ನಡೆದು ತಪ್ಪು ಎಂದು ನಡೆಯುವುದು ಬಿಡಲಿಲ್ಲ. ನಡೆ-ನುಡಿಗಳೆರಡರ ನಿರಂತರಿಕೆಯಲ್ಲಿ ವಿಳಂಬ ತೋರಬಹುದಾದರು ಆಡಿಯೇ ಮಾಡಿ ತೋರುವ ಮಧ್ಯಮರ ಮುಂದೆ ನಿತ್ಯ ನಿರಂತರ ನಡೆದು ಮಾರುತಿಯ ಆಶೀರ್ವಾದದೊಂದಿಗೆ ಗುರುವಿನ ಒಲುಮೆ ಪಡೆದು ಸಾಗಿದವರೇ ಗುರಿಕಾರ ಮುತ್ತಪ್ಪನವರು ನೋಡ ಮಾದೇವಿ. ಸ್ವರ ವಚನದಂತೆ ತಂದೆ ಒಂದು ದಿನದ ಬದುಕಿನ ಪಾಠ ಹೇಳಿದೊಡನೆ ನಾನು ಕೂಡ ಸ್ವಾವಲಂಬಿಯಾಗಿ ಸೋದರನೊಡಗೂಡಿ ಸಂಸಾರ ನೌಕೆ ನಡೆಸಲು ಸನ್ನದ್ಧನಾಗಲು ಬಯಸಿ 2008ರ ವೇಳೆಗೆ ಬಸಾಪುರದ ಮನೆಯನ್ನು ತೊರೆದು ಸ್ನೇಹಿತನ ಸಹಕಾರದೊಂದಿಗೆ ಬಾಡಿಗೆ ಮನೆಯಲ್ಲಿ ಉಳಿದು ಸಾಮಾಜಿಕ ನಾಟಕ, ಡೊಳ್ಳು ಕುಣಿತ, ಭಜನೆ ಹಾಡು ಕಲಿಸುವ ಮೂಲಕ ಕಲೆಯಲ್ಲಿ ಜೀವನದ ಭವ್ಯತೆಗೆ ಅಣಿಯಾದ ಕೀರ್ತಿಗೆ ಪಾತ್ರವಾಗಿದೆ.
ಶಿಕ್ಷಣ ಕಲಿಸಬೇಕೆಂದರೆ ಒಂದು ವಾತಾವರಣವಿರುತ್ತದೆ ಆದರೆ ಸಾಮಾಜಿಕ ನಾಟಕಗಳನ್ನು ಕಲಿಸುವುದು ಬಹಳ ಕಷ್ಟವಾದರೂ ನಟನೆಯನ್ನು ಕಲಿಸಲು ಅವರ ಮನದೊಳಗೆ ವಿಶ್ವಾಸ, ಮುಖದಲ್ಲೇ ಆ ಕಳೆಯನ್ನು ಮೂಡಿಸಿ ಕಳಿಸಬೇಕಾದದ್ದು ಸಾಮಾನ್ಯ ಕೆಲಸವಲ್ಲವಾದರೂ ಈ ನಾಟಕ ಮಾಸ್ತರ್ ಬದುಕು ಸಾಧಿಸುವುದು ಕಷ್ಟವೆಂದು ನಾಟಕ ಕಲಿಸಿಕೊಟ್ಟವರು ಮೂಗು ಮುರಿದು ಆಡಿದರು. ಸಾಮಾಜಿಕ ನಾಟಕಗಳನ್ನು ಕಲಿಸುವ ನಾಟಕ ಜಗತ್ತು ಅದ ಪತನ ಸ್ಥಿತಿಯಲ್ಲಿ ಆದಾಗ್ಯೂ ಮುತ್ತಪ್ಪನವರು ಇಂತಹ ಶೋಷನೀಯ ಸ್ಥಿತಿಯಲ್ಲಿಯೂ ಮುತ್ತಾಗಿ ಉಳಿದುಕೊಂಡರು. ತಮ್ಮ ನಾಟಕ ಜಾನಪದ ಕ್ಷೇತ್ರಕ್ಕೆ ಗೌರವ ಡಾಕ್ಟರೇಟ್ ಪಡೆದದ್ದು
ಅವರ ಜೀವನದ ಮೌಲ್ಯಾದರ್ಶಗಳಿಗೊಂದು ಚಿನ್ನದ ಕಳಸವೆಂದರೆ ತಪ್ಪಾಗಲಾರದು.
ಸ್ವಾಭಿಮಾನ ಸ್ವಾರ್ಥ ರೈತ ಚಿಂತನ ಸತತ ಅಭ್ಯಾಸ ಸದಿಚ್ಛೆಗಳ ಸಾವಯವ ಕೃಷಿ ನಡೆಯುವ ರಂಗಭೂಮಿ ಅತ್ಯಂತ ಪವಿತ್ರವಾದದ್ದು ಎಂದು ನಂಬಿದ ಬದುಕಿದವರು ಮುತ್ತಪ್ಪ ಗುರಿಕಾರರು .ಸಕಲರ ಪ್ರೋತ್ಸಾಹ ಧಾರಣೆ ,ಮನದಲ್ಲಿ ಭರವಸೆ ,ಮುಖದ ರಾಜಕಲೆ, ನೀತಿ ತತ್ವಗಳ ಪರಿಪಾಲನೆ ಎಲ್ಲ ನಟ ನಟಿಯರಿಗೆ ಪಾಲಕನೆಂಬಂತೆ ಗೋಚರಿಸಿ ಅವರೆಲ್ಲರ ಗುರುಗಳ ಗುರುವಿನಂತೆ ಕಂಡ ಮಾನವೀಯ ನೆಲೆಯಲ್ಲಿ ಸಾಮಾಜಿಕ ರಂಗಭೂಮಿಯಲ್ಲಿ ಈ .
ಈ ಕಲೆಯನ್ನು ಕರಗತ ಮಾಡಿಕೊಂಡು ಕಲಿಸುವ ಹಂಬಲದಿಂದಾಗಿಯೇ ಹೋದಲ್ಲೆಡೆಯಲ್ಲಿ ಸಕಲರ ಗೌರವಕ್ಕೆ ಪಾತ್ರವಾಗಿರುವ ಗ್ರಾಮೀಣ ಪ್ರತಿಭೆ ಒಂದು ಬೆಂಗಳೂರಿನಲ್ಲಿ ಉದ್ಯಮಿಯಾಗಿ ಬೆಳೆದು ನಿಂತಿರುವ ಆತ್ಮೀಯರೊಬ್ಬರಿಗೆ ಮುತ್ತಪ್ಪರು ಬೆಂಗಳೂರಿಗೆ ಬಂದಿದ್ದಾರೆ ಎಂದು ತಿಳಿದು ಮಧ್ಯದಲ್ಲಿಯೇ ತಡೆದು ನಿಲ್ಲಿಸಿದ ತಾಣಕ್ಕೆ 2 ಕಿ.ಮೀ ಸುತ್ತಿ ಹೊಡೆದುಕೊಂಡು ಬಂದ ವಿಜಯಕುಮಾರ ತಳಗಡೆ ಎಂಬುವರು ನಮ್ಮೆಲ್ಲರನ್ನು ಮನೆಗೆ ಕರೆತರಲು ಅಣತಿ ಇಟ್ಟಾಗ ನಮಗೆಲ್ಲ ಸಾತ್ವಿಕವಾಗಿ ನಿರಾಕರಿಸಲಾಗಿದೆ. ಒಲ್ಲದ ಮನಸ್ಸಿನಿಂದ ಒಪ್ಪಿಗೆ ಕೊಟ್ಟವರು ಕಳಕೇಶ.
ಆಗ ವಿಜಯಕುಮಾರ ಮುತ್ತಪ್ಪನವರನ್ನು ದ್ವಿಚಕ್ರದ ಮೇಲೆ ಕರೆದು ಇದು ಬೊಮ್ಮಸಂದ್ರದಲ್ಲಿರುವ ಕಟಿಂಗ್ ಟೂಲ್ ಮತ್ತು ಮ್ಯಾನುಫ್ಯಾಕ್ಚರಿಂಗ್ ಫ್ಯಾಕ್ಟರಿ ತೋರಿಸಲು ಕರೆದು ಅಲ್ಲಿಂದ ಮನೆಗೆ ತೆರಳುವ ಮಧ್ಯದಲ್ಲಿ ವಿಜಯಕುಮಾರ್ ಅವರು ಅಂದನಗೌಡ ಪೊಲೀಸ್ ಪಾಟೀಲ ಮನೆಗೆ ಕರೆದೊಯ್ದರು ಅಲ್ಲೆ ಕಲಾ ಪ್ರಪಂಚದಲ್ಲಿ ಕರಗತಗೊಂಡಿರುವ ಮುತ್ತಪ್ಪನವರಿಗೆ ಗೌರವ ಡಾಕ್ಟರೇಟ್ ನೀಡಲಾಯಿತು. ಎಂದು ಇಷ್ಟು ದಿನ ನಿಮ್ಮ ಶ್ರಮಕ್ಕೆ ತಕ್ಕ ಪ್ರತಿಫಲವೆಂದು ಕೊಂಡಾಡಿದರು ಮುತ್ತಪ್ಪನವರು ಡಾಕ್ಟರ್ ಮುತ್ತಪ್ಪ ರಾಗಿರುವುದನ್ನು ಕಂಡು ದೇವಮಾನವ ಎಂದುಕೊಂಡು ಕುಟುಂಬದ ಸದಸ್ಯರೆಲ್ಲರೂ ಅತ್ಯಂತ ಗೌರವಯುತವಾಗಿ ಅವರ ಆಶೀರ್ವಾದವನ್ನು ಪಡೆದರು ಈ ಸಂದರ್ಭದಲ್ಲಿ ಮುತ್ತಪ್ಪನವರ ಆನಂದ ಭಾಷ್ಪಗಳು ಕಣ್ಣನ್ನ ಒದ್ದೆಯಾದವು ನಮ್ಮ ನಾಟಕ ಮಾಸ್ತರಿಗೆ ಗೌರವ ಡಾಕ್ಟರೇಟ್ ಬಂದಾಗ ಅದಕ್ಕೂ ಪೂರ್ವದಲ್ಲಿ ಆನಂದದಾಯಕವಾದ ಡಾಕ್ಟರೇಟ್ ಬಂದಾಗ ಅವರ ಕಣ್ಣುಗಳು ಕಂಬನಿ ಮಿಡಿಯಲು ಕಾರಣರಾದವರು. .ಅಂದನಗೌಡ ಪೊಲೀಸ್ ಪಾಟೀಲ ಎಂದೊಡನೆ ಅವರು ಕೂಡ ಒಬ್ಬ ಕಲಾರಾಧಕರೆ ಅನೇಕ ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ನಿರೂಪಣೆಯಲ್ಲಿ ನಿಪುಣರಲ್ಲದೆ ಕಾರ್ಯಕ್ರಮವನ್ನು ಸಾಂಗವಾಗಿ ನೆರವೇರಿಸುವಲ್ಲಿ ಸಿದ್ಧಾಸ್ತರು.
ಮರುಗದೊಂದಿಗೆ
ಬರುವ ಪರಿಮಳದಂತೆ ಮಲ್ಲಿಗೆಯೊಂದಿಗೆ ಪವಿತ್ರತೆಯ ಮೂಡಿ ಬರುವಂತೆ
ಗುಲಾಬಿ ಒಂದಿಗೆ ನಯ ವಿನಯಗಳು ಸಾಗಿಬರುವಂತೆ ಕಲಾತ್ಮಕತೆ ಹುಟ್ಟಿ ಮೈದಳೆದು ಬಂದಂತೆ ಸರಸ್ವತಿಯ ಆರಾಧಕರು ಮುತ್ತಪ್ಪನವರ ಆದಿತ್ಯಕ್ಕೆ ಅಣಿಗೊಂಡದ್ದು ಕುಟುಂಬದವರ ಸಂತಸಕ್ಕೆ
ಎಣೆ ಇಲ್ಲದಂತಾಗಿತ್ತು .
ಕೆಳಗಡೆ ಅಂದಾನ ಗೌಡ ಪೊಲೀಸ್ ಪಾಟೀಲ್ ಇರ್ವರ ಆಚಲ ಆತ್ಮವಿಶ್ವಾಸದ ಅತಿಥಿ ಕೊನೆಗೆ ಒಂದು ಮನೆಯಲ್ಲಿ ಮಧ್ಯಾಹ್ನದ ಊಟ ಇನ್ನೊಂದು ಮನೆಯಲ್ಲಿ ಸಂಜೆಯ ಸಿಹಿ ಪಾನೀಯ
ಸೇರ್ಪಡೆಯೊಂದಿಗೆ ಬೆಂಗಳೂರಿನಿಂದ ಬಿಳ್ಕೊಂಡರು . ಸತ್ಯವನ್ನು ನಿತ್ಯ ಪೀಠದಲ್ಲಿರಿಸುವಂತೆ ಪರತತ್ವವನ್ನು ಪ್ರಣವದೊಂದಿಗೆ ಇಟ್ಟಂತೆ ಹೊಸ ರಸ್ತೆಯಲ್ಲಿ ಬೆರೆತು ಬೆಟ್ಟಪ್ಪನ ಕಾರು ಕಾಣದಂತೆ ಮುಖ ಮಾಡಿತು. ಬಹಳ ದಿನ ಕಳಕೇಶ, ನಾಟಕಸ್ತ ಮಾರರ ಸಂಪರ್ಕಕ್ಕೆ ಬಂದಿರಲಿಲ್ಲ ಇತ್ತ ನಾಟಕ ಮಾಸ್ತರು ಅವನ ವಿಚಾರದಲ್ಲಿದ್ದರಾದರೂ ಕೆಲವು ದಿನಗಳ ನಂತರ ಮಾಸ್ತರ್ ಸ್ನೇಹಿತರಿಂದ ನಿಮ್ಮ ಶಿಷ್ಯ ಕಳಶನಿಗೆ ಮೈ ಹುಷಾರಿಲ್ಲ ಎಂದು ಪ್ರಕಟಿಸಿದರು. ಇದನ್ನು ಕೇಳಿದ ಮಾಸ್ತರ್ ಅಂದೆ ಕಳಕೇಶನ ಮನೆಗೆ ಹೋಗಿ ಮುಖಾಮುಖಿ ಕಂಡರು. ಅಷ್ಟೊತ್ತಿಗೆ ತಾಯಿ ಮತ್ತು ತಮ್ಮ ಮಂಜುನಾಥನ ನಿರಂತರ ನಾಟಕದಲ್ಲಿ ಆರಾಮಾಗಿದ್ದ ಅಂದೇ ಮಾಸ್ತರರು ನಾಟಕಕ್ಕೆ ಕರೆದೊಯ್ದರು .ಅಲ್ಲದೆ ಕಳಕೇಶ ಈ ಹಿಂದೆ ಬರದಿದ್ದ ಹಲವಾರು ದಿನ ಅವರಲ್ಲಿಯೇ ಉಳಿದಿತ್ತು. ಆ ಕೃತಿಯನ್ನು ಅವರ ಕೈಗೆ ಕೊಟ್ಟು ಪ್ರಯೋಗಕ್ಕೆ ಅಣಿಗೊಳಿಸು ಎಂದು ಹೇಳುತ್ತಲೇ ಪ್ರತಿಯಾಗಿ ನಾನು ಯಾವುದಾದರೂ ಒಂದು ಗುರು ಕಾಣಿಕೆ ನೀಡಬೇಕೆಂಬ ಹಂಬಲ ಕಳಕೇಶನ ಅಂತರಂಗದಲ್ಲಿ ಅಲೆಯಂತೆ ಎದ್ದಿತು. ನಾಟಕ ಮಾಸ್ತರ್ ಮುತ್ತಪ್ಪನವರೊಂದು ಬಹುಮುಖ ಪ್ರತಿಭೆ ಇದಕ್ಕೆ ಕಾರಣ ಅವರ ತಾಯಿ ಭೀಮವ್ವಳ ಕರುಣೆ ಮಾರುತಿ ದೇವನ ಕೃಪೆಯಿಂದಲೇ ಅವರ ಬಲವಾದ ನಂಬಿಕೆ ಮೊದಲು ತಾಯಿ ಹಾಡುತ್ತಿದ್ದ ರೀತಿಯಲ್ಲಿ ಮುತ್ತಪ್ಪನವರಿಗೆ ಹಾಡುವುದು ರಕ್ತಗತವಾಗಿಯೇ ಬಂದಿತು. ಗುರುವಿನಿಂದ ರಾಗಗಳನ್ನು ತಿಳಿದು ಹಾಡಲಾರಂಭಿಸಿದರು . ಡೊಳ್ಳು ಮನೆಯಲ್ಲೇ ಇದ್ದುದರಿಂದ ಅದು ಕೂಡ ಕರಗತವಾಯಿತು. ಧರ್ಮದ ಗಂಡ ಕರ್ಮದ ಹೆಂಡತಿ ನಾಟಕದಲ್ಲಿ ಪ್ರಥಮವಾಗಿ ನಟನೆ ಆರಂಭಗೊಂಡದ್ದು ಕೃಷ್ಣನ ಪಾತ್ರದ ಮೂಲಕ ಗಯ್ಯಾಳಿ ಹೆಣ್ಣಿಗೆ ಗುಣವಂತ ಗಂಡ ನಾಟಕದಲ್ಲಿ ಹಾಸ್ಯ ಪಾತ್ರದೊಂದಿಗೆ ಹತ್ತಕ್ಕೂ ಹೆಚ್ಚು ನಾಟಕದ ಪಾತ್ರದ ಅಭಿನಯ ಸಕಲರ ಮೆಚ್ಚುಗೆ ಗಳಿಸಿತು.
ಅರಿವು ಕಣ್ ತೆರೆಯುವಂತೆ ಭಜನಾ ಮಂಡಳಿಯನ್ನು ಆರಂಭಿಸಿದ ಉತ್ತಪ್ಪನವರು ನಾಡಿನದ್ಯಂತ ಹಲವು ಬಾರಿ ಭಜನಾ ಮಂಡಳಿಯಲ್ಲಿ ಹಾಡುವುದನ್ನು ಕಲಿಸಿದರು ಇದೆಲ್ಲದಕ್ಕೂ ಹನಮನಾಳದ ಮಿತ್ರ ಬಳಗ ಅವರ ಬದುಕನ್ನು ರೂಪಿಸಲು ಅಣಿಯಾಗಿದೆ ಎಂದು ಮೆಲುಕು ಹಾಕಿದಾಗ ಬೆಂಗಾಡಿನಲ್ಲಿ ಬೀಸುವ ತಂಗಾಳಿ ಎಂದರೆ ಸ್ನೇಹ ಎಂಬ ಅಕ್ಷರ ಸಹ ಅನ್ವಯವಾಗುತ್ತದೆ. ಆದರೆ ಒಳ್ಳೆಯ ಸ್ನೇಹಿತ ಜೀವನಕ್ಕೆ ಅಮೃತ, ಕೆಟ್ಟ ಸ್ನೇಹಿತ ಜೀವನಕ್ಕೊಂದು ವಿಷ ಜಾಲಿಯ ಮರದಂತಾಗುವವರನ್ನು ಬೆಳೆಸಬಾರದು ಅವರಿಂದ ಇತರರಿಗೆ ಕೇಡಾಗುತ್ತದೆ ಬದುಕಿನಲ್ಲಿ ಸಾಧ್ಯವಾದರೆ ಒಳಿತನ್ನು ಮಾಡಬೇಕು .ಕೆಡಕನೆಂದಿಗೂ ಮಾಡದೇ ಇರೋಣ ಎಂಬ ಆಚಲತೆಯ ಬದುಕಿನ ಹಾದಿ ಡಾಕ್ಟರ್ ಮುತ್ತಪ್ಪ ಅವರದು. ನೂಲಿನಂತೆ ಸೀರೆ, ತಾಯಿಯಂತೆ ಮಗಳು ಗುರುವಿನಂತೆ ಶಿಷ್ಯ ದೃಷ್ಟಿಯಂತೆ ಸೃಷ್ಟಿ ಎಂಬಂತೆ ಅವರ ಶಿಷ್ಯ ಕಳಕೇಶರವರು ಕೂಡ ಅದೇ ಸತ್ಯನಿಷ್ಠೆ ಸ್ವಾವಲಂಬನೆ ಸಮಸ್ತಿವಳತಿನ ಹಾದಿ ಸಾಮಾಜಿಕ ನಾಟಕಗಳ ನಾಟಕ ಕ್ಷೇತ್ರದಲ್ಲಿ ಮುಂದೆ ಸಾಗುವ ಮುತ್ತಪ್ಪನವರಮುತ್ತಿನಂತ ಶಿಷ್ಯ.ಸಾಮಾಜಿಕ ನಾಟಕಗಳ ರಂಗದ ಪರಿಯ
ಬಣ್ಣಿಸಲು ಬಲವಿಲ್ಲ.
ಇಂಥ ನಾಟಕದ ಮರ್ಮವನ್ನು ಅರಿಯದ ಜನರ
ಗೊಂದಲವೇ ಜಗವೆಲ್ಲ.
ಈ ಸಾಮಾಜಿಕ ರಂಗಭೂಮಿ ಇಂದಲೇ ನಟರು ಸಿದ್ದಿಯನ್ನು ಸಾಧಿಸಲಿ ತತ್ವ ಸಿದ್ಧಾಂತಗಳು ಮೂಡಿ ಮಾಡುವವರಲ್ಲಿ ಚಿರ ಚೇತನವನು ಸದಾ ತರಲಿ ಎಂದು ಸತ್ಯದರ್ಶನ ಪತ್ರಿಕೆಯು ಹಾರಿಸುತ್ತಿದೆ .
ಪ್ರೊ.ಬಿಕೆ ಮಾಡಿ
