ಅಂಬೇಡ್ಕರ್ ಭಾವಚಿತ್ರಕ್ಕೆ ಅಪಮಾನ ಮಾಡಿದವರಿಗೆ ಗಲ್ಗೇರಿಸಿ.
ಕುಕನೂರ : ಸಂವಿಧಾನ ಶಿಲ್ಪಿ ಡಾ.ಬಿ.ಆರ್ ಅಂಬೇಡ್ಕರ್ ಅವರ ಭಾವಚಿತ್ರಕ್ಕೆ ಚಪ್ಪಲಿ ಹಾರ ಹಾಕಿ ಅವಮಾನ ಮಾಡಿರುವುದು ಅಕ್ಷಮ್ಯ ಅಪರಾಧ ಕೂಡಲೇ ಆರೋಪಿಗಳನ್ನು ಬಂಧಿಸಿ, ಕಾನೂನು ಅಡಿಯಲ್ಲಿ ಗಡಿಪಾರು ಮಾಡುವ ಅವಕಾಶವಿದ್ದರೆ ಈ ಕೂಡಲೇ ಆರೋಪಿಗಳನ್ನು ಗಡಿಪಾರು ಮಾಡಬೇಕು ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರಾಮ್ ಅರಸಿದ್ದಿ ಹಾಗೂ ಜಿಲ್ಲಾ ವಿಭಾಗೀಯ ದಂಡಾಧಿಕಾರಿ ಕ್ಯಾಪ್ಟನ್ ಮಹೇಶ್ ಮಾಲ್ ಗಿತ್ತಿಯವರಿಗೆ ಶಾಸಕ ಬಸವರಾಜ ರಾಯರಡ್ಡಿ ಯವರು ಮೌಖಿಕ ಆದೇಶ ನೀಡಿದರು.
ಕೊಪ್ಪಳ ಜಿಲ್ಲಾ ಕೂಕನೂರ ತಾಲ್ಲೂಕಿನ ಕವಳಕೇರಿ ಗ್ರಾಮದಲ್ಲಿ
ಅಂಬೇಡ್ಕರ್ ಅವರ ಭಾವಚಿತ್ರಕ್ಕೆ ಅಪಮಾನ ಮಾಡಿರುವ ಕಿಡಿಗೇಡಿಗಳ ವಿರುದ್ಧ ಸೂಕ್ತ ಕಾನೂನು ಕ್ರಮ ತೆಗೆದುಕೊಂಡು,ಅವರಿಗೆ ಮರಣ ದಂಡನೆ ವಿದಿಸಿಬೇಕು ಮತ್ತೇ ಯಾರು ಇಂತಹ ಕಿಡಗೇಡತನ ಮಾಡಬಾರದು ಎಂದರೆ ಇಂತಹ ವ್ಯಕ್ತಿಗಳಿಗೆ ಮರಣ ದಂಡನೆವೇ ಸೂಕ್ತವಾಗಿದೆ ಅಂಬೇಡ್ಕರ್ ಅವರು ಕೇವಲ ಒಂದೇ ಜಾತಿಗೆ ಸಂವಿಧಾನ ಬರದಿಲ್ಲ ಅದನ್ನು ಅರಿಯದೆ ಮೂರ್ಖರ ಇಂತಹ ಕೆಲಸಕ್ಕೆ ಕೈ ಹಾಕುತ್ತಾರೆ ಆದರಿಂದ ಇದು ಕೇವಲ ಕವಳಕೇರಿ ಗ್ರಾಮ ಒಂದೇ ಅಲ್ಲಾ ಬಹುತೇಕ ಕಡೇ ಇಂತಹ ಘಟನೆಗಳೆ ನಡದಿವೆ ಆವಗಾಲೇ ಅವರಿಗೆ ಕಠಿಣ ಕ್ರಮ ಕೈಗೊಂಡಿದ್ದರೆ ಇಂದು ಕವಳಕೇರಿಯಲ್ಲಿ ಈ ಪ್ರಕರಣ ನಡೆಯುತ್ತೀರಲ್ಲಿಲ್ಲ ಕೆಲವು ರಾಜಕಾರಣಿಗಳು ಕೇವಲ ತಮ್ಮ ಓಟ ಬ್ಯಾಂಕಗಾಗಿ ಅಂಬೇಡ್ಕರ್ ಅವರು ಹೆಸರು ಹೇಳಿ ರಾಜಕಾರಣ ಮಾಡುವದಲ್ಲ ನಿಜವಾಗಿಯೂ ಅಂಬೇಡ್ಕರ್ ಅವರ ಅನುಯಾಯಿಗಳಾಗಿದ್ದರೆ ಅವರಿಗೆ ಮರಣ ದಂಡನೆಗೆ ಗುರು ಪಡಿಸಿಲಿ ಅಂದರೆ ಬೇರೆ ಯಾವ ಊರಿನಲ್ಲಿ ಇಂತಹ ಘಟನೆಗಳು ನಡೆಯುವುದಿಲ್ಲ ಅಂಬೇಡ್ಕರ್ ಅವರಿಗೆ ಅವಮಾನ ಮಾಡುವುದು ಒಂದೇ ಹೆತ್ತ ತಾಯಿಗೆ ಅವಮಾನ ಮಾಡುವುದು ಒಂದೇ ಆಗಿದೆ.
ಸರಕಾರ ಜಿಲ್ಲಾ ಆಡಳಿತ ಕೂಡಲೇ ಅಲ್ಲಿ ಬೇಕಾದ ಅಗತ್ಯ ಕ್ರಮ ಕೈಗೊಳ್ಳಲು ಮುಂದಾಗಬೇಕು ಮತ್ತುಅಲ್ಲಿನ ಜನರಿಗೆ ಸೂಕ್ತ ಬಂದು ಬಸ್ತ ಮಾಡಬೇಕು ಅಲ್ಲಿ ಮೊದಲಿನಂತೆ ಶಾಂತಿ ನೆಲಸಬೇಕು. ಎಂದು ಡಾ ಬಾಬು ಜಗಜೀವನರಾಮ ಆದಿಜಾಂಬವ ಬೆಳಗಾವಿ ವಿಭಾಗೀಯ ಸಂಚಾಲಕರು ಆದ ಮಂಜುನಾಥ ಬುರಡಿ ಆಗ್ರಹಿಸಿದರು*
