Satya Darshana
ಬಿಸಿ ಬಿಸಿ ಸುದ್ದಿ
ಜಿಲ್ಲೆಬಿಸಿ ಬಿಸಿ ಸುದ್ದಿರಾಜ್ಯ

ಭಾರತವು ಐಕ್ಯಗೊಳ್ಳಲು ಸರ್ದಾರ್ ಪಟೇಲರೇ ಕಾರಣ ಮಾದಿ 

 

ಗಜೇಂದ್ರಗಡ

ಭಾರತವು ಪುಣ್ಯಭೂಮಿ ಪ್ರಾಚೀನ ಕಾಲದಿಂದಲೂ ಹಲವಾರು ರಾಜವಂಶಗಳು.ಪರಕಿಯರ ಆಳ್ವಿಕೆಯ ಲ್ಲಿಬೆಳೆದು ಬಂದಿದೆ ಸ್ವತಂತ್ರಗೊಂಡ ನಂತರವೂ 553 ಸಂಸ್ಥಾನಗಳನ್ನು ಏಕೀಕರಣ ಗೊಳಿಸಿದ ಕೀರ್ತಿ ಸರ್ದಾರ್ ವಲ್ಲಬಾಯ್ ಪಟೇಲ್ರಿಗೆ ಸಲ್ಲುತ್ತದೆ ಎಂದು ಡಾ. ಬಿಕೆ ಮಾದಿ ಹೇಳಿದರು ನಗರದ ವಿಘ್ನೇಶ್ವರ ಶಿಕ್ಷಣ ಸಂಸ್ಥೆಯ ವಿಘ್ನೇಶ್ವರ ಪದವಿಪೂರ್ವ ಕಾಲೇಜ್. ಗಂಗೋತ್ರಿ ಪಬ್ಲಿಕ್ ಶಾಲೆ ಹಾಗೂ ಶ್ರೀಮತಿ ಸುಮಂಗಲ ಮತ್ತಿಕಟ್ಟಿ ಐಟಿಐ ಕಾಲೇಜ್ ಇವುಗಳ ಸಂಯುಕ್ತ ಆಶ್ರಯದಲ್ಲಿ ಜರುಗಿದ ರಾಷ್ಟ್ರೀಯ ಏಕತಾ ದಿನ ದ ಆಚರಣೆ ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿ ಮಾತ ನಾಡುತ್ತಾ ಭಾರತದಲ್ಲಿ ಅಕ್ಟೋಬರ್ 31 ರಂದು ಏಕತಾ ದಿವಸ್ ಆಚರಿಸಲಾಗುತ್ತದೆ. ಇದನ್ನು ಭಾರತ ಸರ್ಕಾರವು 2014 ರಲ್ಲಿ ಪರಿಚಯಿಸಿತು. ಭಾರತದ ರಾಜಕೀಯ ಏಕೀಕರಣದಲ್ಲಿ ಪ್ರಮುಖ ಪಾತ್ರ ವಹಿಸಿದ್ದ ವಲ್ಲಭಭಾಯಿ ಪಟೇಲ್ ಅವರ ಜನ್ಮದಿನವನ್ನು ಗುರುತಿಸಲು ಈ ದಿನವನ್ನು ಆಚರಿಸಲಾಗುತ್ತದೆ .  ಎಂದರು

ಈ ಸಂದರ್ಭದಲ್ಲಿ ಎಬಿ ಸಂಕನೂರು ಮಾತನಾಡಿ ರಾಷ್ಟ್ರದ ಹಲವಾರು ಸಂಸ್ಥಾನಗಳನ್ನು ಒಗ್ಗೂಡಿಸಿ ಆಡಳಿತ ವ್ಯವಸ್ಥೆಗೆ ಅಣೆಗೂಳಿಸಿದ ಕೀರ್ತಿ ಸರ್ದಾರ್ ವಲ್ಲಭಬಾಯಿ ಪಟೇಲರಿಗೆ ಸಲ್ಲುತ್ತದೆ ಎಂದರು

2016 ರಲ್ಲಿ ರಾಷ್ಟ್ರೀಯ ಏಕತಾ ದಿನದಂದು ಪಟೇಲರ ಸ್ಮರಣಾರ್ಥ ಅಂಚೆಚೀಟಿ ಬಿಡುಗಡೆ ಮಾಡಲಾಗಿದ್ದು, ಅದರಲ್ಲಿ ಏಕತೆ ಮತ್ತು ಪಟೇಲ್ ಪ್ರತಿಮೆಯನ್ನು ಚಿತ್ರಿಸುತ್ತದೆ ಆಂದನಿಂದ ಅಧಿಕೃತ ರಾಷ್ಟ್ರೀಯ ಏಕತಾದಿವಸ ಎಂದು ರಾಷ್ಟ್ರೀಯಮಹತ್ವ ದ ದಿನವನ್ನಾಗಿ ಆಚರಿಸಲಾಗುತ್ತದೆ ಎಂದರು

ರಾಷ್ಟ್ರೀಯ ಏಕತಾ ದಿನವು “ಏಕತೆ, ಸಮಗ್ರತೆ ಮತ್ತು ನೈಜ ಮತ್ತು ಸಂಭಾವ್ಯ ಬೆದರಿಕೆಗಳನ್ನು ತಡೆದುಕೊಳ್ಳಲು ನಮ್ಮ ರಾಷ್ಟ್ರದ ಅಂತರ್ಗತ ಶಕ್ತಿ ಮತ್ತು ಸ್ಥಿತಿಸ್ಥಾಪಕತ್ವವನ್ನು ಮರು-ದೃಢೀಕರಿಸಲು ಅವಕಾಶವನ್ನು ಒದಗಿಸುತ್ತದೆ” ನಮ್ಮ ದೇಶದ ಭದ್ರತೆ.”

ದಿನದಂದು, ಸರ್ಕಾರಿ ಕಚೇರಿಗಳಲ್ಲಿ ಪ್ರತಿಜ್ಞೆಯನ್ನು ಓದಲಾಗುತ್ತದೆ:

ರಾಷ್ಟ್ರದ ಏಕತೆ, ಸಮಗ್ರತೆ ಮತ್ತು ಭದ್ರತೆಯನ್ನು ಕಾಪಾಡಲು ನನ್ನನ್ನು ಅರ್ಪಿಸಿಕೊಳ್ಳುತ್ತೇನೆ ಮತ್ತು ಈ ಸಂದೇಶವನ್ನು ನನ್ನ ಸಹ ದೇಶವಾಸಿಗಳಲ್ಲಿ ಹರಡಲು ಶ್ರಮಿಸುತ್ತೇನೆ ಎಂದು ನಾನು ಪ್ರಾಮಾಣಿಕವಾಗಿ ಪ್ರತಿಜ್ಞೆ ಮಾಡುತ್ತೇನೆ. ಎಂಬುದಾಗಿನಿಕಟ ಪೂರ್ವ ಪ್ರಾಚಾರ್ಯ ಎನ್ ಎಸ್ ಕಲಕೇರಿ ಪ್ರತಿಜ್ಞಾವಿಧಿ ಬೋಧಿಸಿದರು ಸರ್ದಾರ್ ವಲ್ಲಭಭಾಯಿ ಪಟೇಲ್ ಅವರ ದೂರದೃಷ್ಟಿ ಮತ್ತು ಕಾರ್ಯಗಳಿಂದ ಸಾಧ್ಯವಾದ ನನ್ನ ದೇಶದ ಏಕೀಕರಣದ ಉತ್ಸಾಹದಲ್ಲಿ ನಾನು ಈ ಪ್ರತಿಜ್ಞೆಯನ್ನು ತೆಗೆದುಕೊಳ್ಳುತ್ತೇನೆ. ನನ್ನ ದೇಶದ ಆಂತರಿಕ ಭದ್ರತೆಯನ್ನು ಖಚಿತಪಡಿಸಿಕೊಳ್ಳಲು ನನ್ನದೇ ಆದ ಕೊಡುಗೆಯನ್ನು ನೀಡಲು ನಾನು ಗಂಭೀರವಾಗಿ ಸಂಕಲ್ಪ ಮಾಡುತ್ತೇನೆ. ಎಂದು ಶ್ರೀ ವಿಘ್ನೇಶ್ವರ ಶಿಕ್ಷಣ ಸಮೂಹ ಸಂಸ್ಥೆಯ ಬೋಧಕ ವೃಂದದವರು ತಮ್ಮ ಮಾತಿನಲ್ಲಿ ತಿಳಿಸಿದರು ಕಾರ್ಯಕ್ರಮದಲ್ಲಿ ಪದವಿಪೂರ್ವ ಕಾಲೇಜ್ ಗಂಗೋತ್ರಿ ಪಬ್ಲಿಕ್ ಶಾಲೆ ಶ್ರೀಮತಿ ಸುಮಂಗಲ ಮತ್ತಿಕಟ್ಟಿ ಐಟಿಐ ಕಾಲೇಜಿನ ಸರ್ವ ಸಿಬ್ಬಂದಿ ಉಪಸ್ಥಿತರಿದ್ದರು ಕೊನೆಯಲ್ಲಿ ಸಿಹಿ ವಿತರಿಸುವ ಮೂಲಕ ಕಾರ್ಯಕ್ರಮ ಮುಕ್ತಾಯಗೊಂಡಿತು

ವರದಿ  ಮಲ್ಲಪ್ಪ ದೊಡ್ಡಮನಿ

Related posts

ಸರ್ಕಾರದ ಅನುದಾನಕ್ಕೆ ಆಸೆ ಪಡದೆ ಸ್ವಂತ ದುಡ್ಡಿನಲ್ಲಿ ವಸ್ತು ಸಂಗ್ರಾಲಯ ಕಟ್ಟುತ್ತಿರುವ. ಡಿ.ವೈ. ಉಪಾಧ್ಯಯ.

satyadarshana

ಶಿರಹಟ್ಟಿ ನೂತನ ಪಿಎಸ್ಐಗೆ ಸೂಡಿ ಗ್ರಾಮದ ಜನತೆಯಿಂದ ಸನ್ಮಾನ 

satyadarshana

ಹೊಸ ಮನೆ ಕಟ್ಟಲು ಮಾಡಿದ್ದ ಸುಮಾರು 20 ಲಕ್ಷ ರೂಪಾಯಿ ಸಾಲ ಮತ್ತು ಪತಿ ಕೊರೊನಾದಿಂದ ಮೃತಪಟ್ಟಿದ ಬಳಿಕ ಧೃತಿಗೆಟ್ಟಿದ್ದ ಮಹಿಳೆ ಮಕ್ಕಳೊಂದಿಗೆ ಆತ್ಮಹತ್ಯೆಗೆ ಭಾರೀ ದುರಂತ ಸಂಭವಿಸಿದೆ

satyadarshana

Leave a Comment