Satya Darshana
ಬಿಸಿ ಬಿಸಿ ಸುದ್ದಿ
ಜಿಲ್ಲೆಬಿಸಿ ಬಿಸಿ ಸುದ್ದಿರಾಜ್ಯ

ಈ ಭಾರಿಯೂ ಬಹಳ ದೊಡ್ಡ ಮಟ್ಟದಲ್ಲಿ ಶಿರಹಟ್ಟಿ ವಿಧಾಸಭಾ ಕ್ಷೇತ್ರದ 2023 ರ ಚುನಾವಣೆಗೆ ಟಿಕೆಟ್‌ ಫೈಟ್‌ ಬಲು ಜೋರು

ಗದಗ: ಜಿಲ್ಲೆಯ ಶಿರಹಟ್ಟಿ ವಿಧಾನ ಸಭಾ ಕ್ಷೇತ್ರವು 2008 ರಲ್ಲಿ ಏಕೈಕ ಜಿಲ್ಲೆಯಲ್ಲಿ ಮೀಸಲು ಕ್ಷೇತ್ರವಾಗಿ ಗುರುತಿಸಿಕೊಂಡಿದೆ. ಈ ಭಾರಿಯೂ ಬಹಳ ದೊಡ್ಡ ಮಟ್ಟದಲ್ಲಿ ಶಿರಹಟ್ಟಿ ವಿಧಾಸಭಾ ಕ್ಷೇತ್ರದ 2023 ರ ಚುನಾವಣೆಗೆ ಟಿಕೆಟ್‌ ಫೈಟ್‌ ಬಲು ಜೋರಾಗಿದ್ದರೆ ಆಡಳಿತರೂಢ ಬಿಜೆಪಿ ಮತ್ತು ಕಾಂಗ್ರೆಸ್ ಪಕ್ಷದಲ್ಲಿ ತಲಾ ಒಟ್ಟು 10ಕ್ಕೂ ಹೆಚ್ಚು ಆಕಾಂಕ್ಷಿಗಳಿದ್ದಾರೆ. ಜಿಲ್ಲೆಯ 4 ವಿಧಾನಸಭಾ ಮತಕ್ಷೇತ್ರಗಳಲ್ಲಿ ಟಿಕೆಟ್‌ಗಾಗಿ ಅತೀ ಹೆಚ್ಚು ಪೈಪೋಟಿ ಕಂಡು ಬರುತ್ತಿರುವ ಮದ್ಯ ಇಲ್ಲಿ ಪೈಪೋಟಿ ಮಾತ್ರ ಬಹಳ ವಿಶೇಷವಾಗಿ ಕಂಡು ಬರುತ್ತಿದೆ.
ಈ ಶಿರಹಟ್ಟಿ ವಿಧಾನ ಸಭಾ ಕ್ಷೇತ್ರದಲ್ಲಿ ಒಟ್ಟು ಮೂರು ತಾಲೂಕಗಳಾದ ಲಕ್ಷ್ಮೇಶ್ವರ , ಶಿರಹಟ್ಟಿ ಮತ್ತು ಮುಂಡರಗಿ ತಾಲ್ಲೂಕಿನ ಹಳ್ಳಿಗಳು ಇದರ ವ್ಯಾಪ್ತಿಗೆ ಬರುತ್ತಿದ್ದ ಲಿಂಗಾಯತ ,ಹಿಂದುಳಿದ ವರ್ಗಗಳು ಮತ್ತು ಮಾದಿಗ ಸಮುದಾಯದ ಮತಗಳು ನಿರ್ಣಾಯಕವಾಗಿವೆ. ಬಹಳ ಹಿಂದುಳಿದ ವಿಧಾನ ಸಭಾ ಕ್ಷೇತ್ರವಾಗಿದ್ದು ಅಭಿವೃದ್ಧಿ ಎಂಬುದು ಬಹಳ ನಿಧಾನಗತಿಯಲ್ಲಿ ಸಾಗುತ್ತಿದೆ.2008 ರಲ್ಲಿ ಎಸ್ಸಿ ಮೀಸಲು ಕ್ಷೇತ್ರವಾದ ಶಿರಹಟ್ಟಿ ವಿಧಾನ ಸಭೆ ಜಿಲ್ಲೆಯಲ್ಲಿ ವಿಶೇಷವಾಗಿ ಕಂಡು ಬರುತ್ತಿದೆ. ಎಸ್ಸಿ ಮೀಸಲು ಕ್ಷೇತ್ರವಾದರೂ ಮೂಲ ಅಸ್ಪೃಶ್ಯ ಸಮಾಜಕ್ಕೆ ನ್ಯಾಯ ಕೊಡಿಸುವಲ್ಲಿ ರಾಷ್ಟ್ರೀಯ ಪಕ್ಷಗಳು ಹಿಂದೇಟು ಹಾಕುತ್ತಿರುವುದು ಅಂತೂ ಸತ್ಯ. ಮೀಸಲು ಕ್ಷೇತ್ರದಿಂದ ಮೂಲ ಎಸ್ಸಿ ಜಾತಿಯಾದ ಮಾದಿಗ ಸುದಾಯಕ್ಕೆ ರಾಷ್ಟ್ರೀಯ ಪಕ್ಷಗಳಾದ ಕಾಂಗ್ರೆಸ್ ಮತ್ತು ಬಿಜೆಪಿ ಪಕ್ಷಗಳು 3 ಭಾರಿ ಆದರೂ ಮಾದಿಗ ಸಮುದಾಯಕ್ಕೆ ಟಿಕೆಟ್ ನೀಡದೆ ಅನ್ಯಾಯ ಮಾಡುತ್ತಿದ್ದಾರೆ. 2008 ರಿಂದ ಮೂರು ಭಾರಿಯೂ ಬಿಜೆಪಿ ಪಕ್ಷ ಲಂಬಾಣಿ ಸಮುದಾಯಕ್ಕೆ ಟಿಕೆಟ್ ನೀಡಿದರೆ ಇತ್ತ ಕಾಂಗ್ರೆಸ್ ಪಕ್ಷ ಕೂಡ ಒಂದು ಭಾರಿ ಲಂಬಾಣಿ ಸಮುದಾಯಕ್ಕೆ ಮತ್ತು ಎರಡು ಭಾರಿ ಮೋಚಿ ಸಮುದಾಯಕ್ಕೆ ಟಿಕೆಟ್ ನೀಡುವುದರ ಮೂಲಕ ಸಮಾಜದಲ್ಲಿ ಅಸ್ಪೃಶ್ಯ ಮತ್ತು ಕಟ್ಟಕಡೆಯ ಸಮುದಾಯವನ್ನು ಸಹ ಟಿಕೆಟ್ ಕೊಡದೆ ವಂಚನೆ ಮಾಡುತ್ತಿರುವುದು ದುರಂತವೇ ಸರಿ .ಈ ವಿಧಾನ ಸಭಾ ಕ್ಷೇತ್ರದಲ್ಲಿ ಎಸ್ಸಿ ಮತದಾರರು ಉನ್ನತಿ ಅಂದ್ರೆ ಮಾದಿಗ ಸಮುದಾಯದ ಮತಗಳಲ್ಲಿ ನಿರ್ಣಾಯಕ ಹಂತದಲ್ಲಿದೆ. ಈ ಕ್ಷೇತ್ರದಲ್ಲಿ ಸುಮಾರು 35 ಸಾವಿರಕ್ಕೂ ಹೆಚ್ಚು ಮತಗಳನ್ನು ಹೊಂದಿರುವಂತಹ ದೊಡ್ಡ ಸಮುದಾಯ ಮಾದಿಗ ಸಮುದಾಯವಾಗಿದೆ.ಆದ್ರೆ ಟಿಕೆಟ್ ಪಡೆದುಕೊಳ್ಳುವಲ್ಲಿ ಸಮುದಾಯ ಹಿಂದೆ ಸರಿಯುವುದರ ಜೊತೆಗೆ ಕಾಂಗ್ರೆಸ್ ಮತ್ತು ಬಿಜೆಪಿ ಪಕ್ಷಗಳು ಈ ಸಮುದಾಯವನ್ನು ನಿರ್ಲಕ್ಷ್ಯ ಮಾಡುವಂತೆ ಕಾಣುತ್ತಿವೆ.
ಈ ಮಾದಿಗ ಸಮುದಾಯದಲ್ಲಿಯೂ ಸಹ ಎರಡೂ ಪಕ್ಷಗಳಲ್ಲಿ ಟಿಕೆಟ್ ಆಕಾಂಕ್ಷಿಗಳ ದಂಡೆ ಇದೆ. ಕಾಂಗ್ರೆಸ್ ಪಕ್ಷದಿಂದ 2009 ಲೋಕಸಭಾ ಚುನಾವಣೆಯಲ್ಲಿ ಚಿತ್ರದುರ್ಗದ ಕ್ಷೇತ್ರದಿಂದ ಸ್ಪರ್ಧಿಸಿದ್ದ ಬಹಳ ವಿಚಾರವಂತರು ಮತ್ತು ಸರಳ ವ್ಯಕ್ತಿತ್ವ ಹೊಂದಿರುವ ಡಾ. ತಿಪ್ಪೇಸ್ವಾಮಿ ಅವರು ಕಡಿಮೆ ಅಂತರದಿಂದ ಸೋತರೂ ಸಹ ಸಮಾಜ ಸೇವೆಯಲ್ಲಿ ಮುಂದುವರೆದಿದ್ದು ಅಲ್ಲದೆ ಈ ಶಿರಹಟ್ಟಿ ಕ್ಷೇತ್ರದಲ್ಲಿ ಸುತ್ತಾಡುತ್ತಾ ಟಿಕೇಟ್ ಗಾಗಿ ಭಾರಿ ಕಸರತ್ತು ಮುಂದುವರೆದಿದೆ. ಸಣ್ಣ ವಯಸ್ಸಿನಲ್ಲೇ  ಗದಗ ಜಿಲ್ಲೆಯ ಜಿಲ್ಲಾ  ಪಂಚಾಯತ ಅದ್ಯಕ್ಷರು ಆಗಿದ್ದ ಸುಜಾತಾ ದೊಡ್ಡಮನಿ ಅವರು ಕಳೆದ ಎರಡು ಅವಧಿಗಳಿಂದ ಸಹ ಟಿಕೆಟ್ ಗೆ ಪೈಪೋಟಿ ಮಾಡುತ್ತ ಕ್ಷೇತ್ರದ ತುಂಬಾ ಬಿರುಸಿನ ಪ್ರಚಾರ ಮಾಡುತ್ತಾ ಇದ್ದಾರೆ. ಲಕ್ಷ್ಮೇಶ್ವರ ಭಾಗದ ಮಾದಿಗ ಸಮುದಾಯ ಹಿರಿಯ ನಾಯಕರು ಮಾಜಿ ತಾಲೂಕ ಪಂಚಾಯತ ಸದಸ್ಯರು ಆಗಿದ್ದ ಕೋಟೆಪ್ಪ ವರ್ದಿ ಸಹ ಟಿಕೆಟ್ ಗೆ ಲಾಭಿ ನಡೆಸಿದ್ದಾರೆ. ಶಿರಹಟ್ಟಿ ಭಾಗದ ಯುವ ನಾಯಕರು ಮಾದಿಗ  ಜಾಗೃತಿ ಜನಾಂದೋಲನ ಸಂಘಟನೆಯ ರಾಜ್ಯಾಧ್ಯಕ್ಷರು ಮತ್ತು ಕಾಂಗ್ರೆಸ್ ಪಕ್ಷದ ಎಸ್ಸಿ ಘಟಕದ ತಾಲೂಕ ಅದ್ಯಕ್ಷರು ಆಗಿರುವ ಮುತ್ತು ಭಾವಿಮನಿ ಅವರು ಸಹ ಟಿಕೆಟ್ ಪಡೆಯುವಲ್ಲಿ ನಿರಂತರ ಪ್ರಯತ್ನ ಮಾಡುತ್ತಿದ್ದಾರೆ. ಇನ್ನೊಬ್ಬರು ಟಿಕೆಟ್ ಪ್ರಭಲ ಆಕಾಂಕ್ಷಿ ಆಗಿರುವ ಕೊಪ್ಪಳದ ಮಾಜಿ ಜಿಲ್ಲಾ ಪಂಚಾಯತ ಸದಸ್ಯರು ಆಗಿದ್ದ ಗೂಳಪ್ಪ ಹಲಗೇರಿ ಅವರು ಕೂಡಾ ಟಿಕೆಟ್ ಗಾಗಿ ದುಂಬಾಲು ಬಿದ್ದಿದ್ದಾರೆ. ಹೀಗೆ ಕಾಂಗ್ರೆಸ್ ಪಕ್ಷದಿಂದ ಮಾದಿಗ ಸಮುದಾಯ ಸುಮಾರು 6-7 ಜನ ಪ್ರಭಾವಿ ಟಿಕೆಟ್ ಆಕಾಂಕ್ಷಿಗಳು ಆಗಿದ್ದಾರೆ.
ಇತ್ತ ಬಿಜೆಪಿ ಪಕ್ಷದಲ್ಲಿ ಸಹ ಆಕಾಂಕ್ಷಿಗಳ ದಂಡೆ ಇದೆ. ಸುಮಾರು 15-20 ವರ್ಷಗಳಿಂದ ತಮಗೆ ಬಿಜೆಪಿ ಪಕ್ಷದಲ್ಲಿ ಟಿಕೇಟ್ ಸಿಗದೆ ಇದ್ದರೂ ಸಹ ಕ್ಷೇತ್ರದ ಸೇವೆ ಮಾಡುತ್ತಾ ಬಂದಿರುವ ಗುರುನಾಥ ದಾನಪ್ಪನವರ ಈ ಭಾರಿ ಪ್ರಭಲ ಟಿಕೆಟ್ ಆಕಾಂಕ್ಷಿ ಆಗಿದ್ದಾರೆ. ಯಾವುದೇ ಸಮುದಾಯದ ಕಾರ್ಯಕ್ರಮ ಇರಲಿ ಮತ್ತು ಯಾರೇ ಸಹಾಯ ಕೇಳಿಕೊಂಡು ಬಂದರೂ ಸಹ ಎಲ್ಲಾ ರೀತಿಯಿಂದ ಸಹಾಯ ಮಾಡುತ್ತಾ ಬಂದಿರುವ ಗುರುನಾಥ ದಾನಪ್ಪನವರ ಪಕ್ಷದ ಹಿರಿಯ ನಾಯಕರು ಆಗಿದ್ದಾರೆ. ದೇವಸ್ಥಾನಕ್ಕೆ ಮತ್ತು ಯಾವುದೇ ಕಾರ್ಯಕ್ರಮ ಇದ್ದರೂ ಸಹಾಯ ಮಾಡುವುದರಲ್ಲಿ ಮುಂಚೂಣಿ ಇರುವ ನಾಯಕ.
 ಇತ್ತ ಮತ್ತೊಬ್ಬರು ವೃತ್ತಿಯಲ್ಲಿ ವಕೀಲರು ಆಗಿರುವ ಬೆಂಗಳೂರು ಮಟ್ಟದಲ್ಲಿ ಬಹಳಷ್ಟು ಇಲಾಖೆಯ ಜೊತೆ ಒಳ್ಳೆಯ ಉತ್ತಮ ಭಾಂದವ್ಯ ಹೊಂದಿರುವ ಆ ಮುಖಾಂತರ ಕ್ಷೇತ್ರವನ್ನು ಅಭಿವೃದ್ಧಿ ಮಾಡಲು ಸಾಧ್ಯ ಎಂಬುದನ್ನು ಮನಗಂಡು ಅಭಿವೃದ್ಧಿಯೆ ನನ್ನ ಮುಖ್ಯ ಉದ್ದೇಶ ಎಂಬುದನ್ನ ಸಾಬೀತು ಪಡಿಸಲು ಸಾಮಾಜಿಕ ಕಳಕಳಿಯೊಂದಿಗೆ ರಾಜಕೀಯ ರಂಗ ಪ್ರವೇಶಿಸಲು ಶಿರಹಟ್ಟಿ ವಿಧಾನ ಸಭಾ ಕ್ಷೇತ್ರವನ್ನೇ ತಮ್ಮ ಕಾರ್ಯಕ್ಷೇತ್ರವನ್ನಾಗಿಸಕೊಂಡು ಭಾರತೀಯ ಜನತಾ ಪಕ್ಷದ ಪ್ರಭಲ ಆಕಾಂಕ್ಷಿಯಾಗಿ ಕ್ಷೇತ್ರದ ಸಂಘಟನೆಯಲ್ಲಿ ತೊಡಗಿದ್ದಾರೆ. ವೃತ್ತಿಯಲ್ಲಿ ವಕೀಲರು ಆಗಿರುವ ಸಂಘ ಸಂಸ್ಥೆಗಳು ಮತ್ತು ಬಿಜೆಪಿ ನಾಯಕರ ಜೊತೆ ಒಳ್ಳೆಯ ಸಂಭಂದ ಹೊಂದಿರುವ ಇವರು ಟಿಕೆಟ್ ಗಿಟ್ಟಿಸಿಕೊಳ್ಳಲು ಪ್ರಯತ್ನ ಮಾಡುತ್ತಿದ್ದಾರೆ. ಇತ್ತ ಬೆಳ್ಳಟ್ಟಿ ಗ್ರಾಮ ಪಂಚಾಯತಿಗೆ ಸತತವಾಗಿ ಮೂರು ಭಾರಿ ಸದಸ್ಯರು ಆಗಿರುವ ಮತ್ತು ಎಸ್ಸಿ ಮೋರ್ಚಾದ ತಾಲೂಕ ಅಧ್ಯಕ್ಷರಾದ ಮೋಹನ್ ಗುತ್ತೆಮ್ಮನವರು ಸಹ ಟಿಕೆಟ್ ಕೊಡಲೇಬೇಕು ಎಂಬ ಬೇಡಿಕೆಯನ್ನು ಇಟ್ಟಿದ್ದು ತಾಲೂಕ ಮಟ್ಟದ ಮುಂಚೂಣಿ ಯುವ ನಾಯಕರು ಆಗಿದ್ದಾರೆ. ಹೀಗೆ ಬಿಜೆಪಿ ಯಲ್ಲಿಯೂ ಸಹ ಮಾದಿಗ ಸಮುದಾಯ ಪ್ರಭಲ ಆಕಾಂಕ್ಷಿಗಳು ಇದ್ದಾರೆ.
ಶಿರಹಟ್ಟಿ ಮೀಸಲು ವಿಧಾನಸಭಾ ಕ್ಷೇತ್ರ ಆದ ನಂತರ 3 ಭಾರಿ ಚುನಾವಣೆ ನಡೆದಿದ್ದು . 3 ಭಾರಿ ಚುನಾವಣೆಯಾದರೂ ಸಹ ಕಾಂಗ್ರೆಸ್ ಮತ್ತು ಬಿಜೆಪಿ ಪಕ್ಷ ಮಾದಿಗ ಸಮುದಾಯಕ್ಕೆ ಟಿಕೆಟ್ ಕೊಡದೆ ಕಡೆಗಣಿಸುತ್ತಾ ಬಂದಿದ್ದು ಈ 2023 ನೇ ಚುನಾವಣೆಯಲ್ಲಿ ಎರಡು ಪಕ್ಷಗಳು ಮಾದಿಗ ಸಮುದಾಯಕ್ಕೆ ಟಿಕೆಟ್ ಕೊಡಲೇಬೇಕು ಎಂಬುದು ನಮ್ಮ ಆಗ್ರಹ. 

Related posts

ರಾಜ್ಯಾದ್ಯಂತ ಬೆಳ್ಳಂಬೆಳಗ್ಗೆ 21 ಸರ್ಕಾರಿ ಅಧಿಕಾರಿಗಳಿಗೆ ಎಸಿಬಿ ಶಾಕ್.

satyadarshana

ಉತ್ತರಾಖಂಡ್ ಮಳೆ- ಮೃತರ ಕುಟುಂಬಕ್ಕೆ 4 ಲಕ್ಷ ರೂ. ಪರಿಹಾರ ಘೋಷಿಸಿದ ಸಿಎಂ

satyadarshana

ಅನಧಿಕೃತ ಧಾರ್ಮಿಕ ಕೇಂದ್ರಗಳ ತೆರವು; ಬಿಬಿಎಂಪಿಗೆ ತಾತ್ಕಾಲಿಕ ರಿಲೀಫ್

satyadarshana