ಗಜೇಂದ್ರಗಡ : ಸ್ವಯಂ ಅಭಿವ್ಯಕ್ತಿಯೇ ಕ್ರೀಡೆಯಾಗಿದ್ದು ಪ್ರತಿಯೊಂದು ಆಟದಲ್ಲೂ ವಿದ್ಯಾರ್ಥಿಗಳು ಕ್ರೀಡಾ ಮನೋಭಾವನೆಯಿಂದ ಆಟವಾಡಬೇಕು ಕ್ರೀಡೆಯಿಂದಲೇ ಪ್ರತಿಯೊಬ್ಬ ವಿದ್ಯಾರ್ಥಿಯ ಸರ್ವಾಂಗೀನ ಬೆಳವಣಿಗೆ ಸಾಧ್ಯವಾಗುತ್ತದೆ ಎಂದು ಸಂಸ್ಥೆ ಉಪಾಧ್ಯಕ್ಷರಾದ ಅವಿನಾಶ್ ಮತ್ತಿಕಟ್ಟಿ ಹೇಳಿದರು.
ನಗರದ ವಿಘ್ನೇಶ್ವರ ಸಮೂಹ ಸಂಸ್ಥೆಗಳ ಗಂಗೋತ್ರಿ ಪಬ್ಲಿಕ್ ಶಾಲೆಯಲ್ಲಿ
ಕ್ರೀಡಾಕೂಟವನ್ನು ಉದ್ಘಾಟಿಸಿ ಅವರು ಮಾತನಾಡಿದರು ಸಮೂಹ ಸಂಸ್ಥೆಯ ನಿರ್ದೇಶಕರು ಹಾಗೂ ಆಡಳಿತ ಅಧಿಕಾರಿಗಳಾದ ಶ್ರೀಮತಿಯ ಸಹನಾ ಮತ್ತಿ ಕಟ್ಟಿ ಕ್ರೀಡಾ ಜ್ಯೋತಿಯನ್ನು ಸ್ವೀಕರಿಸಿ ಮಾತನಾಡಿ ಕ್ರೀಡೆಯಲ್ಲಿ ಸೋಲು ಗೆಲುವು ಮುಖ್ಯವಲ್ಲ ಪ್ರತಿಯೊಬ್ಬರೂ ಕ್ರೀಡೆಯಲ್ಲಿ ಭಾಗವಹಿಸುವುದು ಅತಿ ಮುಖ್ಯವಾದದ್ದು ಎಂದರು ಗಂಗೋತ್ರಿ ಪಬ್ಲಿಕ್ ಶಾಲೆಯ ಮುಖ್ಯೋಪಾಧ್ಯಾಯನಿ ಎಲ್ಲಾ ಕ್ರೀಡಾಪಟುಗಳಿಗೆ ಕ್ರೀಡಾ ಪ್ರತಿಜ್ಞೆಯನ್ನು ಬೋಧಿಸಿಕ್ರೀಡೆ ಎಂಬುದು ಸಂಘಟಿತ,ಸ್ಪರ್ಧಾತ್ಮಕ ಮತ್ತು ಕುಶಲತೆಯಿಂದ ಕೂಡಿದ ದೈಹಿಕ ಚಟುವಟಿಕೆಯಾಗಿದೆ.
ಅಲ್ಲದೇ ಇದಕ್ಕೆ ಬದ್ಧತೆ ಮತ್ತು ನ್ಯಾಯ ಯುತ ಆಟದ ಅಗತ್ಯವಿರುತ್ತದೆ. ಇದರಲ್ಲಿ ವಿಜೇತನನ್ನು ವಸ್ತುನಿಷ್ಠ ಮಾರ್ಗಗಳಿಂದ ನಿರ್ಧರಿಸಬಹುದು. ಇದನ್ನು ನಿಯಮಗಳ ಅಥವಾ ವಾಡಿಕೆಗಳ ಶ್ರೇಣಿಯಿಂದ ನಡೆಸಲಾಗುತ್ತದೆ. ಎಂದರು ಕುಮಾರಿ ಪೂಜಾ
ಪ್ರಾರ್ಥಿಸಿದರು ಶ್ರೀಮತಿ ಹಿರೇಮಠ ಸರ್ವರನ್ನು ಸ್ವಾಗತಿಸಿದರು ಶ್ರೀಮತಿ ನಾಗರಾಳ ವಂದಿಸಿದರು
