Satya Darshana
ಬಿಸಿ ಬಿಸಿ ಸುದ್ದಿ
ಜಿಲ್ಲೆಬಿಸಿ ಬಿಸಿ ಸುದ್ದಿ

ಗಜೇಂದ್ರಗಡ ತಾಲೂಕಾ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಪದಾಧಿಕಾರಿಗಳ ಆಯ್ಕೆ.

 

ಗಜೇಂದ್ರಗಡ: ( 25 ಜೂನ್  )ಗದಗ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ  ಗಜೇಂದ್ರಗಡ ತಾ ಲೂಕು ಘಟಕದ ಪದಾಧಿಕಾರಿಗಳ ತಾಲೂಕಿನ ಉಸ್ತುವಾರಿಯಾಗಿದ್ದ ಜಿಲ್ಲಾ ಕಾರ್ಯಕಾರಿ ಸಮಿತಿಯ ಸದಸ್ಯರಾದ ಪ್ರಭುಸ್ವಾಮಿ ಅರವಟಗಿಮಠ ಅವರ ಸಮ್ಮುಖದಲ್ಲಿ  ಅವಿರೋಧವಾಗಿ ಆಯ್ಕೆ ಪ್ರಕ್ರಿಯೆ ನಡೆಯಿತು.
2022-25 ನೇ ಸಾಲಿನ ಗಜೇಂದ್ರಗಡ ತಾಲೂಕು ಘಟಕಕ್ಕೆ ಅಸ್ತಿತ್ವಕ್ಕೆ ಬಂದಿದ್ದು. ಈ ಕೆಳಕಂಡ ಪತ್ರಕರ್ತರು ತಾಲೂಕು ಪದಾಧಿಕಾರಿಗಳಾಗಿ ಆಯ್ಕೆಯಾಗಿದ್ದಾರೆ.
ಗೌರವಾಧ್ಯಕ್ಷರಾಗಿ ಡಿ.ಜಿ.ಮೋಮಿನ ಅವರನ್ನು ಆಯ್ಕೆ ಮಾಡಲಾಯಿತು.
೧)ಅಧ್ಯಕ್ಷ- ಶ್ರೀಶೈಲ ಕುಂಬಾರ
೨)ಉಪಾಧ್ಯಕ್ಷ ೧-ಚನ್ನು ಸಮಗಂಡಿ
೩)ಉಪಾಧ್ಯಕ್ಷ ೨-ಆದರ್ಶ ಕುಲಕರ್ಣಿ
೪)ಪ್ರಧಾನ ಕಾರ್ಯದರ್ಶಿ-ರವೀಂದ್ರ ಹೊನವಾಡ
೫)ಕಾರ್ಯದರ್ಶಿ ೧-ಪ್ರಾಣೇಶ ಕೊಡಗಾನೂರ
೬)ಕಾರ್ಯದರ್ಶಿ ೨-ನಿಂಗಪ್ಪ ಮಡಿವಾಳರ
೭)ಖಜಾಂಚಿ-ಜಗದೀಶ ಹೊಸಳ್ಳಿ
ಈ ಸಂದರ್ಭದಲ್ಲಿ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಗದಗ ಜಿಲ್ಲಾಧ್ಯಕ್ಷರಾದ ರಾಜು ಎಂ. ಹೆಬ್ಬಳ್ಳಿ, ಗದಗ ಜಿಲ್ಲಾ ಕಾರ್ಯಕಾರಿ ಸಮಿತಿ ಸದಸ್ಯ ಫಿರೋಜ್ ಮೋಮಿನ, ತಾಲ್ಲೂಕಿನ ಪತ್ರಕರ್ತರಾದ ಮಂಜುನಾಥ ರಾಠೋಡ, ಎಸ್.ಎಂ. ಸೈಯ್ಯದ, ಈಶ್ವರ ಬೆಟಗೇರಿ, ಮಲ್ಲಯ್ಯ ಗುಂಡಗೋಪುರಮಠ, ವಿನಾಯಕ ಜೋಶಿ, ಹನಮಂತ ಬಂಡಿವಡ್ಡರ ಸೇರಿ ಹಲವರಿದ್ದರು.
ಅವಿರೋಧವಾಗಿ ಆಯ್ಕೆಯಾಗಲು ಸಹಕರಿಸಿದ ಗಜೇಂದ್ರಗಡ ತಾಲೂಕು ಘಟಕದ ಎಲ್ಲಾ ಪತ್ರಕರ್ತರಿಗೆ, ನೂತನ ಪದಾಧಿಕಾರಿಗಳಿಗೆ  ಹಾಗೂ ಉಸ್ತುವಾರಿಗಳಿಗೆ ಜಿಲ್ಲಾ ಕಾನಿಪ ಪರವಾಗಿ ಅಭಿನಂದನೆಗಳು..

ರಾಜು ಎಂ. ಹೆಬ್ಬಳ್ಳಿ

ಜಿಲ್ಲಾಧ್ಯಕ್ಷರು

ಕಾನಿಪ, ಗದಗ.

Related posts

satyadarshana 24.10.2024

satyadarshana

ಕಾಮಗಾರಿ ಗುಣಮಟ್ಟದಿಂದ ಕೂಡಿರಬೇಕು, ಅವಧಿಯೊಳಗೆ ಕಾಮಗಾರಿಯನ್ನು ಮುಗಿಸಿ. ಎಚ್ ಕೆ ಪಾಟೀಲ್

satyadarshana

ತಿರುಳ್ಗನ್ನಡ ವೇದಿಕೆಯಲ್ಲಿ ಮನತಣಿಸಿದ ಸಾಂಸ್ಕೃತಿಕ ಕಾರ್ಯಕ್ರಮಗಳು —

satyadarshana