Satya Darshana
ಬಿಸಿ ಬಿಸಿ ಸುದ್ದಿ
ಜಿಲ್ಲೆಬಿಸಿ ಬಿಸಿ ಸುದ್ದಿರಾಜ್ಯ

ಕರ್ನಾಟಕ ದಲಿತ ಸಂಘರ್ಷ ಸಮಿತಿ ಗಜೇಂದ್ರಗಡ ತಾಲೂಕು ಸಮಿತಿ ಯಿಂದ ಆಹಾರ ನಿರೀಕ್ಷಕರ ಹುದ್ದೆ ಭರ್ತಿ ಮಾಡುವಕುರಿತು ಮನವಿ

      ಕರ್ನಾಟಕ ದಲಿತ ಸಂಘರ್ಷ ಸಮಿತಿ ಗಜೇಂದ್ರಗಡ       ತಾಲೂಕು ಸಮಿತಿ ಯಿಂದ ಆಹಾರ ನಿರೀಕ್ಷಕರ ಹುದ್ದೆ ಭರ್ತಿ                          ಮಾಡುವಕುರಿತು ಮನವಿ

 ಗಜೇಂದ್ರಗಡ:

ಗಜೇಂದ್ರಗಡ ತಾಲೂಕಿಗೆ ಆಹಾರ ನೀರಿಕ್ಷಕರು ಮರಣ ಹೊಂದಿದ ನಂತರ ಆಹಾರ ನೀರಿಕ್ಷಕರ ಹುದ್ದೆ ಖಾಲಿ ಇದ್ದು ಇದುವರೆಗೆ ಯಾರನ್ನು ನೇಮಕ ಮಾಡಿರುವದಿಲ್ಲ.

ಕಾರಣ ಇದರಿಂದಾಗಿ ಸಾರ್ವಜನಿಕರಿಗೆ ಬಹಳ ತೊಂದರೆಯಾಗಿದೆ ಹಾಗಾಗಿ ತಕ್ಷಣ ತಾವು ಗಜೇಂದ್ರಗಡ ತಾಲೂಕಿಗೆ ಆಹಾರ ನೀರಿಕ್ಷಕರನ್ನು ಅತೀಶೀಘ್ರವಾಗಿ ನೇಮಕ ಮಾಡಬೇಕು ಮತ್ತು ಈಗಿರುವ ರೋಣ ತಾಲೂಕ ತಹಶೀಲ್ದಾರ ಕಾರ್ಯಾಲಯದಲ್ಲಿ ಶಿರಸ್ತೆದಾರರಾಗಿ ಕಾರ್ಯನಿರ್ವಹಿಸುತ್ತಿರುವ ಶ್ರೀಮತಿ ಶಾಂತಾಬಾಯಿ ಚವಡಿಯವರನ್ನು ಗಜೇಂದ್ರಗಡ ತಾಲೂಕ ಆಹಾರ ನಿರೀಕ್ಷಕರಾಗಿ ತಾತ್ಕಾಲಿಕವಾಗಿ ಸೇವೆಸಲ್ಲಿಸುತ್ತಿದ್ದಾರೆ.

ಇವರು ಸರಿಯಾಗಿ ಸಾರ್ವಜನಿಕರಿಗೆ ಕೆಲಸ ಆಗದಕಾರಣ ಇವರನ್ನು ಈ ಸೇವೆಯಿಂದ ತೆಗೆದು ಹಾಕಬೇಕು. ಮತ್ತು ಖಾಲಿ ಇರುವ ಆಹಾರ ನಿರೀಕ್ಷಕರ ಹುದ್ದೆಗೆ ಬೇರೆಯವರನ್ನು ನೇಮಕ ಮಾಡಬೇಕು.

ಇದರಿಂದ ಸಾರ್ವಜನಿಕರು ದಿನಾಲೂ ಗಜೇಂದ್ರಗಡ ತಹಶೀಲ್ದಾರ ಕಛೇರಿಗೆ ಅಲೆದಾಡುವುದು ತಪ್ಪುತ್ತದೆ ಮತ್ತು ಸಾರ್ವಜನಿಕರಿಗೆ ಅನುಕೂಲವಾಗುತ್ತದೆ. ತಾವು ದಯಮಾಡಿ ಆಹಾರ ನಿರೀಕ್ಷಕರನ್ನು ನೇಮಕ ಮಾಡಬೇಕೆಂದು ತಮ್ಮಲ್ಲಿ ಸಾರ್ವಜನಿಕರೊಂದಿಗೆ ಹಾಗೂ ನಮ್ಮ ಸಂಘಟನೆಯಿಂದ ವಿನಂತಿ. ತಶೀಲ್ದಾರ್ ಮುಖಾಂತರ ಮನವಿ ಸಲ್ಲಿಸಿದರು ಕರ್ನಾಟಕ ದಲಿತ ಸಂಘರ್ಷ ಸಮಿತಿ ಗಜೇಂದ್ರಗಡ ತಾಲೂಕು ಸಮಿತಿ ಯಿಂದ ಆಹಾರ ನಿರೀಕ್ಷಕರ ಹುದ್ದೆ ಭರ್ತಿ ಮಾಡುವಕುರಿತು ಮನವಿ ಸಲ್ಲಿಸುವ ಸಂದರ್ಭದಲ್ಲಿ ಭಾಗವಹಿಸಿದ ಗಜೇಂದ್ರಗಡ ತಾಲೂಕು ಅಧ್ಯಕ್ಷರು ಶ್ರೀ ಯಮನೂರಪ್ಪ ಹರಿಜನ. ತಾಲೂಕು ಸಂಘಟನೆಯ ಪ್ರಧಾನಕಾರ್ಯದರ್ಶಿ.ಯಮನೂರಅಬ್ಬಿಗೇರಿ.ಗಜೇಂದ್ರಗಡ ನಗರ ಘಟಕದ ಅಧ್ಯಕ್ಷರು ಶರಣು ಅರಳಿಗಿಡದ. ರಮೇಶ್ ಗುಡಿಮನಿ ಚಂದ್ರು ಮಾದರ್ ಮುತ್ತು ಗೋಗೇರಿ ಶರಣಪ್ಪ ರಾಜೂರು ಕರ್ನಾಟಕ ದಲಿತ ಸಂಘರ್ಷ ಸಮಿತಿ ಉಪಸ್ಥಿತರಿದ್ದರು

Related posts

ಮತದಾನ ಮಹತ್ವ ಕುರಿತು ಜಾಗೃತಿ ಕಾರ್ಯಕ್ರಮ ಜಿಲ್ಲಾಧಿಕಾರಿ ಅವರಿಂದ ಪ್ರತಿಜ್ಞಾ ವಿಧಿ ಬೋಧನೆ

satyadarshana

ಬದಲಾವಣೆಯ ಹಾದಿಯಲ್ಲಿ ಜಕ್ಕಲಿ ಸರ್ಕಾರಿ ಶಾಲೆ: ದಾಖಲಾತಿ ಆಂದೋಲನಕ್ಕೆ ಭರ್ಜರಿ ಚಾಲನೆ

satyadarshana

ಮಹಿಳೆಯರಿಂದ ಗ್ರಾಮ ಪಂಚಾಯಿತಿಗೆ ಮುತ್ತಿಗೆ.

satyadarshana

Leave a Comment