Satya Darshana
ಬಿಸಿ ಬಿಸಿ ಸುದ್ದಿ
ಜಿಲ್ಲೆಬಿಸಿ ಬಿಸಿ ಸುದ್ದಿರಾಜ್ಯ

ಪ್ರಾಣಿಗಳಲ್ಲಿ ರೇಬಿಸ್ ರೋಗ ಪತ್ತೆ ಹಚ್ಚುವಿಕೆ ಕುರಿತು ತರಬೇತಿ

ಗದಗ ( ಸತ್ಯದರ್ಶನ  ) ಸೆ. 21 ಕರ್ನಾಟಕ ಪಶುವೈದ್ಯಕೀಯ ಪರಿಷತ್ತು, ಕರ್ನಾಟಕ ಪಶುವೈದ್ಯಕೀಯ ಪಶು ಹಾಗೂ ಮೀನುಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯ, ಬೀದರ ಮತ್ತು ಪಶುಪಾಲನೆ & ಪಶುವೈದ್ಯಕೀಯ ಸೇವಾ ಇಲಾಖೆಗಳ ಸಹಯೋಗದಲ್ಲಿ ಗದಗನ ಪಶುವೈದ್ಯಕೀಯ ಮಹಾವಿದ್ಯಾಲಯದಲ್ಲಿ ಬುಧವಾರದಂದು ಪ್ರಾಣಿಗಳಲ್ಲಿ ರೇಬಿಸ್ ರೋಗ ಪತ್ತೆ ಹಚ್ಚುವಿಕೆ”ಕುರಿತು ಬೆಳಗಾವಿ ವಲಯದ 6 ಜಿಲ್ಲೆಗಳ ಪಶುವೈದ್ಯಾಧಿಕಾರಿಗಳಿಗೆ ಒಂದು ದಿನದ ತರಬೇತಿ ಕಾರ್ಯಕ್ರಮವನ್ನು, ಹಮ್ಮಿಕೊಳ್ಳಲಾಯಿತು.

      ಪಶುವೈದ್ಯಕೀಯ ಮಹಾವಿದ್ಯಾಲಯದ ಡೀನ್ ಡಾ. ಆರ್. ನಾಗರಾಜ ಅವರು ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ ರೇಬಿಸ್ ರೋಗವನ್ನು ಪಶು ಆಸ್ಪತ್ರೆ ಮಟ್ಟದಲ್ಲಿಯೆ ಪಶುವೈದ್ಯರು ಶೀಘ್ರ ಪತ್ತೆ ಹಚ್ಚುವಿಕೆಯಿಂದ ರೇಬಿಸ್ ರೋಗ ಹರಡುವುದನ್ನು ತಡೆಗಟ್ಟಬಹುದು ಎಂದು ತಿಳಿಸಿದರು.

      ಡಾ. ಕೆ. ಸತ್ಯನಾರಾಯಣ ಮಾತನಾಡಿ ರಾಜ್ಯದ ಪ್ರತಿ ತಾಲ್ಲೂಕಿನ ಪಶುವೈದ್ಯರಿಗೂ ಪ್ರಾಣಿಗಳಲ್ಲಿ ರೇಬಿಸ್ ರೋಗವನ್ನು ಪತ್ತೆ ಹಚ್ಚುವಿಕೆಯ ಬಗ್ಗೆ ತರಬೇತಿ ನೀಡಬೇಕೆಂದು ಮತ್ತು ಇದರಿಂದ ರೇಬಿಸ್ ರೋಗ ತಡೆಗಟ್ಟಬಹುದು ಎಂದು ತಿಳಿಸಿದರು.

      ಡಾ. ಕೃಷ್ಣ ಇಸಲೂರವರು ಪಶುವೈದ್ಯರಿಗೆ ನೂತನ ಪದ್ದತಿಯಲ್ಲಿ ರೇಬಿಸ್ ರೋಗವನ್ನು ಪತ್ತೆ ಹಚ್ಚುವಿಕೆಯ ತರಬೇತಿಯನ್ನು ಪ.ವೈ.ರೋಗಶಾಸ್ತ್ರ, ಪ.ವೈ.ಸಾರ್ವಜನಿಕ ಸ್ವಾಸ್ಥ್ಯ, ಪ.ವೈ.ಸೂಕ್ಷ್ಮಾಣುಜೀವಿ ಶಾಸ್ತ್ರ ಮತು ್ತಪ.ವೈ.ಚಿಕ್ಸಿತಾ ಸಂಕೀರ್ಣ ವಿಭಾಗಗಳ ಪ್ರಯೋಗಾಲಯಗಳಲ್ಲಿ ಪ್ರಾತ್ಯಕ್ಷಿತೆ ಮೂಲಕ ತರಬೇತಿ ನೀಡಿದರು.

         ಈ ಕಾರ್ಯಕ್ರಮದಲ್ಲಿ ಕರ್ನಾಟಕ ಪಶುವೈದ್ಯಕೀಯ ಪರಿಷತ್ತು ಅಧ್ಯಕ್ಷರಾದ ಡಾ. ಕೆ ಸತ್ಯನಾರಾಯಣ, ವಿಸ್ತರಣಾ ನಿರ್ದೇಶಕರಾದ ಡಾ. ಎನ್. ಎ. ಪಾಟೀಲ, ಪಶುಪಾಲನೆ ಮತ್ತು ಪಶುವೈದ್ಯಕೀಯ ಸೇವಾ ಇಲಾಖೆಯ ಉಪ ನಿರ್ದೇಶಕರಾದ ಡಾ. ಹುಲಗನ್ನವರ ಎಚ್. ಬಿ., ಮತ್ತು ಡಾ. ಕೃಷ್ಣ ಇಸಲೂರ ವೆಟರನರಿ ಮೈಕ್ರೋಬಯೋಲಾಜಿ ಪ್ರಾದ್ಯಪಕರು ಸೇರಿದಂತೆ ಮತ್ತಿತರರು ಹಾಜರಿದ್ದರು. ತರಬೇತಿ ಕಾರ್ಯಕ್ರಮದಲ್ಲಿ ವಿವಿಧ ಜಿಲ್ಲೆಗಳ 70 ಪಶುವೈದ್ಯರು ತರಬೇತಿ ಪಡೆದುಕೊಂಡರು.

Related posts

ಗದಗ ಅರಣ್ಯ ವಿಭಾಗದ ವತಿಯಿಂದ ಸಾಲುಮರದ ತಿಮ್ಮಕ್ಕ ಉದ್ಯಾನದಲ್ಲಿ ಪರಿಸರ ದಿನ ಆಚರಣೆ

satyadarshana

ಕೊಪ್ಪಳ ಜಿಲ್ಲೆ ಗಂಗಾವತಿ; ಅಂಬೇಡ್ಕರ್‌ ಮೂರ್ತಿ ಹೋಲುವ ಗಣೇಶ ಮೂರ್ತಿ, ದೂರು ದಾಖಲು

satyadarshana

ಅಯೋಧ್ಯೆಯಲ್ಲಿ ಶ್ರೀರಾಮ ಪ್ರಾಣ ಪ್ರತಿಷ್ಠಾಪನಾ ಕಾರ್ಯಕ್ರಮ * ಅಂಜನಾದ್ರಿ ಬೆಟ್ಟಕ್ಕೆ ಕೇಂದ್ರ ಸಚಿವರ ಭೇಟಿ: ವಿಶೇಷ ಪೂಜೆ

satyadarshana

Leave a Comment