Satya Darshana
ಬಿಸಿ ಬಿಸಿ ಸುದ್ದಿ
ಜಿಲ್ಲೆಫೋಟೋಬಿಸಿ ಬಿಸಿ ಸುದ್ದಿರಾಜ್ಯ

ಸೂಡಿ ಗ್ರಾ,ಪಂ ಅಧ್ಯಕ್ಷೆಯಾಗಿ ಖಾದಿರಬಿ ಡಾಲಾಯತ ಆಯ್ಕೆ

 

ಗಜೇಂದ್ರಗಡ : ತಾಲ್ಲೂಕಿನ ಸೂಡಿ ಗ್ರಾಮ ಪಂಚಾಯಿತಿ ಅಧ್ಯಕ್ಷರಾಗಿ ಕಾಂಗ್ರೆಸ್ ಬೆಂಬಲಿತ ಖಾದಿರಬಿ ಡಾಲಾಯತ ಆಯ್ಕೆಯಾದರು.

ಗ್ರಾ.ಪಂ. ಅಧ್ಯಕ್ಷ ವೀರಮ್ಮ ಮಡಿವಾಳರ ರಾಜೀನಾಮೆಯಿಂದ ತೆರವಾಗಿದ್ದ ಅಧ್ಯಕ್ಷ ಸ್ಥಾನಕ್ಕೆ ಶುಕ್ರವಾರ ಚುನಾವಣೆ ನಡೆಯಿತು.

ಅಧ್ಯಕ್ಷ ಸ್ಥಾನಕ್ಕೆ ಖಾದಿರಬಿ ಡಾಲಾಯತ ಮತ್ತು ಆಯಿಷಾ ಬೇಗಂ ನಾಮಪತ್ರ ಸಲ್ಲಿಸಿದ್ದರು.

ಖಾದಿರಬಿ ಡಾಲಾಯತ 14 ಮತ ಪಡೆದು ವಿಜೇತರಾದರು. ಆಯಿಷಾ ಬೇಗಂ 3 ಮತ ಪಡೆಯಲು ಶಕ್ತರಾದರು ಎಂದು ಚುನಾವಣಾಧಿಕಾರಿಯಾಗಿದ್ದ ತಾಲೂಕು ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿ ಬಸುರಾಜ ಬಡಿಗೇರ ಘೋಷಿಸಿದರು.

ಗ್ರಾಮ ಪಂಚಾಯಿತಿ ಉಪಾಧ್ಯಕ್ಷೆಯಾಗಿ ಕನಕವ್ವ ಮಾದರ ಮುಂದುವರೆದಿದ್ದಾರೆ. ಅಧ್ಯಕ್ಷರ ಆಯ್ಕೆಯಾಗುತ್ತಿದ್ದಂತೆ ನೂತನ ಅಧ್ಯಕ್ಷರ ಬೆಂಬಲಿಗರು, ಅಭಿಮಾನಿಗಳು ಪಟಾಕಿ ಸಿಡಿಸಿ, ಸಿಹಿ ಹಂಚಿ ಸಂಭ್ರಮಿಸಿದರು.

ನೂತನ ಖಾದಿರಬಿ ಡಾಲಾಯತಯ ಮಾತನಾಡಿ, ಕುಡಿಯುವ ನೀರಿನ ಸಮಸ್ಯೆ ನಿವಾರಣೆಗೆ ಆದ್ಯತೆ ನೀಡಲಾಗುವುದು. ನರೇಗಾ ಯೋಜನೆಯನ್ನು ಸಮರ್ಪಕವಾಗಿ ಅನುಷ್ಠಾನಗೊಳಿಸುವ ಮೂಲಕ ಸರ್ಕಾರದಿಂದ ದೊರಕುವ ಸೌಲಭ್ಯಗಳನ್ನು ಪ್ರತಿ ಮನೆಗೂ ತಲುಪಿಸಲಾಗುವುದು. ಜಲಜೀವನ್ ಮಿಷನ್ ಯೋಜನೆಯಡಿ ಮನೆ, ಮನೆಗೂ ಶುದ್ದ ಕುಡಿಯುವ ನೀರು ಪೂರೈಕೆಗೆ ಕ್ರಮ ಕೈಗೊಳ್ಳಲಾಗುವುದು. ಪ್ರತಿಯೊಂದು ಮನೆಗೂ ಇ-ಸ್ವತ್ತು ಕೊಡಿಸಲಾಗುವುದು ಎಂದು ಭರವಸೆ ನೀಡಿದರು.

ಈ ಸಂದರ್ಭದಲ್ಲಿ ವೀರಣ್ಣ ಶೆಟ್ಟರ್, ಶಿವಕುಮಾರ್ ಪಟ್ಟಣಶೆಟ್ಟಿ, ರಾಘವೇಂದ್ರ ಕುಲಕರ್ಣಿ, ಹುಸೇನಸಾಬ ಬೆಳಟ್ಟಿ, ಅಬ್ದುಲ್ ಸಾಬ್ ಇಟಗಿ,ಮಹಾಂತೇಶ ಸೂಡಿ, ಜಗದೀಶ್ ಹಿರೇಮಠ, ಶಶಿಧರ ಬಸವರಾಜ ಕಡಬಿನ ಮಂಜುನಾಥ್ ಕಡಿಬಿನ ಚೆನ್ನಪ್ಪ ಸಂಗಪ್ಪ ಮಡಿವಾಳರ  ಬಸವರಾಜ್ ಬಿದರೋರು, ಇಸ್ಮಾಯಿಲ್ ಹೊರಪೇಟೆ ಇತರರು ಉಪಸ್ಥಿತರಿದ್ದರು.

Related posts

223ನೇ ದಿನದ ಬಲ್ಡೋಟ ಕಾರ್ಖಾನೆ, ಮಾಲಿನ್ಯ ವಿರೋಧಿ ಹೋರಾಟ ಯಶಸ್ವಿ;

satyadarshana

ಮುಂಬೈ ಗೆಲುವಿನಿಂದ ಆರ್‌ಸಿಬಿ ಪ್ಲೇ ಆಫ್ ಪ್ರವೇಶ ಡೆಲ್ಲಿ ಕ್ಯಾಪಿಟಲ್ಸ್ ಟೂರ್ನಿಯಿಂದ ಔಟ್

satyadarshana

ಗದಗ ಜಿಲ್ಲಾ ಮಟ್ಟದ ಯುವಜನೋತ್ಸವ ಆಯ್ಕೆ ಸ್ಪರ್ಧೆ ಉದ್ಘಾಟನೆ: ಆದರ್ಶ ಶಿಕ್ಷಣ ಸಮಿತಿಯ ಚೇರಮನ್ ಆನಂದ ಪೋತ್ನೀಸ್

satyadarshana

Leave a Comment