Satya Darshana
ಬಿಸಿ ಬಿಸಿ ಸುದ್ದಿ
ಜಿಲ್ಲೆಬಿಸಿ ಬಿಸಿ ಸುದ್ದಿರಾಜ್ಯ

ಕೊಪ್ಪಳ ಜಿಲ್ಲೆ ಯಲಬುರ್ಗಾ ತಾಲೂಕಿನ ಸಂಕನೂರು : ಭಾರೀ ಮಳೆ, ಹಳ್ಳದಲ್ಲಿ ಕೊಚ್ಚಿ ಹೋದ ನಾಲ್ವರು ಮಹಿಳೆಯರು..!

ಕೊಪ್ಪಳ( ಸತ್ಯದರ್ಶನ ) ಅ.01: ಕಳೆದ ಮೂರು ದಿನಗಳಿಂದ ಸುರಿಯುತ್ತಿರುವ ಮಳೆ ಸಾಕಷ್ಟು ಅನಾಹುತಹಳನ್ನು ಮಾಡುತ್ತಿದೆ.‌ ಇಲ್ಲೊಂದು ಊರಲ್ಲಿ ಭಾರೀ ಮಳೆಗೆ ನಾಲ್ಕು ಜನ ಮಹಿಳೆಯರು ಕೊಚ್ಚಿಕೊಂಡು ಹೋಗಿರುವ ಘಟನೆ ನಡೆದಿದೆ. ಅಷ್ಟಕ್ಕೂ ಎಲ್ಲಿ ಈ ಘಟನೆ ನಡೆದಿರೋದು ಅಂತೀರಾ? ಹಾಗಾದ್ರೆ ಈ ರಿಪೋರ್ಟ್ ನೋಡಿ.

ಹಳ್ಳದಲ್ಲಿ ಕೊಚ್ಚಿಕೊಂಡು ಹೋದ ನಾಲ್ವರು ಮಹಿಳೆಯರು

ಎಂದಿನಂತೆ ಆ ಮಹಿಳೆಯರು ಕಾಟನ್ ಜೀನಿನ‌ ಕೆಲಸಕ್ಕೆ ಹೋಗಿದ್ದರು.‌ ಸಂಜೆ ವೇಳೆಗೆ ಕೆಲಸ ಮುಗಿಸಿಕೊಂಡು ವಾಪಸ್ ತಮ್ಮ ಊರಿಗೆ ತಾವು ಬರುತ್ತಿದ್ದರು. ಈ ವೇಳೆಯಲ್ಲಿ ಊರಿಗೆ ಹೊಂದಿಕೊಂಡಂತೆ ಇರುವ ಹಳ್ಳದಲ್ಲಿ ನೀರಿನ ರಭಸ ಲೆಕ್ಕಿಸದೆ ನಾಲ್ವರು ಹಳ್ಳಕ್ಕೆ ಇಳಿದಿದ್ದಾರೆ. ಈ ವೇಳೆಯಲ್ಲಿ ನಾಲ್ವರೂ ಮಹಿಳೆಯರು ಹಳ್ಳ ದಾಟುವ ಸಮಯದಲ್ಲಿ ನೀರಿನ‌ ರಭಸಕ್ಕೆ ಕೊಚ್ಚಿಕೊಂಡು ಹೋಗಿದ್ದಾರೆ.

ಎಲ್ಲಿ ಈ ಘಟನೆ ನಡೆದಿರೋದು?

ಬರಪೀಡಿತ ಪ್ರದೇಶ ಎಂದು ಕರಡಯಿಸಿಕೊಳ್ಳುವ ಕೊಪ್ಪಳ ಜಿಲ್ಲೆಯಲ್ಲಿ ಈ ಘಟನೆ ನಡೆದಿದೆ. ಜಿಲ್ಲೆ ಯಲಬುರ್ಗಾ ತಾಲೂಕಿನ ಸಂಕನೂರು ಗ್ರಾಮಕ್ಕೆ ಹೊಂದಿಕೊಂಡಂತೆ ಇರುವ ಹಳ್ಳದಲ್ಲಿ ಈ ಘಟನೆ ನಡೆದಿದೆ.‌

ಹಳ್ಳದಲ್ಲಿ ಕೊಚ್ಚಿ ಹೋದವರು ಯಾರು?

ಇನ್ನು ಸಂಕನೂರು ಗ್ರಾಮದ ನಾಲ್ವರು ಮಹಿಳೆಯರು ಹಳ್ಳದಲ್ಲಿ ಕೊಚ್ಚಿಕೊಂಡು ಹೋಗಿದ್ದಾರೆ. ಇವರು ಯಾರು ಅಂತ ನೋಡೋದಾದ್ರೆ ಹತ್ತಿ ಜೀನ್ ನಿಂದ ಕೆಲಸವನ್ನು 40 ವರ್ಷದ ಭುವನೇಶ್ವರಿ ಪೋಲಿಸ ಪಾಟೀಲ್, 32 ವರ್ಷದ ಗೀರಿಜಾ ಮಾಲಿಪಾಟೀಲ್, 19 ವರ್ಷದ ವೀಣಾ ಪೋಲಿಸ್ ಪಾಟೀಲ್, 45 ವರ್ಷದ ಪವಿತ್ರಾ ಪೊಲೀಸ್ ಪಾಟೀಲ್ ಹಳ್ಳದಲ್ಲಿ ಕೊಚ್ಚಿಕೊಂಡು ಹೋದ ದುರ್ದೈವಿಗಳು.

Related posts

ಕರಾಟಯಲ್ಲಿ ಕಂಟಿಗೆ ಚಿನ್ನಾ, ಸವಣೂರಿಗೆ ಬೆಳ್ಳಿ

satyadarshana

ಕನಸು ನನಸಾಗಿಸಲು ಪೊಲೀಸ್ ಜೀಪ್ ಕದ್ದ ಭೂಪ…

satyadarshana

ಜಿಮ್ಸ್‍ದಲ್ಲಿ 07 ತಿಂಗಳ ಮಗುವಿಗೆ ಯಶಸ್ವಿ ಶಸ್ತ್ರ ಚಿಕಿತ್ಸೆ.

satyadarshana

Leave a Comment