Satya Darshana
ಬಿಸಿ ಬಿಸಿ ಸುದ್ದಿ
ಜಿಲ್ಲೆಫೋಟೋಬಿಸಿ ಬಿಸಿ ಸುದ್ದಿರಾಜ್ಯ

ಶಾಲಾ ವಾರ್ಷಿಕೋತ್ಸವಗಳು ವಿಧ್ಯಾರ್ಥಿಗಳ ವ್ಯಕ್ತಿತ್ವ ರೂಪಿಸುತ್ತವೆ: ಶಾಸಕ ಕಳಕಪ್ಪ ಬಂಡಿ

ಗಜೇಂದ್ರಗಡ: ಸಾಂಸ್ಕೃತಿಕ ಕಾರ್ಯಕ್ರಮಗಳು ವಿದ್ಯಾರ್ಥಿಗಳ ವ್ಯಕ್ತಿತ್ವವನ್ನು ರೂಪಿಸುತ್ತವೆ. ಹಾಗಾಗಿ ಶಾಲೆಯಲ್ಲಿ ಪ್ರತಿ ವರ್ಷ ವಾರ್ಷಿಕೋತ್ಸವ ಕಾರ್ಯಕ್ರಮ ವನ್ನು ನಡೆಸಿಕೊಂಡು ಬರಬೇಕು’ ಎಂದು ಶಾಸಕ ಕಳಕಪ್ಪ ಬಂಡಿ ಹೇಳಿದರು.

ನಗರದ ಶ್ರೀ ಜಗದಂಬಾ ವಿದ್ಯಾ ವರ್ಧಕ ಸಂಘದ 33ನೇ ವಾರ್ಷಿಕೋತ್ಸವ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಉತ್ತಮ ವಾತಾವರಣದಲ್ಲಿ ಶಾಲೆಯನ್ನು ಮಕ್ಕಳಿಗೆ ಅನುಕೂಲವಾಗುವಂತೆ ನಡೆಸುತ್ತಿದ್ದಾರೆ. ಮಕ್ಕಳು ಹೆಚ್ಚಿನ ದೂರ ಪ್ರಯಾಣ ಮಾಡಬೇಕಾದ ಸಮಸ್ಯೆಯಿಲ್ಲ. ಶ್ರದ್ಧೆಯಿಂದ ಚೆನ್ನಾಗಿ ಶಿಕ್ಷಣಭ್ಯಾಸವನ್ನು ಮಾಡಿ ಉತ್ತಮ ಭವಿಷ್ಯ ರೂಪಿಸಿಕೊಳ್ಳಿ’ ಎಂದು ಸಲಹೆ ನೀಡಿದರು.

ಬಳಿಕ ಸಂಸ್ಥೆ ಅಧ್ಯಕ್ಷ ಕೆ.ಎಸ್.ಪವಾರ ಮಾತನಾಡಿ.ಆಧುನಿಕ ಜಗತ್ತಿನಲ್ಲಿ ವಿದ್ಯಾರ್ಥಿಗಳ ಶಿಕ್ಷಣವು ಕೇವಲ ತರಗತಿಯ ನಾಲ್ಕು ಗೋಡೆಗೆ, ಸೀಮಿತವಾಗದೆ ಬದುಕಿನ ಎಲ್ಲಾ ಆಯಾಮದ ಕ್ಷೇತ್ರಗಳಲ್ಲಿ ಶಿಕ್ಷಣ ನೀಡಬೇಕಾಗಿದೆ. ಆ ನಿಟ್ಟಿನಲ್ಲಿ ಬದುಕಿನ ಶಿಕ್ಷಣ ನೀಡುವುದರಲ್ಲಿ ನಮ್ಮ ಶಾಲೆ ಯಶಸ್ಸನ್ನು ಕಂಡಿದೆ ಎಂದರು.

ಬಳಿಕ ಸಂಸ್ಥೆಯ ಕಾರ್ಯದರ್ಶಿ ಗುರುನಾಥಸಾ ರಾಯಬಾಗಿ ವಾರ್ಷಿಕ ವರದಿ ತಿಳಿಸಿದರು.

ಬಳಿಕ ಮುಖ್ಯ ಅತಿಥಿ ಶಿವಕುಮಾರ ಪಾಟೀಲ ಮಾತನಾಡಿ ಮಕ್ಕಳು ಕನಸು ಕಾಣಬೇಕು ಆದರೆ ಆ ಕನಸು ಜೀವನವನ್ನು ಬದಲಾವಣೆ ಮಾಡದಿದ್ದರು ಇಚ್ಚೆ ಮಾತ್ರ ಜೀವನವನ್ನು ಬದಲಾಯಿಸುತ್ತದೆ.ಆದರೆ ಪರಿಶ್ರಮ ನಿರಂತರವಾಗಿದ್ದಾಗ ಅದು ಸಂಪೂರ್ಣ ಜೀವನವನ್ನೇ ಬದಲಾಯಿಸುತ್ತದೆ ವಿಧ್ಯಾರ್ಥಿಗಳಲ್ಲಿ ಸಮರ್ಪಣಾ ಮನೋಭಾವನೆ ನಿರಂತರವಾಗಿರಬೇಕು ಎಂದರು.

 ವೇದಿಕೆ ಕಾರ್ಯಕ್ರಮ ಬಳಿಕ ಶಾಲಾ ಮಕ್ಕಳಿಂದ ಕನ್ನಡ, ಹಿಂದಿ, ತೆಲುಗು,ಜಾನಪದ,ಸೇರಿದಂತೆ ಅನೇಕ ಬಾಷೆಯ ಸಾಂಸ್ಕೃತಿಕ ಕಾರ್ಯಕ್ರಮಗಳು ಜನಮನ ಸೆಳೆದವು.

ಕಾರ್ಯಕ್ರಮದಲ್ಲಿ ಅಂಬಾಸಾ ರಾಯಬಾಗಿ, ಬಾಸ್ಕರ ರಾಯಬಾಗಿ, ಪುಡಲಿಂಕಸಾ ಬಾಕಳೆ, ಗಣಪತಸಾ ರಂಗ್ರೇಜ, ಸುರೇಂದ್ರಸಾ ರಾಯಬಾಗಿ, ಸಿದ್ದರಾಮಸಾ ರಾಯಬಾಗಿ, ಶಾಲೆಯ ಮುಖ್ಯ ಶಿಕ್ಷಕ ರಮೇಶ ಕುಷ್ಟಗಿ, ಸುಮಾ ಲಕ್ಕುಂಡಿ, ಸೇರಿದಂತೆ ಶಾಲೆಯ ಸರ್ವ ಶಿಕ್ಷಕ ಶಿಕ್ಷಕಿಯರು ಹಾಗೂ ಬೋದಕೇತರ ಸಿಬ್ಬಂದಿಗಳು ಹಾಜರಿದ್ದರು.

Related posts

ನಮ್ಮದು ನುಡಿದಂತೆ ನಡೆದ ಸರ್ಕಾರ: ಮುಖ್ಯಮಂತ್ರಿ ಸಿದ್ಧರಾಮಯ್ಯ

satyadarshana

ಸಚಿವ ಎಚ್.ಕೆ. ಪಾಟೀಲ ಹಾಗೂ ಶಾಸಕ ಜಿ.ಎಸ್. ಪಾಟೀಲ ಅವರಿಂದ ಬಾಗಿನ ಅರ್ಪಣೆ

satyadarshana

ಅಸ್ಪೃಶ್ಯತೆಗೆ ಕಡಿವಾಣ ಹಾಕುವುದು ನಮ್ಮ ಗುರಿ ಕೋಟ ಶ್ರೀನಿವಾಸ ಪೂಜಾರಿ,

satyadarshana

Leave a Comment