Satya Darshana
ಬಿಸಿ ಬಿಸಿ ಸುದ್ದಿ
ಜಿಲ್ಲೆಬಿಸಿ ಬಿಸಿ ಸುದ್ದಿರಾಜ್ಯ

ತಾಯಿಯ ಹೆಸರಿನಲ್ಲಿ ಒಂದು ವೃಕ್ಷ – ಕೇಂದ್ರ ಹಾಗೂ ರಾಜ್ಯ ಸರ್ಕಾರದ ವಿಶೇಷ ಕಾರ್ಯಕ್ರಮ

ತಾಯಿಯ ಹೆಸರಿನಲ್ಲಿ ಒಂದು ವೃಕ್ಷಕೇಂದ್ರ ಹಾಗೂ ರಾಜ್ಯ                ಸರ್ಕಾರದ ವಿಶೇಷ ಕಾರ್ಯಕ್ರಮ

ಶಿರಹಟ್ಟಿ: ತಾಯಿ ಪ್ರಕೃತಿಯ ಸ್ವರೂಪ ತಾಯಿಯ ಹೆಸರನ್ನು ಅಮರವಾಗಿಸಲು ಪ್ರತಿಯೊಬ್ಬರೂ ಒಂದೊಂದು ಸಸಿಯನ್ನು ನೆಟ್ಟು ಪರಿಸರವನ್ನು ಕಾಪಾಡಬೇಕು. ಹಾಗೆಯೇ ಪರಿಸರ ಪ್ರೇಮವನ್ನು ಬೆಳೆಸಿಕೊಳ್ಳಬೇಕು ಎಂದು ಬೆಳ್ಳಟ್ಟಿ ಗ್ರಾಮ ಪಂಚಾಯಿತಿಯ ಅಧ್ಯಕ್ಷರಾದ ರಮೇಶ ಪಂಚಪ್ಪ ನಿರ್ವಾಣಶೆಟ್ಟರ್ ಅವರು ಹೇಳಿದರು.

ತಾಲೂಕು ಪಂಚಾಯ್ತಿ ,ಬೆಳ್ಳಟ್ಟಿ ಗ್ರಾಮ ಪಂಚಾಯಿತಿ, ತೋಟಗಾರಿಕಾ ಇಲಾಖೆ ಹಾಗೂ ಸಾಮಾಜಿಕ ಅರಣ್ಯ ಇಲಾಖೆಗಳ ಸಹಯೋಗದಲ್ಲಿ, ಕೇಂದ್ರ ಹಾಗೂ ರಾಜ್ಯ ಸರ್ಕಾರದ ನಿರ್ದೇಶನದ ಮೇರೆಗೆ ವಿಶ್ವ ಪರಿಸರ ದಿನಾಚರಣೆ ಅಂಗವಾಗಿ ಜರುಗಿದ ತಾಯಿಯ ಹೆಸರಲ್ಲಿ ಒಂದು ವೃಕ್ಷ ಅಭಿಯಾನ ಕಾರ್ಯಕ್ರಮಕ್ಕೆ ಇಂದು ಬೆಳ್ಳಟ್ಟಿಯ ಕರ್ನಾಟಕ ಪಬ್ಲಿಕ್ ಹೆಣ್ಣು ಮಕ್ಕಳ ಶಾಲೆಯಲ್ಲಿ ಚಾಲನೆ ನೀಡಿದ ಆರ್ ವಿ ದೊಡ್ಮನಿ ಅವರು ನಂತರ ಮಾತನಾಡುತ್ತಾ.

ತಾಯಿಯ ಋಣವನ್ನು ತೀರಿಸಲು ಯಾರಿಂದಲೂ ಸಾಧ್ಯವಿಲ್ಲ ಆದರೆ ಈ ಮೂಲಕವಾದರೂ ತಾಯಿಯ ಹೆಸರಿನಲ್ಲಿ ಸಸಿ ಬೆಳೆಸಿ ಪ್ರಕೃತಿಗೆ ಕೊಡುಗೆಯಾಗಿ ನೀಡಬೇಕೆಂದು ತಿಳಿಸಿದರು. ಪರಿಸರವನ್ನು ನಾವು ಹಸಿರಾಗಿಸಿದರೆ ಅದು ನಮಗೆ ಉಸಿರನ್ನು ನೀಡುತ್ತದೆ. ಹಸಿರೇ ಉಸಿರಾಗಬೇಕು ಎಂದು ಹೇಳಿದರು.

ಈ ಸಂದರ್ಭದಲ್ಲಿ ಗ್ರಾ.ಪಂ. ಸದಸ್ಯರಾದ ಮೋಹನ್ ಚಂದ್ ಗುತ್ಯಮ್ಮನವರ್, ರಮೇಶ್ ಮಲ್ಲಾಡದ, ಸುರೇಶ್ ರೆಡ್ಡಿ ಬಸವ ರೆಡ್ಡಿ, ದ್ಯಾಮಣ್ಣ ಮಾಳಮ್ಮನವರ್, ಪಿಡಿಒ ಹನುಮಂತಪ್ಪ ತಳವಾರ್. ಕಾರ್ಯದರ್ಶಿ ಬಸವರಾಜ್, ಉಪವಲಯ ಅರಣ್ಯ ಅಧಿಕಾರಿ ಶಂಕ್ರಪ್ಪ ಕೊಣಪ್ಪನವರ್, ಸಹಾಯಕ ತೋಟಗಾರಿಕೆ ನಿರ್ದೇಶಕರು ರಮೇಶ ಹಾವರಡ್ಡಿ, ಸಹಾಯಕ ತೋಟಗಾರಿಕೆ ಅಧಿಕಾರಿ ಲಕ್ಷ್ಮಿ ಗಾಣಿಗೇರ, ಟಿ ಐ ಇ ಸಿ ಮಂಜುನಾಥ ಸ್ವಾಮಿ ಹೆಚ್ ಎಂ,ತಾಲೂಕು ನರೇಗಾ ಸಿಬ್ಬಂದಿ, ಜಿಕೆಎಂ, ವಿಶಾಲಾಕ್ಷಿ,ಶಾಲಾ ಶಿಕ್ಷಕರು,ಎಸ್.ಡಿಎಂಸಿ ಸದಸ್ಯರು, ಅಡುಗೆ ಸಿಬ್ಬಂದಿ, ವಿದ್ಯಾರ್ಥಿಗಳು,ಗ್ರಾ.ಪಂ ಸಿಬ್ಬಂದಿ, ಸಾರ್ವಜನಿಕರು ಉಪಸ್ಥಿತರಿದ್ದರು.

Related posts

ಅಹೋರಾತ್ರಿ ಧರಣಿಗೆ ಎಐಸಿಸಿ ಮೆಚ್ಚುಗೆ… ಡಿಕೆಶಿ ಜಾಣತನದ ಹೆಜ್ಜೆಗೆ ಕಾಂಗ್ರೆಸ್ ಹೈಕಮಾಂಡ್ ಶಹಬ್ಬಾಸ್…

satyadarshana

ಅಭಿವೃದ್ಧಿ ಮಂತ್ರ ಪಠಿಸಿ ಮತಯಾಚಿಸಿದ ‘ಸಿಎಂ ಬಸವರಾಜ್ ಬೊಮ್ಮಾಯಿ ‘

satyadarshana

ಹಳೇ ಅಭ್ಯರ್ಥಿಗಳಿಗೆ ಹೊಸ ಸವಾಲು.ಗಂಗಾವತಿ ಕ್ಷೇತ್ರ ಸ್ಥಿತಿ–ಗತಿ

satyadarshana

Leave a Comment