಳಭಟ್ಟಿ ಸಾರಾಯಿ ಮಾರಾಟ ಮಾಡುತ್ತಿದ್ದಾರೆ ಇದನ್ನು ತಕ್ಷಣವೇ ನಿಲ್ಲಿಸಿ, ಸಾರಾಯಿ ಮಾರಾಟ ಮಾಡುವವರ ಮೇಲೆ ಕ್ರಮ ಜರುಗಿಸುವಂತೆ
ಮೊರಬ ಗ್ರಾಮದ ಪ್ರಶಾಂತ ಕಾಂಬಳೆ ಆಗ್ರಹಿಸಿದರು.
*ಜಿಲ್ಲಾ ಮಟ್ಟದ ಪೊಲೀಸ್ ವರಿಷ್ಠಾಧಿಕಾರಿ ಅಧ್ಯಕ್ಷತೆಯಲ್ಲಿ ಸಭೆ ಕರೆಯಲು ಸಲಹೆ*
ಪ್ರತಿ ತಿಂಗಳ ಕೊನೆಯ ಶನಿವಾರ ಮೊದಲು ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡಗಳ ಕುಂದು ಕೊರತೆಗಳ ಸಭೆ ನಡೆಯುತ್ತಿತ್ತು,ಈಗ ಕೊವಿಡ್-19ಸೊಂಕು ನೆಪದಲ್ಲಿ ಸಭೆ ಕರೆದಿಲ್ಲ ಕೂಡಲೇ ಸಭೆ ಕರೆಯುವಂತೆ ಹಾರೂಗೇರಿ ಗ್ರಾಮದ ದಲಿತ ನಾಯಕ ಸುರೇಶ ಐಹೋಳೆ ಕೇಳಿಕೊಂಡರು.
ಸರ್ವ ಜನಾಂಗದ ಸಮಸ್ಯೆಗಳಿಗೆ ಶಿಘ್ರದಲ್ಲಿ ಪರಿಹರಿಸಲು ಪ್ರಾಮಾಣಿಕವಾಗಿ ಪ್ರಯತ್ನಿಸುವುದಾಗಿ
ಡಿ.ವೈ.ಎಸ್.ಪಿ.ಎಸ್.ವಿ.ಗಿರೀಶ ಈ ಸಂದರ್ಭದಲ್ಲಿ ಆಶ್ವಾಸನೆ ನೀಡಿದರು.
ಈ ಸಂದರ್ಭದಲ್ಲಿ
ಸಿ.ಪಿ.ಐ.ಎಚ್.ಡಿ.ಮುಲ್ಲಾ,
ದಲಿತ ನಾಯಕರಾದ ನಾಮದೇವ ಕಾಂಬಳೆ,ಜಯಪಾಲ ವಕೀಲಕರ, ಮಹಾವೀರ ಐಹೊಳೆ,ಅನೀಲ ಸಾನೆ, ಸುರೇಶ ಐಹೋಳೆ, ತ್ಯಾಗರಾಜ ಕದಂ,ಗಣೇಶ ಕಾಂಬಳೆ, ಕಿರಣ ಕಾಂಬಳೆ,ಕಾಡೇಶ ಐಹೊಳೆ
ಪರಶುರಾಮ ಟೊನಪೆ,ಸಚೀನ ಸೊನಾವಣೆ ಮುಂತಾದವರು ಉಪಸ್ಥಿತರಿದ್ದರು.
