Satya Darshana
ಬಿಸಿ ಬಿಸಿ ಸುದ್ದಿ
ಜಿಲ್ಲೆಫೋಟೋಬಿಸಿ ಬಿಸಿ ಸುದ್ದಿರಾಜ್ಯ

ಬೆಳ್ಳಿ ಹಬ್ಬದ ವಿಶೇಷ: ಪ್ರದರ್ಶನ, ಮಾರಾಟ ಮಳಿಗೆಗೆ ಸಂಸದರು, ಶಾಸಕರಿಂದ ಚಾಲನೆ

ಕೊಪ್ಪಳ :ಮಾರ್ಚ್ 10 :ಕೊಪ್ಪಳ ರಜತ ಮಹೋತ್ಸವದ ನಿಮಿತ್ತ ತಾಲೂಕು ಕ್ರೀಡಾಂಗಣದಲ್ಲಿ ಎರಡು ದಿನಗಳ ಕಾಲ ವ್ಯವಸ್ಥೆ ಮಾಡಲಾಗಿರುವ ವಿವಿಧ ಇಲಾಖೆಗಳ ಪ್ರದರ್ಶನ ಮಳಿಗೆ ಮತ್ತು ಸ್ವಸಹಾಯ ಸಂಘಗಳ ಹಾಗೂ ವಿವಿಧ ಸಂಸ್ಥೆಗಳ ವಸ್ತು ಪ್ರದರ್ಶನ ಮತ್ತು ಮಾರಾಟ ಮಳಿಗೆಗಳಿಗೆ ಸಂಸದರಾದ ಕರಡಿ ಸಂಗಣ್ಣ ಹಾಗೂ ಶಾಸಕರಾದ ಕೆ.ರಾಘವೇಂದ್ರ ಹಿಟ್ನಾಳ್ ಅವರು ರಿಬ್ಬನ್ ಕತ್ತರಿಸಿ ಮಾರ್ಚ 10ರಂದು ಚಾಲನೆ ನೀಡಿದರು.
ಈ ಕಾರ್ಯಕ್ರಮಕ್ಕೆ ವಿಧಾನ ಪರಿಷತ್ ಶಾಸಕರಾದ ಹೇಮಲತಾ ನಾಯಕ, ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ ಮಹಾಂತೇಶ ಎಸ್ ಪಾಟೀಲ್ ಸೇರಿದಂತೆ ಜನಪ್ರತಿನಿಧಿಗಳು, ಹಲವು ಗಣ್ಯರು ಮತ್ತು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳಾದ ರಾಹುಲ್ ರತ್ನಂ ಪಾಂಡೆಯ, ಅಪರ ಜಿಲ್ಲಾಧಿಕಾರಿಗಳಾದ ಸಾವಿತ್ರಿ ಬಿ ಕಡಿ, ಉಪ ವಿಭಾಗಾಧಿಕಾರಿಗಳಾದ ಬಸವಣ್ಣಪ್ಪ ಕಲಶೆಟ್ಟಿ, ಕೃಷಿ ಇಲಾಖೆಯ ಜಂಟಿ ನಿರ್ದೇಶಕರಾದ ಟಿ.ಎಸ್.ರುದ್ರೇಶಪ್ಪ, ತೋಟಗಾರಿಕಾ ಇಲಾಖೆಯ ಉಪ ನಿರ್ದೇಶಕರಾದ ಕೃಷ್ಣ ಉಕ್ಕುಂದ, ಡಿಎಚ್ಓ ಡಾ.ಅಲಕಾನಂದ ಕೆ ಹಾಗೂ ಇನ್ನೀತರ ಅಧಿಕಾರಿಗಳು ಸಾಕ್ಷಿಯಾದರು.
*ವಿಶೇಷ ಆಕರ್ಷಣೆ*: ತೋಟಗಾರಿಕಾ ಇಲಾಖೆಯ ಫಲಪುಷ್ಪ ಪ್ರದರ್ಶನ, ಕೃಷಿ ಇಲಾಖೆಯ ಯಂತ್ರೋಪಕರಣಗಳ ವಸ್ತು ಪ್ರದರ್ಶನ ಮಳಿಗೆ, ಕೊಪ್ಪಳ ಜಿಲ್ಲಾ ರಚನಾ ಹೋರಾಟಗಾಥೆ ತಿಳಿಸುವ ಪತ್ರಿಕಾ ತುಣುಕುಗಳ ಪ್ರದರ್ಶನದ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಮಳಿಗೆ, ರೈತಂ ಉತ್ಪಾದಕ ಸಂಸ್ಥೆಗಳಿAದ ಸಿರಿಧಾನ್ಯಗಳ ಪ್ರದರ್ಶನ, ಸಾವಯವ ಕೃಷಿ ವಸ್ತು ಪ್ರದರ್ಶನ, ಮಾದರಿ ಜಲಾನಯನ ಪ್ರದರ್ಶನ, ಆರೋಗ್ಯ ಇಲಾಖೆಯ ಯೋಜನೆಗಳ ಪ್ರದರ್ಶನ, ಕೃಷಿ-ತೋಟಗಾರಿಕೆ ವಿಶ್ವವಿದ್ಯಾಲಯ ಆಧುನಿಕ ತಾಂತ್ರಿಕತೆಯನ್ನೊಳಗೊAಡ ಮಳಿಗೆಗಳು ವಿಶೇಷ ಆಕರ್ಷಣೆಯಾಗಿವೆ.
*ಮಾಹಿತಿ ಪೂರ್ಣ*: ಅರಣ್ಯ ಇಲಾಖೆ, ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆ, ಶಿಕ್ಷಣ ಇಲಾಖೆ, ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ ಸೇರಿದಂತೆ ವಿವಿಧ ಇಲಾಖೆಗಳ ಪ್ರದರ್ಶನ ಮಳಿಗೆಗಳು, ಲೀಡ್ ಬ್ಯಾಂಕ್ ಪ್ರದರ್ಶನ ಮಳಿಗೆ, ಅಂಚೆ ಇಲಾಖೆಯ ಯೋಜನೆಗಳ ಪ್ರದರ್ಶನ ಮಳಿಗೆ, ಗೋ ಉತ್ಪನ್ನಗಳ ಮಾರಾಟ ಮತ್ತು ಪ್ರದರ್ಶನ ಮಳಿಗೆಗಳು ಮಾಹಿತಿ ಪೂರ್ಣವಾಗಿವೆ. ಪುಸ್ತಕ ಮಳಿಗೆಗಳ ಮಾರಾಟ ಮತ್ತು ಪ್ರದರ್ಶನವು ಕೂಡ ಕಂಡು ಬಂದಿತು.
ಮಾರಾಟ ಮಳಿಗೆಗಳು: ಎನ್‌ಆರ್‌ಎಲ್‌ಎಂ ರೂರಲ್ ಮತ್ತು ಎನ್‌ಯುಎಲ್‌ಎಂ ರೂರಲ್ ಮತ್ತು ಅರ್ಬನ್ ಸ್ವಸಹಾಯ ಸಂಘಗಳ ತಯಾರಿಸಿದ ಬಟ್ಟೆ, ಬೇಕರಿ ತಿನಿಸು, ಜ್ಯುವೇಲರಿ ಮತ್ತು ಖಾರ ದಿನಸಿ, ಶಾವಿಗೆ, ಜ್ಯೂಟ್ ಬ್ಯಾಗ್, ಕೈಮಗ್ಗ, ಮನೆ ಅಲಂಕಾರಿಕ ವಸ್ತುಗಳು, ಸಿಹಿ ತಿನಿಸುಗಳ ಮಾರಾಟ, ಉಪ್ಪಿನಕಾಯಿ, ಸೀರೆಗಳ ಪ್ರದರ್ಶನ ಮಾರಾಟ ಮಳಿಗೆಗಳಿಗೂ ವ್ಯವಸ್ಥೆ ಮಾಡಲಾಗಿತ್ತು.
ಕಿಕ್ಕಿರಿದು ಸೇರಿದ ಸಾರ್ವಜನಿಕರು: ಬೆಳಗ್ಗೆಯಿಂದಲೇ ಸಾರ್ವಜನಿಕರು ತಾಲೂಕು ಕ್ರೀಡಾಂಗಣದತ್ತ ಆಗಮಿಸಿ ವಿವಿಧ ಇಲಾಖೆಗಳ ಸಾಧನೆಯ ಮತ್ತು ಯೋಜನೆಗಳ ಪ್ರದರ್ಶನ ಮಳಿಗೆಗಳನ್ನು ವೀಕ್ಷಣೆ ಮಾಡುವುದು ಮತ್ತು ಮಾರಾಟ ಮಳಿಗೆಗಳಲ್ಲಿ ವಸ್ತುಗಳನ್ನು ಖರೀದಿಸುತ್ತಿರುವುದು ಕಂಡು ಬಂದಿತು.

Related posts

ಹಂಪಿ ವಿಶ್ವವಿದ್ಯಾಲಯದಲ್ಲಿ ನಡೆಯುತ್ತಿರುವ ಹಗರಣಗಳು:ಕುರಿತು ಸಿಎಂಗೆ ಪತ್ರ ಬರೆದ.ಸಿದ್ದರಾಮಯ್ಯ

satyadarshana

ದಲಿತರ ವಿರೋಧಿ ಹಾಲಪ್ಪ ಆಚಾರ್ ಈ ಬಾರಿ ಸೋಲು ಖಚಿತ: ಈರಪ್ಪ ಕುಡುಗುಂಟಿ 

satyadarshana

ಕೋಟಿಗೊಬ್ಬ-3 ಬಿಡುಗಡೆ ವಿಳಂಬಕ್ಕೆ ಇದೇನಾ ಕಾರಣ: ಥಿಯೇಟರ್ ಗಳಲ್ಲಿ ಅಭಿಮಾನಿಗಳ ಆಕ್ರೋಶ, ಇಂದು ಅಕ್ಟೋಬರ್ 15 ಚಿತ್ರ ಬಿಡುಗಡೆ

satyadarshana

Leave a Comment