Satya Darshana
ಬಿಸಿ ಬಿಸಿ ಸುದ್ದಿ
Otherಕ್ರೀಡೆಜಿಲ್ಲೆಟ್ರೆಂಡ್ದೇಶ-ವಿದೇಶಫೋಟೋಬಿಸಿ ಬಿಸಿ ಸುದ್ದಿರಾಜ್ಯಲೈಫ್ ಸ್ಟೈಲ್ವಿಡಿಯೋಸಿನಿಮಾ

ಒಂದು ದೇಶ, ಒಂದು ಚುನಾವಣೆ: ಮಾರಕವೇ? ಪೂರಕವೇ?

Debates

oi-Trupti Hegde

|

Published: Saturday, July 14, 2018, 13:04 [IST]

Google Oneindia Kannada News

ಒಂದು ದೇಶ ಒಂದು ಚುನಾವಣೆ : ಇದು ದೇಶಕ್ಕೆ ಮಾರಕವೋ ಪೂರಕವೋ? | Oneindia Kannada

‘ಒಂದು ದೇಶ, ಒಂದು ಚುನಾವಣೆ’ ಬಗ್ಗೆ 2017 ರಲ್ಲಿ ಪ್ರಧಾನಿ ನರೇಂದ್ರ ಮೋದಿಯವರು ತಮ್ಮ ಒಂದು ಭಾಷಣದಲ್ಲಿ ಪ್ರಸ್ತಾಪಿಸಿದ್ದರು. ಅದಾದ ನಂತರ ಈ ವಿಷಯ ಸಾಕಷ್ಟು ಬಾರಿ ಚರ್ಚೆಗೂ ಬಂತು.

ಒಂದು ದೇಶ, ಒಂದು ಚುನಾವಣೆ ಭಾರತದಂಥ ದೇಶಗಳಿಗೆ ಹೇಳಿಮಾಡಿಸಿದ್ದಲ್ಲ ಎಂದು ಕೆಲವರು ಮೂಗು ಮುರಿದರು. ಆದರೆ ಬಿಜೆಪಿಯನ್ನು ವಿರೋಧಿಸುವ ಸಮಾಜವಾದಿ ಪಕ್ಷದ ನಾಯಕರೇ ಈ ಪದ್ಧತಿಯನ್ನು ಬೆಂಬಲಿಸುವುದಾಗಿ ಹೇಳಿದರು. ಈ ಮೂಲಕ ಒಂದು ದೇಶ, ಒಂದು ಚುನಾವಣೆಯ ಪರಿಕಲ್ಪನೆಯನ್ನು ಜಾರಿಗೊಳಿಸಬೇಕೇ, ಬೇಡವೇ ಎಂಬ ಚರ್ಚೆ ಮತ್ತಷ್ಟು ಸುದ್ದಿಯಾಯಿತು.

ಲೋಕಸಭಾ ಚುನಾವಣೆ ಯಾವಾಗ? ಸುಳಿವು ನೀಡಿದ ಅಮಿತ್ ಶಾ ಲೋಕಸಭಾ ಚುನಾವಣೆ ಯಾವಾಗ? ಸುಳಿವು ನೀಡಿದ ಅಮಿತ್ ಶಾ

ಏನಿದು ಒಂದು ದೇಶ, ಒಂದು ಚುನಾವಣೆ?

ಲೋಕಸಭಾ ಚುನಾವಣೆಯ ಜೊತೆ ಜೊತೆಗೇ ರಾಜ್ಯಗಳ ವಿಧಾನಸಭೆಗೂ ಏಕಕಾಲಕ್ಕೆ ಚುನಾವಣೆ ಮಾಡುವ ಪದ್ಧತಿಯೇ ‘ಒಂದು ದೇಶ, ಒಂದು ಚುನಾವಣೆ.’ ಈ ಪದ್ಧತಿಯನ್ನು ಕೇಂದ್ರ ಚುನಾವಣಾ ಆಯೋಗವೂ ಬೆಂಬಲಿಸಿದೆ.

ದೇಶದಲ್ಲಿ ಪ್ರತಿವರ್ಷ ಒಂದಿಲ್ಲೊಂದು ಚುನಾವಣೆಗಳು ನಡೆಯುತ್ತಲೇ ಇರುತ್ತವೆ. ಲೋಕಸಭಾ ಚುನಾವಣೆಯ ನಂತರ, ದೇಶದಲ್ಲಿರುವ ವಿವಿಧ ರಾಜ್ಯಗಳಲ್ಲಿ ವಿಧಾನಸಭೆ ಚುನಾವಣೆಗಳು ನಡೆಯುತ್ತವೆ. ಈ ಸಂದರ್ಭದಲ್ಲಿ ಜಾರಿಯಾಗುವ ‘ಚುನಾವಣಾ ನೀತಿ ಸಂಹಿತೆ’ಯಿಂದಾಗಿ ಅಭಿವೃದ್ಧಿ ಕಾರ್ಯಗಳನ್ನು ಮಾಡುವುದಕ್ಕೆ ಸಾಧ್ಯವಾಗುತ್ತಿಲ್ಲ. ಅದೂ ಅಲ್ಲದೆ ಸರ್ಕಾರದ ಅಧಿಕಾರಿಗಳಿಗೆ ಸದಾ ಚುನಾವಣೆಯ ಕೆಲಸ ಮಾಡುವುದರಲ್ಲೇ ಸಮಯ ಹೋಗುತ್ತದೆ! ಇದರಿಂದಾಗಿ ದೇಶದ ಪ್ರಗತಿ ಸಾಧ್ಯವಾಗುತ್ತಿಲ್ಲ. ಅಲ್ಲದೆ, ಒಂದು ದೇಶ, ಒಂದು ಚುನಾವಣೆ ಪದ್ಧತಿ ಜಾರಿಗೆ ಬಂದರೆ ಚುನಾವಣಾ ವೆಚ್ಚವೂ ಕಡಿಮೆಯಾಗಲಿದೆ.

One nation One Election: Good or Bad for India?

ಎಲ್ಲೆಡೆಯೂ ಒಂದೇ ಬಾರಿ ಚುನಾವಣೆಯಾದರೆ ಅಕ್ರಮವಾಗುವ ಸಾಧ್ಯತೆ ಹೆಚ್ಚಿರಬಹದು, ಸಿಬ್ಬಂದಿಗಳ ಕೊರತೆಯಾಗಬಹುದು. ಪಾರದರ್ಶಕತೆ ಸಾಧ್ಯವಾಗದಿರಬಹುದು, ಸಾಂವಿಧಾನಿಕ ತಿದ್ದುಪಡಿಯೂ ಅಷ್ಟು ಸುಲಭದ್ದಲ್ಲ… ಹೀಗೇ ಈ ಪದ್ಧತಿಯ ಕುರಿತು ಕೆಲವು ದೂರುಗಳೂ ಇವೆ.

ಒಂದು ದೇಶ, ಒಂದು ಚುನಾವಣೆ ಸಿದ್ಧಾಂತಕ್ಕೆ ಕಾಂಗ್ರೆಸ್‌ ತೀವ್ರ ವಿರೋಧಒಂದು ದೇಶ, ಒಂದು ಚುನಾವಣೆ ಸಿದ್ಧಾಂತಕ್ಕೆ ಕಾಂಗ್ರೆಸ್‌ ತೀವ್ರ ವಿರೋಧ

ಪ್ರತಿಯೊಂದು ಹೊಸ ಪದ್ಧತಿಗೂ ಗುಣ ಮತ್ತು ದೋಷ ಎರಡೂ ಇದ್ದೇ ಇರುತ್ತವೆ. ಭಾರತದಂಥ ಅಭಿವೃದ್ಧಿಶೀಲ ರಾಷ್ಟ್ರಗಳಿಗೆ ಇಂಥ ಪದ್ಧತಿಗಳು ಎಷ್ಟು ಪೂರಕ ಎಂಬುದು ಈಗಿರುವ ಪ್ರಶ್ನೆ. ಒನ್ ಇಂಡಿಯಾ ಓದುಗರ ಪ್ರಕಾರ ಈ ಪದ್ಧತಿ ದೇಶಕ್ಕೆ ಮಾರಕವೋ, ಪೂರಕವೋ. ನಿಮ್ಮ ಅಭಿಪ್ರಾಯ ತಿಳಿಸಿ, ಈ ಚರ್ಚೆಯಲ್ಲಿ ಪಾಲ್ಗೊಳ್ಳಿ.

Oneindia ಬ್ರೇಕಿಂಗ್ ನ್ಯೂಸ್ . ಇಡೀ ದಿನ ತಾಜಾ ಸುದ್ದಿಗಳ ಪಡೆಯಿರಿ.

Allow Notifications

You have already subscribed

English summary

Prime minister Narendra Modi, a year ago, tells about One Nation One Election in one of his speechs. This is the topic of debate now. According to readers what are the merits and demerits of this concept,

Story first published: Saturday, July 14, 2018, 13:04 [IST]

Related posts

ಸಹಕಾರ ಇಲಾಖೆ ಸರ್ಕಾರದ ಪ್ರಧಾನ ಕಾರ್ಯದರ್ಶಿ ಎನ್.ಮಂಜುನಾಥ ಪ್ರಸಾದ ಅವರಿಂದ ಪ್ರಗತಿ ಪರಿಶೀಲನಾ ಸಭೆ

satyadarshana

ಡಿ.ದೇವರಾಜ ಅರಸು ಭವನ ಹಾಗೂ ಮೆಟ್ರಿಕ್ ನಂತರ ಬಾಲಕರ ವಿದ್ಯಾರ್ಥಿನಿಲಯ ಕಟ್ಟಡ ಲೋಕಾರ್ಪಣೆ

satyadarshana

ಸತ್ಯ ಎದುರಿಸುವ ಸಂದರ್ಭ ಬಂದಾಗ ಕಾಂಗ್ರೆಸ್‌ನವರು ಆ ಶಕ್ತಿ ಪಡೆದುಕೊಳ್ಳಲಿ: ಬೊಮ್ಮಾಯಿ ಟಾಂಗ್.

satyadarshana

Leave a Comment