Satya Darshana
ಬಿಸಿ ಬಿಸಿ ಸುದ್ದಿ
ಜಿಲ್ಲೆಬಿಸಿ ಬಿಸಿ ಸುದ್ದಿರಾಜ್ಯ

ಎಲ್ಲಾ ಹಳ್ಳಗಳಿಗೆ ಸಮರ್ಪಕ ಬಸ್ ಬಿಡಲು ಒತ್ತಾಯಿಸಿ ವಿದ್ಯಾರ್ಥಿಗಳು ದಿಢೀರ್ ಹೋರಾಟ

 

ಗಜೇಂದ್ರಗಡ: ಎಲ್ಲಾ ಹಳ್ಳಿಗಳಿಗೆ ಸಮರ್ಪಕ ಬಸ್ ಬಿಡಲು ಒತ್ತಾಯಿಸಿ ವಿದ್ಯಾರ್ಥಿಗಳು ಎಸ್ ಎಫ್ ಐ ನೇತೃತ್ವದಲ್ಲಿ ದಿಢೀರ್ ಪ್ರತಿಭಟನೆ ಮಾಡಿದರು.

ಗಜೇಂದ್ರಗಡದ ಬಸ್ ನಿಲ್ದಾಣದಲ್ಲಿ ವಿದ್ಯಾರ್ಥಿಗಳು ಹಳ್ಳಿಗಳಿಗೆ ಬಸ್ ಬಿಡಲು ಕೇಳಿಕೊಂಡರು 2:30 ಕ್ಕೆ ಪ್ರತಿ ದಿನ ಬಿಡುವ ಗಜೇಂದ್ರಗಡ ಬಾದಾಮಿ ಬಸ್ ಕಳೆದ 4-5 ದಿನದಿಂದ ಬಿಡುತ್ತಿಲ್ಲಾ ಕೇಳಿದರೆ ಇರುವ ಬಸ್ ಹತ್ತಿ ಹೋಗಿ ಎಂದು ಕಂಟ್ರೋಲರ್ ಸರಿಯಾಗಿ ಉತ್ತರ ನೀಡದೆ ವಿದ್ಯಾರ್ಥಿಗಳನ್ನು ಬೇದರಿಸುತ್ತಾರೆ. ಆದ್ದರಿಂದ ಬೇಸತ್ತ ವಿದ್ಯಾರ್ಥಿಗಳು ಭಾರತ ವಿದ್ಯಾರ್ಥಿ ಫೆಡರೇಷನ್‌ (ಎಸ್ ಎಫ್ ಐ) ನೇತೃತ್ವದಲ್ಲಿ ಇಂದು ಬಸ್ ನಿಲ್ದಾಣದಲ್ಲಿ ಬಸ್ ತಡೆದು ಪ್ರತಿಭಟನೆ ಮಾಡಿದರು.

ಈ ಸಂದರ್ಭದಲ್ಲಿ ಎಸ್ ಎಫ್ ಐ ನ ರಾಜ್ಯ ಪದಾಧಿಕಾರಿಗಳಾದ ಗಣೇಶ ರಾಠೋಡ್ ಮಾತನಾಡಿ ಕಳೆದ ಒಂದು ತಿಂಗಳ ಹಿಂದೆಯೇ ಹಳ್ಳಿಗಳಿಗೆ ಬಸ್ ಬಿಡಲು ಮನವಿ ನೀಡಲಾಗಿತ್ತು ಆದರೆ ಈವರೆಗೂ ಅದರ ಬಗ್ಗೆ ಪರಿಹರಿಸಲು ಮುಂದಾಗಿಲ್ಲಾ. ಈ ವಿಚಾರವಾಗಿ ಮಾನ್ಯ ತಶೀಹಲ್ದಾರರಿಗೂ ಮನವಿ ಮಾಡಲಾಗಿತ್ತು ಅವರು ಡಿಪೋ ಮಾನ್ಯೇಜರ್ ಜೊತೆ ಮಾತನಾಡುತ್ತೆನೆ ಎಂದು ಭರವಸೆ ನೀಡಿದ್ದರು ಆದರೂ ಸಮಸ್ಯೆಗೆ ಪರಿಹಾರ ಸಿಗದೇ ಇಂದು ಅನಿವಾರ್ಯವಾಗಿ ಬಸ್ ತಡೆದು ಪ್ರತಿಭಟನೆ ಮಾಡಲಾಗುತ್ತಿದೆ ಎಂದು ಹೇಳಿದರು.

ನಂತರ ಎಸ್ ಎಫ್ ಐ ತಾಲ್ಲೂಕು ಮುಖಂಡರಾದ ಚಂದ್ರು ರಾಠೋಡ್ ಮಾತನಾಡಿ ನಾವು ಈ ಹಿಂದೆ ಹಲವಾರು ಭಾರಿ ಮನವಿ ಮಾಡಿದ್ದೆವೆ ಆದರೂ ಬಸ್ ಬಿಡಲು ಡಿಪೋ ಮಾನ್ಯೇಜರ್ ಮುಂದಾಗುತ್ತಿಲ್ಲಾ ಹಾಗಾಗಿ ಇಂದು ಹೋರಾಟ ಮಾಡಲಾಗುತ್ತಿದೆ ಹೀಗೆ ಸಮಸ್ಯೆ ಪರಿಹರಿಸದೇ ಇದ್ದರೆ ಹೋರಾಟವನ್ನು ತೀವ್ರಗೋಳಿಸಲಾಗುವುದು ಎಂದರು

ಹೋರಾಟದ ಸ್ಥಳಕ್ಕೆ ಡಿಪೋ ಮ್ಯಾನೇಜರ್ ಅನುಪಸ್ಥಿತಿಯಲ್ಲಿ ಡಿಪೋ ಸಿಬ್ಬಂದಿಗಳು ಬಂದು ನಾಳೆ ಮಿಟಿಂಗ್ ಕರೆಯುತ್ತೆವೆ. ಸಮಸ್ಯೆ ಪರಿಹಾರಕ್ಕೆ ಕ್ರಮ ಕೈಗೊಳ್ಳುತ್ತೆವೆ ಎಂದು ಭರವಸೆ ನೀಡಿದ ಮೇಲೆ ಹೋರಾಟ ಹಿಂಪಡೆಯಲಾಯಿತು.

ಈ ಸಂದರ್ಭದಲ್ಲಿ ಎಸ್ ಎಫ್ ಐ ಮುಖಂಡರಾದ ಯೋಗಿಶ ಚಿಟಗಿ, ಮಾಂತೇಶ ಪೂಜಾರ, ನಾಗರಾಜ ಎಸ್ ಎಮ್, ಅಪ್ಪು ಪೂಜಾರ, ಮುಪಯ್ಯ ಬೆಳವಣಕಿ, ಮಣಿಕಂಠ, ಸರ್ವೆಶ ಕುರಿ, ಮುತ್ತುರಾಜ್ ಕುದರಿ, ವೀರಪ್ಪ ನಾಯಕ, ನಾಗರಾಜ ಉಸಲಕೊಪ್ಪದ, ಶರಣಪ್ಪ ರೋಣದ, ಮತ್ತಣ್ಣ ರೋಣದ ಮತ್ತು ಇತರರು ಹಾಜರಿದ್ದರು.

ವರದಿ. ಶ್ರೀಕಾಂತ ಅಂಗಡಿ ಗಜೇಂದ್ರಗಡ

Related posts

ಸಾಮಾಜಿಕ ಒಳತಿಗಾಗಿ ಹೋರಾಡಬೇಕು  ಆರೇರ್

satyadarshana

ಲಂಚದ ಹಣ ಪಡೆಯುವಾಗ ಲೋಕಾಯುಕ್ತ ಬಲೆಗೆ ಬಿದ್ದ ಗ್ರಾಪಂ ಕಂಪ್ಯೂಟರ್ ಆಪರೇಟರ್.

satyadarshana

ಜಿಲ್ಲಾಧಿಕಾರಿ ಅನುಮತಿ ನೀಡಿದ್ದ ಪ್ರಕರಣದಲ್ಲಿ ಅವರಿಗೆ ಮಾತ್ರ ಅಧಿಕಾರ: ಕೋರ್ಟ್

satyadarshana

Leave a Comment