ಕೊಪ್ಪಳ: ಮಾರ್ಚ್ 11 ಜಿಲ್ಲೆಯ ವಿವಿಧ ಐತಿಹಾಸಿಕ ಸ್ಥಳಗಳ ಸಚಿತ್ರ ಪೋಟೊಗಳ ಪ್ರದರ್ಶನದ ಪ್ರವಾಸೋದ್ಯಮ ಇಲಾಖೆಯ ಮಳಿಗೆಯು ಜಿಲ್ಲಾ ಕ್ರೀಡಾಂಗಣದಲ್ಲಿ ನೋಡು ತನ್ನತ್ತ ಸೆಳೆಯುತ್ತಿದೆ.
ಇಟಗಿಯ ಮಹಾದೇವ ದೇವಸ್ಥಾನ, ಕೃಷ್ಣ ದೇವರಾಯ ಮಂಟಪ, ನವ ಬೃಂದಾವನ, ಕನಕಗಿರಿಯ ವೆಂಕಟಪ್ಪ ಬಾವಿ, ಆನೇಗೊಂದಿ, ಗಂಗಾವತಿ ತಾಲೂಕಿನ ಜಬ್ಬಲಗುಡ್ಡದ ಗಂಡುಗಲಿ ಕುಮಾರರಾಮನ ಕೋಟೆ, ಹುಲಿಗಿಯ ಹುಲಿಗೆಮ್ಮ ದೇವಸ್ಥಾನ, ವಿರುಪಾಪುರ ಗಡ್ಡಿಯ ಬುಕ್ ಅಕ್ವಾಡಕ್ಟ್, ಕೊಪ್ಪಳ ಕೋಟೆ, ಅಂಜನಾದ್ರಿ ಬೆಟ್ಟ, ಕೊಪ್ಪಳದ ಗವಿಸಿದ್ದೇಶ್ವರ ಮಠ, ಮಳೆ ಮಲ್ಲೇಶ್ವರ ದೇವಸ್ಥಾನ, ಹಿರೇಬೆನಕಲ್ನಲ್ಲಿರುವ ಮೋರೆರ ಆದಿಮ ಸಮಾಧಿಗಳು, ಸಾಣಾಪೂರದ ಕೆರೆ, ಆನೆಗೋಂದಿಯ ಹುಚ್ಚಪ್ಪಯ್ಯನ ಮಠ, ಚಂದಾಲಿAಗೇಶ್ವರ ದೇವಸ್ಥಾನ, ಪಂಪಾ ಸರೋವರ, ಕಾರಟಗಿಯ ಕೋಟಿ ಲಿಂಗಗಳ ಶ್ರೀ ಸೋಮೇಶ್ವರ ದೇವಸ್ಥಾನ, ಬಹದ್ಧೂರಬಂಡೆ ಕೋಟೆ, ಕನಕಗಿರಿಯ ಕನಕಾಚಲಪತಿ ದೇವಸ್ಥಾನ, ಆನೇಗೋಂದಿಯ ಚಿಂತಾಮಣಿ ಮಠ, ಆನೆಗೋಂದಿಯ ಗಗನ ಮಹಲ್ ಸೇರಿದಂತೆ ಕೊಪ್ಪಳ ಜಿಲ್ಲೆಯ ಕೊಪ್ಪಳ, ಕುಷ್ಟಗಿ, ಯಲಬುರ್ಗಾ, ಕುಕನೂರ, ಗಂಗಾವತಿ, ಕಾರಟಗಿ, ಕನಕಗಿರಿ ತಾಲೂಕುಗಳಲ್ಲಿರುವ ಐತಿಹಾಸಿಕ ಸ್ಥಳಗಳ ದೇವಾಲಯಗಳ ಮತ್ತು ಇನ್ನೀತರ ಚಿತ್ರಗಳನ್ನು ಪ್ರದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದೆ.
ಕೊಪ್ಪಳ ಬೆಳ್ಳಿ ಹಬ್ಬದ ಪ್ರಯುಕ್ತ ಜಿಲ್ಲಾಧಿಕಾರಿಗಳಾದ ಎಂ.ಸುAದರೇಶಬಾಬು ಅವರ ನಿರ್ದೇಶನದಂತೆ ಪ್ರವಾಸೋದ್ಯಮ ಇಲಾಖೆಯಿಂದ ಈ ಪ್ರದರ್ಶನ ಮಳಿಗೆ ನಿರ್ಮಿಸಲಾಗಿದ್ದು, ಸಾವಿರಾರು ಸಂಖ್ಯೆಯಲ್ಲಿ ಜನರು ವೀಕ್ಷಣೆ ನಡೆಸುತ್ತಿದ್ದು, ಜಿಲ್ಲಾಡಳಿತದ ಶ್ರಮ ಸಾರ್ಥಕವಾದಂತಾಗಿದೆ ಎಂದು ಕೊಪ್ಪಳ ಜಿಲ್ಲೆಯ ಪ್ರವಾಸೋದ್ಯಮ ಇಲಾಖೆಯ ಸಹಾಯಕ ನಿರ್ದೇಶಕರಾದ ಡಿ.ನಾಗರಾಜ ಮತ್ತು ಸಹಾಯಕ ಅಭಿಯಂತರರಾದ ಚೇತನ ಅವರು ಪ್ರತಿಕ್ರಿಯಿಸಿದರು.
