Satya Darshana
ಬಿಸಿ ಬಿಸಿ ಸುದ್ದಿ
ಜಿಲ್ಲೆಬಿಸಿ ಬಿಸಿ ಸುದ್ದಿರಾಜ್ಯ

ಅಧಿಕ ಮಳೆಯಿಂದಾಗಿ ಹಾನಿಗೊಳಗಾದ ಮನೆ ಹಾಗೂ ಬೆಳೆಗೆ ಅಪಾರ ಪ್ರಮಾಣದ ಪರಿಹಾರ ವಿತರಣೆ

ಗದಗ: ನವೆಂಬರ 3: ಪ್ರಸಕ್ತ ಸಾಲಿನಲ್ಲಿ ನಿರಂತರ ಮಳೆಯಿಂದಾಗಿ ಜಿಲ್ಲೆಯು ಸೇರಿದಂತೆ ಇಡೀ ರಾಜ್ಯದಲ್ಲಿ ಸಾಕಷ್ಟು ಪ್ರಮಾಣದಲ್ಲಿ ಮನೆ, ಕೃಷಿ, ತೋಟಗಾರಿಕೆ ಬೆಳೆಗಳು ಹಾನಿಗೊಳಗಾಗಿದ್ದು. ಹಾನಿಗೆ ಸಂಬಂಧಿಸಿದಂತೆ ರಾಜ್ಯ ಸರ್ಕಾರವು ಅಪಾರ ಪ್ರಮಾಣದಲ್ಲಿ ಪರಿಹಾರ ನೀಡಲು ಅನುದಾನ ನೀಡುವ ಮೂಲಕ ಜಿಲ್ಲೆಯ ಅಸಂಖ್ಯಾತ ಕುಟುಂಬಗಳಿಗೆ ನೆರವಾಗಿದೆ. 

ನಿರಂತರ ಮಳೆಯಿಂದಾಗಿ ಗದಗ ಜಿಲ್ಲೆಯಲ್ಲಿ ಸಾಕಷ್ಟು ಪ್ರಮಾಣದ ಹಾನಿಯಾಗಿದ್ದು ಜೂನ್‍ದಿಂದ ಸೆಪ್ಟೆಂಬರ್ ದವರೆಗೆ 148683 ಹೆಕ್ಟೆರ ಕೃಷಿ ಬೆಳೆ ಹಾನಿ ಹಾಗೂ 28184 ಹೆಕ್ಟೇರ್ ತೋಟಗಾರಿಕಾ ಬೆಳೆ ಹಾನಿಯಾಗಿದೆ. ಅಕ್ಟೋಬರ್ ತಿಂಗಳಲ್ಲಿ ಉಂಟಾದ ಅಧಿಕ ಮಳೆಯಿಂದ 14655 ಹೆಕ್ಟೇರ್ ಕೃಷಿ ಹಾಗೂ 3448 ಹೆಕ್ಟೇರ್ ತೋಟಗಾರಿಕೆ ಪ್ರದೇಶದ ಬೆಳೆ ಹಾನಿಗೊಳಗಾಗಿವೆ. ಈ ಹಾನಿಗೆ ಸಂಬಂಧಿಸಿದಂತೆ ಇಲ್ಲಿಯವರೆಗೆ 6 ಹಂತಗಳಲ್ಲಿ 1,12,191 ರೈತ ಫಲಾನುಭವಿಗಳಿಗೆ ಒಟ್ಟು 166.99 ಕೋಟಿ ರೂಗಳ ಪರಿಹಾರವನ್ನು ನೇರವಾಗಿ ರೈತರ ಖಾತೆಗಳಿಗೆ ಜಮೆ ಮಾಡಲಾಗಿರುತ್ತದೆ.

ಪ್ರಸಕ್ತ ಸಾಲಿನಲ್ಲಿ ಭಾರಿ ಮಳೆಯಿಂದಾಗಿ ಹಾನಿಗೊಳಗಾದ ಮನೆಗಳಿಗೆ ಶ್ರೇಣಿವಾರು ಹಾನಿಗೊಳಗಾದ ಮನೆಗಳಿಗೆ ಪರಿಹಾರ ವಿತರಿಸಲಾಗಿರುತ್ತದೆ. ಜಿಲ್ಲೆಯಲ್ಲಿ ಶ್ರೇಣಿವಾರು ಒಟ್ಟು 3512 ಮನೆಗಳು ಹಾನಿಗೊಳಗಾಗಿದ್ದು ಇದರಲ್ಲಿ 568 ಪ್ರಕರಣಗಳನ್ನು ವಿವಿಧ ಕಾರಣಗಳಿಂದಾಗಿ ತಿರಸ್ಕರಿಸಲಾಗಿದ್ದು ಒಟ್ಟು 2944 ಮನೆಗಳಿಗೆ ಪರಿಹಾರ ವಿತರಿಸಲು ಅರ್ಹವಾಗಿರುತ್ತದೆ. ಪರಿಹಾರ ವಿತರಣೆಗೆ ಸಂಬಂಧಿಸಿದಂತೆ ತಂತ್ರಾಂಶದಲ್ಲಿ ಅಗತ್ಯ ದಾಖಲೆಗಳನ್ನು ಗ್ರಾಮೀಣ ಪ್ರದೇಶದಲ್ಲಿ 2973 ನಗರ ಪ್ರದೇಶಗಳಲ್ಲಿ 644 ಒಟ್ಟು 3617 ಮನೆಗಳ ದಾಖಲೆಗಳು ತಂತ್ರಾಂಶದಲ್ಲಿ ದಾಖಲಾಗಿರುತ್ತವೆ. ಜಿಲ್ಲೆಯಲ್ಲಿ ಸಂಪೂರ್ಣವಾಗಿ ಹಾನಿಗೊಳಗಾದ ಮನೆಗಳಿಗೆ ತಲಾ ಮನೆಗೆ 50 ಸಾವಿರದಂತೆ ಒಟ್ಟು 2194 ಮನೆಗಳಿಗೆ ಒಟ್ಟು 1097 ಲಕ್ಷಗಳನ್ನು ಪಾವತಿಸಲಾಗಿದ್ದು ಇದರಲ್ಲಿ 1403 ಮನೆಗಳಿಗೆ ಪರಿಹಾರ ಪಾವತಿ ಪ್ರಗತಿಯಲ್ಲಿದೆ ಎಂದು ಜಿಲ್ಲಾಧಿಕಾರಿ ವೈಶಾಲಿ ಎಂ.ಎಲ್. ತಿಳಿಸಿರುತ್ತಾರೆ.

Related posts

ಬೈಕ್ ಮತ್ತು ಟಂಟಂ ನಡುವೆ ಅಪಘಾತ

satyadarshana

ಶಾಸಕ ಜಿ.ಎಸ್. ಪಾಟೀಲ ವಿವಾದಿತ ಹೇಳಿಕೆ ಖಂಡನೀಯ : ಮಕ್ತುಂಸಾಬ ಮುಧೋಳ

satyadarshana

ಕೆರೆ ತುಂಬಿಸುವ ಯೋಜನೆ: ವಿವಿಧ ಗ್ರಾಮಸ್ಥರೊಂದಿಗೆ ಸಭೆ, ಚರ್ಚೆ

satyadarshana

Leave a Comment