ಗದಗ : ಜೂನ್ 24:ಎಲ್ಲಾ ಇಲಾಖೆಯ ಅಧಿಕಾರಿಗಳು ತಮಗೆ ಬಂದ ಅಹವಾಲುಗಳನ್ನು ನಿಷ್ಕಕಾಳಜಿ ತೊರದೆ ಶೀಘ್ರ ವಿಲೇವಾರಿ ಮಾಡಬೇಕು ಎಂದು ಜಿಲ್ಲಾಧಿಕಾರಿ ವೈಶಾಲಿ.ಎಂ.ಎಲ್ ಅವರು ಹೇಳಿದರು.
ನಗರದ ಜಿಲ್ಲಾಡಳಿತ ಭವನದ ಮುಖ್ಯ ಸಭಾಂಗಣದಲ್ಲಿ ಗದಗ ಜಿಲ್ಲಾಧಿಕಾರಿ ಅವರ ಅಧ್ಯಕ್ಷತೆಯಲ್ಲಿ ಗದಗ ತಾಲೂಕಿನ ಸಾರ್ವಜನಿಕರಿಂದ ಅಹವಾಲು ಕುಂದುಕೊರತೆ, ದೂರು ವಿಚಾರಣೆ ಹಾಗೂ ಪ್ರಕರಣ ವಿಲೇವಾರಿಯ ಗದಗ ತಾಲೂಕ ಮಟ್ಟದ ಜನಸ್ಪಂದನ ಕಾರ್ಯಕ್ರಮಕ್ಕೆ ಅವರು ಚಾಲನೆ ನೀಡಿದರು.
ಮೊದಲನೇಯದಾಗಿ ಅಸುಂಡಿ ಗ್ರಾಮದ ವೀರಯ್ಯ ಶಿವಯ್ಯ ಗುರಬಶೆಟ್ಟೆಮಠ ಅವರು ನಿವೇಶನ ಖರಿದಿಸಿ ಮನೆಯನ್ನು ಕಟ್ಟಿ 3-4 ವರ್ಷವಾದರೂ ಯಾವುದೇ ರೀತಿಯ ಮೂಲಭೂತ ಸೌಲಭ್ಯಗಳು ಇಲ್ಲದ ಕಾರಣ ತುಂಬಾ ತೊಂದರೆಯಾಗುತ್ತಿದ್ದು, ಮನೆಗೆ ವಿದ್ಯುತ್ ಅನ್ನು ಸಹ ತಾತ್ಕಾಲಿಕವಾಗಿ ತೆಗೆದುಕೊಂಡಿದ್ದರಿಂದ ತಿಂಗಳಿಗೆ 1 ಸಾವಿರ ಯಿಂದ 2 ಸಾವಿರ ರೂ ವಿದ್ಯುತ್ ಬಿಲ್ ಬರುತ್ತಿದೆ ಎಂದು ಹೇಳಿದರು. ಅಹವಾಲು ಸ್ವೀಕರಿಸಿದ ಜಿಲ್ಲಾಧಿಕಾರಿ ಅವರು ಸಂಬಂಧಿಸಿದ ಅಧಿಕಾರಿಗಳಿಗೆ ಮೂಲಭೂತ ಸೌಕರ್ಯಗಳನ್ನು ಕಲ್ಪಿಸಲು ಸೂಚಿಸಿದರು.
ಎರಡನೇಯದಾಗಿ ನರಸಾಪೂರ ಗ್ರಾಮದ ಈರಪ್ಪ ಕಾಳಪ್ಪ ಬಡಿಗೇರ ತಮ್ಮ ಕಾರ್ಮಿಕ ಕಾರ್ಡ ರದ್ದಾಗಿದ್ದು ಹಲವಾರು ಬಾರಿ ಕಾರ್ಮಿಕ ಇಲಾಖೆಗೆ ಹೋದರು ಸಹ ಯಾವುದೇ ಪ್ರಯೋಜನವಾಗಿಲ್ಲ ಎಂದು ಅಹವಾಲು ಸಲ್ಲಿಸಿದರು. ಮೂರನೇಯದಾಗಿ ನಗರದ ಗಂಗಾಪೂರ ಪೇಟೆಯ ರೇಣುಕಾ ಹಾತಲಗೇರಿ ತಮಗೆ ಮನೆಯಿಲ್ಲ ಹಾಗಾಗಿ ಮನೆ ಕೊಡಲು ಕೇಳಿದಾಗ ಜಿಲ್ಲಾಧಿಕಾರಿಗಳು ಸಂಬಂಧಿಸಿದ ಅಧಿಕಾರಿಗಳಿಗೆ ನಿಯಮಾನುಸಾರ ಪರಿಶೀಲನೆ ಮಾಡಿ ಮನೆ ನೀಡಲು ಸೂಚಸಿದರು.
ನಗರದ 1ನೇ ಕ್ರಾಸ್ ನ ಹುಡ್ಕೊ ಕಾಲೋನಿಯ ಜಾಗೃತ ಗಜಾನನ ಸೇವಾ ಸಮಿತಿಯಿಂದ ಸ್ವಾತಂತ್ರ ವಿಜ್ಞಾನ ಉದ್ಯಾನವನದಲ್ಲಿ ದೀಪಗಳು ಹೋಗಿದ್ದರಿಂದ ಸಾರ್ವಜನಿಕರಿಗೆ ತೊಂದರೆಯಾಗುತ್ತಿದ್ದು ಹಲವಾರು ಬಾರಿ ನಗರಸಭೆಗೆ ದೂರು ನೀಡಿದರು ರೀಪೇರಿ ಮಾಡಿಸಿಲ್ಲ ಎಂದು ಅಹವಾಲು ನೀಡಿದರು.ಅದನ್ನು ಸ್ವೀಕರಿಸಿದ ಜಿಲ್ಲಾಧಿಕಾರಿಗಳು,ನಗರ ಸಭೆಯ ಪೌರಾಯುಕ್ತರಿಗೆ ಕೂಡಲೇ ಉದ್ಯಾನ ವನಕ್ಕೆ ಬೀದಿದೀಪ ಅಳವಡಿಸಲು ಸೂಚನೆ ನೀಡಿದರು.
ನಗರದ ನಿವಾಸಿಯಾದ ರಮೇಶ ಎಚ್ ಮೇರೆವಾಡೆ ಹಿರಿಯ ನಾಗರಿಕರಿಗೆ ನಗರ ಸಂಚಾರಿ ಬಸ್ ಗಳು ಸರಿಯಾಗಿ ಲಭ್ಯವಿಲ್ಲದ ಕಾರಣ ಹಾಗೂ ರಸ್ತೆಯಲ್ಲಿರುವ ಗುಂಡಿ ಸೇರಿದಂರೆ ಸಾರ್ವಜನಿಕ ಉದ್ಯಾನವನದ ಅವ್ಯವಸ್ಥೆ ಸರಿಪಡಿಸುವಂತೆ ಅಹವಾಲು ನೀಡಿದರು ಅದನ್ನು ಸ್ವೀಕರಿಸಿದ ಜಿಲ್ಲಾಧಿಕಾರಿ ಅವರು ಸಂಚಾರಿ ಬಸ್ ಗಳು ಸರಿಯಾದ ಸಮಯಕ್ಕೆ ಹೋಗುವಂತೆ ನೋಡಿಕೊಳ್ಳಬೇಕೆಂದು ಕೆ.ಎಸ್.ಆರ್.ಟಿ.ಸಿ ವ್ಯವಸ್ಥಾಪಕ ನಿರ್ದೇಶಕರಿಗೆ ಸೇರಿದಂತೆ ರಸ್ತೆ ಮತ್ತು ಉದ್ಯಾನವನ ಸುವ್ಯವಸ್ಥಿತವಾಗಿಡು ಸಂಬಂಧಿಸಿದ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಹುಲಕೋಟಿ ಹದ್ದಿನ ಅಸುಂಡಿ ಗ್ರಾಮದ ರಿಸ್.ನಂ.339/1ರಿಂದ 34 ರ ವರೆಗಿನ 50 ಎಕರೆಕ್ಕೂ ಹೆಚ್ಚು ಹೊಲಗಳಿಗೆ ದಾರಿಯಿಲ್ಲದ ಕಾರಣ ಬೆಳೆ ಬೆಳೆಯಲು ತುಂಬಾ ತೊಂದರೆಯಾಗುತ್ತಿದೆ ಎಂದು ಗ್ರಾಮಸ್ಥರು ಅಹವಾಲು ನೀಡಿದರು. ಅದನ್ನು ಸ್ವೀಕರಿಸಿದ ಜಿಲ್ಲಾಧಿಕಾರಿಗಳು ಸಂಬಂಧಿಸಿದ ತಹಶಿಲ್ದಾರಿಗೆ ನಿಯಮಾನುಸರ ಪರಿಶೀಲನೆ ಮಾಡಿ ಎಂದು ಸೂಚಿಸಿದರು.
ರಾಜೀವಗಾಂಧೀ ನಗರದ ನಿವಾಸಿಯಾದ ರಮೇಶ ಕೋಳೂರ ಪ್ರತಿ ತಾಲೂಕ ಮಟ್ಟದಲ್ಲಿ ನಡೆಯ ಬೇಕಾದ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ ಕುಂದುಕೊರತೆಗಳ ಸಭೆಗಳು ಸರಿಯಾದ ಸಮಯಕ್ಕೆ ನಿಯಮಿತವಾಗಿ ಜರಗುತ್ತಿಲ್ಲ ಎಂದು ಅಹವಾಲು ನೀಡಿದರು ಅದನ್ನು ಸ್ವೀಕರಿಸಿದ ಜಿಲ್ಲಾಧಿಕಾರಿಗಳು ನಿಯಮಿತವಾಗಿ ಸಭೆಗಳನ್ನು ಜರುಗಿಸಬೇಕೆಂದು ಸಂಬಂಧಿಸಿದ ಅಧಿಕಾರಿಗಳಿಗೆ ಸೂಚಿಸಿದರು.
ನಂತರ ಲಕ್ಕುಂಡಿ ಗ್ರಾಮದ ಉಮೇಶಗೌಡ ಯಲ್ಲಪ್ಪಗೌಡ ಪಾಟೀಲ್ ಅವರಿಗೆ ಬಂದ ಬೆಳೆ ಪರಿಹಾರ ಮತ್ತು ಪ್ರಧಾನ ಮಂತ್ರಿ ಕಿಸಾನ್ ಯೋಜನೆಯ ಹಣವನ್ನು ಬ್ಯಾಂಕ್ ನವರು ತಮ್ಮ ಸಾಲದ ಖಾತೆಗೆ ಜಮಾಮಾಡಿಕೊಂಡಿದ್ದಾರೆ ಎಂದು ಅಹವಾಲು ನೀಡಿದರು ಅದನ್ನು ಸ್ವೀಕರಿಸಿದ ಜಿಲ್ಲಾಧಿಕಾರಿಗಳು ಕೂಡಲೇ ಬೆಳೆಪರಿಹಾರದ ಹಣವನ್ನು ಹಿಂತಿರುಗಿಸುವಂತೆ ಸಂಬಂಧಿಸಿದ ಬ್ಯಾಂಕ್ ಮ್ಯಾನೇಜರ್ ಗಳಿಗೆ ಸೂಚಿಸಿದರು.
ಕಾರ್ಯಕ್ರಮದಲ್ಲಿ ಜಿಲ್ಲಾ ಪಂಚಾಯತ ಕಾರ್ಯನಿರ್ವಾಹಣಾಧಿಕಾರಿ ಭರತ್ ಎಸ್.
ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿ ಬಿ.ಎಸ್.ನೇಮಗೌಡ, ಹೆಚ್ಚುವರಿ ಪೊಲೀಸ್ ವರಿಷ್ಟಾಧಿಕಾರಿ ಎಂ.ಬಿ.ಸಂಕದ ಸೇರಿದಂತೆ ಜಿಲ್ಲಾಮಟ್ಟದ ಅಧಿಕಾರಿಗಳು ಮತ್ತು ಸಾರ್ವಜನಿಕರು ಹಾಜರಿದ್ದರು.
ಜನಸ್ಪಂದನ ಕಾರ್ಯಕ್ರಮದಲ್ಲಿ ಗದಗ ತಾಲೂಕನಾದ್ಯಂತ 57ಅರ್ಜಿಗಳು ಬಂದವು ಕೆಲ ಅಹವಾಲುಗಳಿಗೆ ಸ್ಥಳದಲ್ಲಿಯೇ ಪರಿಹಾರ ದೊರೆಯಿತು.ಉಳಿದವುಗಳನ್ನು ನಿಯಮಾನುಸಾರ ಶೀರ್ಘ ವಿಲೇವಾರಿ ಮಾಡಲು ಸಂಬಂಧಿಸಿದ ಅಧಿಕಾರಿಗಳಿಗೆ ಸೂಚಿಸಿದರು.
ಕಾರ್ಯಕ್ರಮವನ್ನು ತಹಶೀಲ್ದಾರ ಶ್ರೀನಿವಾಸ ಕುಲಕರ್ಣಿ ಸ್ವಾಗತಿಸಿದರು. ವಿಭಾಗಾಧಿಕಾರಿ ಡಾ. ವೆಂಕಟೇಶ ನಾಯ್ಕ ನಿರೂಪಿಸಿದರು.
