Satya Darshana
ಬಿಸಿ ಬಿಸಿ ಸುದ್ದಿ
Otherಜಿಲ್ಲೆಫೋಟೋಬಿಸಿ ಬಿಸಿ ಸುದ್ದಿರಾಜ್ಯ

ಪಾರದರ್ಶಕವಾಗಿ ಕಾರ್ಯನಿರ್ವಹಿಸಲು ಮತಗಟ್ಟೆ ಅಧಿಕಾರಿಗಳಿಗೆ ಸಲಹೆ

  1. ಕೊಪ್ಪಳ ಏಪ್ರಿಲ್ 16: ಕೊಪ್ಪಳ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಮತಗಟ್ಟೆ ಅಧ್ಯಕ್ಷಾಧಿಕಾರಿಗಳು ಹಾಗೂ ಸಹಾಯಕ ಮತಗಟ್ಟೆ ಅಧಿಕಾರಿಗಳಿಗೆ ಏಪ್ರೀಲ್ 16ರಂದು ತರಬೇತಿ ನಡೆಯಿತು.

ನಗರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ನಡೆದ ತರಬೇತಿಯನ್ನು ಜಿಲ್ಲಾ ಚುನಾವಣಾಧಿಕಾರಿಗಳಾದ ಜಿಲ್ಲಾಧಿಕಾರಿಗಳಾದ ಎಂ.ಸುAದರೇಶಬಾಬು ಅವರು ಉದ್ಘಾಟಿಸಿದರು. ಬಳಿಕ ಮಾತನಾಡಿದ ಅವರು, ಚುನಾವಣಾ ಕರ್ತವ್ಯಕ್ಕೆ ನೇಮಕವಾದ ಅಧಿಕಾರಿಗಳು ಮತ್ತು ಸಿಬ್ಬಂದಿಯು ಪಕ್ಷಾತೀತವಾಗಿ, ಧರ್ಮಾತೀತವಾಗಿ ಮತ್ತು ಕಾನೂನುನಾತ್ಮಕವಾಗಿ ಕಾರ್ಯ ನಿರ್ವಹಿಸಿ ಚುನಾವಣೆಯು ಮುಕ್ತ ಹಾಗೂ ಪಾರದರ್ಶಕ ಮತ್ತು ನ್ಯಾಯಸಮ್ಮತವಾಗಿ ನಡೆಸಲು ಸಹಕಾರ ನೀಡಬೇಕು ಎಂದು ತಿಳಿಸಿದರು.

ಚುನಾವಣಾ ಕಾರ್ಯಕ್ಕೆ ನಿಯೋಜನೆಗೊಂಡ ಅಧಿಕಾರಿಗಳು ಮತ್ತು ಸಿಬ್ಬಂದಿಯು ತಂಡವಾಗಿ ಕಾರ್ಯನಿರ್ವಹಿಸಬೇಕು. ಆಯೋಗದ ಮಾರ್ಗಸೂಚಿಯನುಸಾರ ಕಾರ್ಯನಿರ್ವಹಿಸಬೇಕು. ಮತದಾನ ದಿನದಂದು ಮತಗಟ್ಟೆಗಳಲ್ಲಿ ಕಾರ್ಯನಿರ್ವಹಿಸುವ ಮತಗಟ್ಟೆ ಅಧಿಕಾರಿಗಳು ಮತ್ತು ಸಹಾಯಕ ಮತಗಟ್ಟೆ ಅಧಿಕಾರಿಗಳು ಸೇರಿದಂತೆ ಮತಗಟ್ಟೆಗಳಲ್ಲಿ ಕಾರ್ಯನಿರ್ವಹಿಸುವ ಇನ್ನೀತರ ಎಲ್ಲ ಅಧಿಕಾರಿಗಳು ಮತ್ತು ಸಿಬ್ಬಂದಿಯು ತಮಗೆ ವಹಿಸಿದ ಕಾರ್ಯವನ್ನು ಅಚ್ಚುಕಟ್ಟಾಗಿ ನಿರ್ವಹಿಸಬೇಕು. ಮತಗಟ್ಟೆ ಅಧ್ಯಕ್ಷಾಧಿಕಾರಿ, ಸಹಾಯಕ ಮತಗಟ್ಟೆ ಅಧಿಕಾರಿ, ಮತಗಟ್ಟೆ ಅದಿಕಾರಿ 1 ಮತ್ತು ಮತಗಟ್ಟೆ ಅಧಿಕಾರಿ-2 ಎಲ್ಲರೂ ಎಲೆಕ್ಟಾçನಿಕ್ ಓಟಿಂಗ್ ಮಸೀನ್ (ಇವಿಎಂ)ನ ಕಾರ್ಯವಿಧಾನಗಳ ಬಗ್ಗೆ ಸಂಪೂರ್ಣವಾಗಿ ತಿಳಿದುಕೊಳ್ಳಬೇಕು. ಮತಯಂತ್ರಗಳ ಕಾರ್ಯದ ಎಲ್ಲಾ ವಿಧಿ ವಿಧಾನಗಳನ್ನು ಸ್ಪಷ್ಟವಾಗಿ ತಿಳಿದುಕೊಳ್ಳಬೇಕು. ತಂಡದ ಎಲ್ಲ ಸದಸ್ಯರು ತಾವು ನಿರ್ವಹಿಸಬೇಕಾದ ಕಾರ್ಯಗಳ ಬಗ್ಗೆ ಚರ್ಚಿಸಿ ಗೊಂದಲವಿಲ್ಲದ ಹಾಗೆ ಕಾರ್ಯನಿರ್ವಹಿಸಬೇಕು. ಏನಾದರು ಅನುಮಾನಗಳಿದ್ದಲ್ಲಿ ಲಭ್ಯವಿರುವ ತರಬೇತಿ ವಿಭಾಗದಲ್ಲಿ ವಿಧಾನಸಭಾ ಮಟ್ಟದ ತರಬೇತಿದಾರರಿಂದ ಬಗೆಹರಿಸಿಕೊಳ್ಳಬೇಕು ಎಂದು ಸಲಹೆ ಮಾಡಿದರು.

ಬಳಿಕ ಚುನಾವಣಾ ಮಾಸ್ಟರ್ ಟ್ರೇನರ್‌ಗಳಿಂದ ಪಿಆರ್‌ಓ ಹಾಗೂ ಎಪಿಆರ್‌ಓ ಮತ್ತು ಇನ್ನೀತರ ಅಧಿಕಾರಿ ಮತ್ತು ಸಿಬ್ಬಂದಿಗೆ ವಿವಿಧ ವಿಷಯಗಳ ಬಗ್ಗೆ ಸಮಗ್ರ ತರಬೇತಿ ನೀಡಲಾಯಿತು.

ಕಂಟ್ರೋಲ್ ಯುನಿಟ್, ಬ್ಯಾಲೇಟ್ ಯುನಿಟ್, ಮತದಾನ ಖಾತ್ರಿಯಂತ್ರ (ವಿವಿಪ್ಯಾಟ್), ಮತದಾರರ ರಜಿಸ್ಟರ್ ಪುಸ್ತಕ, ಮತದಾರರ ಚೀಟಿಗಳು, ಅಧಿಕೃತ ಮತದಾರರ ಪಟ್ಟಿ ಸೇರಿದಂತೆ ಚೆಕ್‌ಲಿಸ್ಟ್ ಪ್ರಕಾರ ಇನ್ನೀತರ ಅವಶ್ಯಕ ಎಲ್ಲ ಸಾಮಗ್ರಿಗಳನ್ನು ಪಡೆದು, ಅವು ಸರಿಯಾಗಿ ಇದ್ದ ಬಗ್ಗೆ ಖಾತರಿಪಡಿಸಿಕೊಂಡು ಅವುಗಳನ್ನು ಸುರಕ್ಷಿತವಾಗಿಟ್ಟುಕೊಳ್ಳಬೇಕು. ಹಂಚಿಕೆಯಾದ ಮತಗಟ್ಟೆಗೆ ತೆರಳಿ ಕಾರ್ಯನಿರ್ವಹಿಸಬೇಕು ಎಂದು ತಿಳಿಸಲಾಯಿತು.

ಬೆಳಗ್ಗೆ ಮತದಾನದ ಮುನ್ನ ಅಣಕು ಮತದಾನ ಮಾಡಿ ಅದನ್ನು ಅಳಿಸಿ ಹಾಕಬೇಕು. ಅಭ್ಯರ್ಥಿಗಳು ಮತ್ತು ಏಜೆಂಟರ ಎದುರು ಪಾರದರ್ಶಕವಾಗಿ ಕಾರ್ಯನಿರ್ವಹಿಸಬೇಕು. ಪೊಲಿಂಗ್ ಏಜೆಂಟರು ಅದೆ ಮತಗಟ್ಟೆಯ ಮತದಾರರಾಗಿರುವುದನ್ನು ಖಚಿತಪಡಿಸಿಕೊಳ್ಳಬೇಕು. ಮತದಾನ ನಡೆಯುವಾಗ ಪ್ರತಿ ಎರಡು ಗಂಟೆಗೊಮ್ಮೆ ಮತದಾನದ ವಿವರಗಳನ್ನು ಪಿಆರ್‌ಓ ದಿನಚರಿಯಲ್ಲಿ ನಮೂದಿಸಬೇಕು ಎಂಬುದು ಸೇರಿದಂತೆ ಬೇರೆ ಬೇರೆ ಕಾರ್ಯವಿಧಾನಗಳನ್ನು ತಿಳಿಸಲಾಯಿತು.

ಮೊದಲನೇ ಮತಗಟ್ಟೆ ಅಧಿಕಾರಿಯ ಕರ್ತವ್ಯಗಳು, ಎರಡನೇ ಮತಗಟ್ಟೆ ಅಧಿಕಾರಿಯ ಕರ್ತವ್ಯಗಳು, ಮೂರನೇ ಮತಗಟ್ಟೆ ಅಧಿಕಾರಿ ಕರ್ತವ್ಯಗಳು, ಮಹತ್ವದ ನಮೂನೆಗಳು ಮತ್ತು ಪ್ರಪತ್ರಗಳು ಸೇರಿದಂತೆ ಬೇರೆ ಬೇರೆ ವಿಷಯಗಳ ಬಗ್ಗೆ ಸಮಗ್ರ ತಿಳಿಸಲಾಯಿತು.

ತರಬೇತಿಗೆ ಹಾಜರಾದ ಪಿಆರ್‌ಓ ಮತ್ತು ಎಪಿಆರ್‌ಓ ಸೇರಿದಂತೆ ಇನ್ನೀತರ ಅಧಿಕಾರಿಗಳು ಮತ್ತು ಸಿಬ್ಬಂದಿಗೆ ಮಾರ್ಗಸೂಚಿಯನುಸಾರ ಮಜ್ಜಿಗೆ, ತಂಪಾದ ಕುಡಿಯುವ ನೀರು ಸೇರಿದಂತೆ ಅಚ್ಚುಕಟ್ಟಾದ ಊಟದ ವ್ಯವಸ್ಥೆ ಮಾಡಲಾಗಿತ್ತು.

ಈ ಸಂದರ್ಭದಲ್ಲಿ ಕೊಪ್ಪಳ ವಿಧಾನಸಭಾ ಮತಕ್ಷೇತ್ರದ ಚುನಾವಣಾಧಿಕಾರಿ ಮಲ್ಲಿಕಾರ್ಜುನ, ತಹಸೀಲ್ದಾರ ಅಮರೇಶ ಬಿರಾದಾರ, ಗ್ರೇಡ್ 2 ತಹಸೀಲ್ದಾರ ಗವಿಸಿದ್ದಪ್ಪ ಮಣ್ಣೂರ ಹಾಗೂ ಇತರರು ಇದ್ದರು.

Related posts

ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ಶಿರಹಟ್ಟಿ ತಾಲೂಕಿನ ಸುಮಾರು 17 ಕೀಮಿ ಮಾನವ ಸರಪಳಿ ರಚನೆ

satyadarshana

ಕಲೆ, ಸಂಗೀತ, ಸಾಹಿತ್ಯ, ಕ್ರೀಡೆ ಸೇರಿದಂತೆ ವಿವಿಧ ಕ್ಷೇತ್ರದಲ್ಲಿ ಗದಗ ಜಿಲ್ಲೆಯ ಕೊಡಗೆ ಅಪಾರ

satyadarshana

ಅಪರ ಜಿಲ್ಲಾಧಿಕಾರಿಗಳಾಗಿ ಎಂ.ಪಿ.ಮಾರುತಿ ಅಧಿಕಾರ ಸ್ವೀಕಾರ

satyadarshana

Leave a Comment