ಸತ್ಯದರ್ಶನ
ಗದಗ:. ೧೯೫೦ ಜನೇವರಿ ೨೬ ರಂದು ನಮ್ಮ ದೇಶ ಪ್ರಜಾ ಸತ್ತಾತ್ಮಕ ರಾಷ್ಟ್ರವೆಂದು ಘೋಷಣೆಯಾಗುವಲ್ಲಿ ಭಾರತರತ್ನ, ಸಂವಿಧಾನಶೀಲ್ಪಿ ಡಾ. ಬಿ ಆರ್ ಅಂಬೇಡ್ಕರವರ ಪಾತ್ರ ಅನನ್ಯವಾದುದಾಗಿದೆ. ಇದನ್ನು ಮನಗಂಡೆ ನಮ್ಮ ಘನ ಸರ್ಕಾರವು ೭೨ ನೇ ಗಣರಾಜ್ಯೋತ್ಸವದ ದಿನದಿಂದಲೇ ಮಹಾತ್ಮಾ ಗಾಂಧೀಜಿ ಹಾಗೂ ಬಿ ಆರ್ ಅಂಬೇಡ್ಕರ್ ಅವರ ಭಾವಚಿತ್ರವನ್ನು ಇಟ್ಟು ಧ್ವಜಾರೋಹಣ ಮಾಡುವಂತೆ ಆದೇಶಿಸಿತ್ತು. ಆದರೆ ಇದೇ ತಿಂಗಳು ೨೬ ಎಪ್ಪತ್ತಮೂರನೇ ೭೩ ಗಣರಾಜ್ಯೋತ್ಸವವನ್ನು ಆಚರಿಸುವ ವೇಳೆಗೆ ಇಡೀ ದೇಶವೇ ಈ ನಿಯಮವನ್ನು ಪಾಲಿಸಿತ್ತು.
ಆದರೆ ರಾಯಚೂರು ಜಿಲ್ಲಾ ಸೇಷನ್ಸ್ ನ್ಯಾಯಲಯದಲ್ಲಿ ಧ್ವಜಾರೋಹಣ ನೆರವೇರಿಸಲು ಬಂದ ನ್ಯಾಯಾಧೀಶ ಮಲ್ಲಿಕಾರ್ಜುನಗೌಡ ಅಂಬೇಡ್ಕರ್ ಅವರ ಭಾವಚಿತ್ರವನ್ನು ತೆಗೆಯುವಂತೆ ಹೇಳಿರುವುದು ದೇಶದ ಸಂವಿಧಾನದ ನಿರ್ಮಾತೃ ಅಂಬೇಡ್ಕರ್ ಅವರಿಗೆ ಅಪಮಾನ ಮಾಡಿರುವುದು ಅಕ್ಷಮ್ಯ ಅಪರಾಧವಾಗಿದೆ. ಈ ತಪ್ಪನ್ನೆಸಗುವ ಹಿಂದೆ ಇರುವಂತಹ ಷಡ್ಯಂತ್ರವನ್ನು ಪ್ರತ್ಯೇಕ *ತ್ರೀ ಮ್ಯಾನ್ ಕಮಿಟಿ* ಅಧ್ಯಯನ ಮಾಡಿ ಸರ್ಕಾರಕ್ಕೆ ವರದಿ ಸಲ್ಲಿಸಬೇಕೆಂದು ಅಲ್ಲಿಯವರೆಗೂ ಜಿಲ್ಲಾ ನ್ಯಾಯಾಧೀಶ ಮಲ್ಲಿಕಾರ್ಜುನ ಗೌಡ ಸೇವೆಯಿಂದ ಅಮಾನತ್ತಿನಲ್ಲಿರಬೇಕೆಂದು ಸತ್ಯಾಸತ್ಯತೆಯನ್ನರಿತು ವರದಿ ಬಂದ ಮೇಲೆ ಮಲ್ಲಿಕಾರ್ಜುನ ಗೌಡನನ್ನು ಶಾಶ್ವತ ಗಡಿಪಾರು ಮಾಡಬೇಕೆಂದು ಕರ್ನಾಟಕ ಅಭಿವೃದ್ಧಿ ವೇದಿಕೆ ರಾಜ್ಯಸಮಿತಿ, ಜಿಲ್ಲಾಸಮಿತಿ, ತಾಲೂಕಾ ಸಮಿತಿಯ ಎಲ್ಲ ಪದಾಧಿಕಾರಿಗಳು, ಸದಸ್ಯರು ವೇದಿಕೆಯ ಕಛೇರಿಯಲ್ಲಿ ಠರಾವು ಮಾಡಿ ಸದರಿ ಮನವಿ ಪತ್ರವನ್ನು ರಾಷ್ಟ್ರಪತಿ, ಪ್ರಧಾನಮಂತ್ರಿ ಹಾಗೂ ಮುಖ್ಯಮಂತ್ರಿಗಳಿಗೆ ಸಲ್ಲಿಸಲು ಗಜೇಂದ್ರಗಡ ನಗರದ ದಂಡಾಧಿಕಾರಿಗಳಿಗೆ ಮನವಿಯನ್ನು ಸಲ್ಲಿಸಿದರು.
ಈ ಸಂದರ್ಭದಲ್ಲಿ ಎಲ್ಲ ಪದಾಧಿಕಾರಿಗಳು ಹಾಜರಿದ್ದರು.
