Satya Darshana
ಬಿಸಿ ಬಿಸಿ ಸುದ್ದಿ
ಬಿಸಿ ಬಿಸಿ ಸುದ್ದಿರಾಜ್ಯ

ವೀಕೆಂಡ್‌ ಕರ್ಫ್ಯೂ ತೆರವು, ನೈಟ್ ಕರ್ಫ್ಯೂ ಮುಂದುವರಿಕೆ

ಬೆಂಗಳೂರು :ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಶುಕ್ರವಾರ ರಾಜ್ಯದ ಕೋವಿಡ್ 19 ಸ್ಥಿತಿಗತಿ ಕುರಿತು ಗೃಹ ಕಚೇರಿ ಕೃಷ್ಣಾದಲ್ಲಿ ಮಹತ್ವದ ಸಭೆ ನಡೆಸಿದ್ದು, ವೀಕೆಂಡ್‌ ಕರ್ಫ್ಯೂ ತೆರವು ಗೊಳಿಸುವ ತೀರ್ಮಾನ ಕೈಗೊಂಡಿದ್ದಾರೆ.

ಸಚಿವ ಆರ್ ಅಶೋಕ್ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿ , ಎಲ್ಲಾ ತಜ್ಞರ ಅಭಿಪ್ರಾಯಗಳನ್ನು ಮುಖ್ಯಮಂತ್ರಿಗಳು ಸ್ವೀಕರಿಸಿದ್ದಾರೆ. ವೀಕೆಂಡ್‌ ಕರ್ಫ್ಯೂ ತೆರವು ಗೊಳಿಸುವ ತೀರ್ಮಾನ ಕೈಗೊಂಡಿದ್ದು, ನೈಟ್ ಕರ್ಫ್ಯೂ ಮುಂದುವರಿಯಲಿದೆ, ಉಳಿದ ಎಲ್ಲ ನಿಯಮಗಳು ಮುಂದುವರಿಯುತ್ತದೆ ಎಂದು ತಿಳಿಸಿದರು.

ನಾಳೆಯಿಂದ ವಾರಾಂತ್ಯ ಕರ್ಫ್ಯೂ ಇಲ್ಲ ಎಂದು ತಿಳಿಸಿದರು.

ಶಾಲೆಗಳು ಯಥಾ ಸ್ಥಿತಿ

ರಾಜ್ಯದಲ್ಲಿ ಶಾಲೆಗಳನ್ನು ಬಂದ್ ಮಾಡುವುದಿಲ್ಲ. 6 ರಿಂದ 15 ವರ್ಷದ ಮಕ್ಕಳಿಗೆ ಪಾಸಿಟಿ ವಿಟಿ ರೇಟ್ ಕಡಿಮೆ ಇದೆ.ಜ 29 ರ ವರೆಗೆ ಬೆಂಗಳೂರು ನಗರದಲ್ಲಿ ಶಾಲೆಗಳು ಬಂದ್ ಮಾಡಲಾಗುತ್ತಿದ್ದು, ಆ ಬಳಿಕ ಪರಿಶೀಲನೆ ನಡೆಸುತ್ತೇವೆ , 28 ರಂದು ಮುಂದಿನ ನಿರ್ಧಾರ ಕೈಗೊಳ್ಳುತ್ತೇವೆ ಎಂದು ಶಿಕ್ಷಣ ಸಚಿವ ಬಿ.ಸಿ. ನಾಗೇಶ್ ಸಭೆಯ ಬಳಿಕ ತಿಳಿಸಿದರು.

ಬೇರೆ ಜಿಲ್ಲೆಗಳಲ್ಲಿ ಕಡಿಮೆ ಕೇಸ್ ಇದ್ದರೆ 3 ದಿನ ಹೆಚ್ಚು ಕೇಸ್ ಇದ್ದರೆ ಶಾಲೆಗಳು 7 ದಿಂದ ಬಂದ್ ತೀರ್ಮಾನ, ಆ ತೀರ್ಮಾನವನ್ನು ಸ್ಥಳೀಯ ಅಧಿಕಾರಿಗಳು ತೆಗೆದುಕೊಳ್ಳುತ್ತಾರೆ ಎಂದು ಸಚಿವರು ತಿಳಿಸಿದರು.

ಸಭೆಯಲ್ಲಿ ಸಚಿವರಾದ ಗೋವಿಂದ ಕಾರಜೋಳ, ಡಾ. ಕೆ. ಸುಧಾಕರ್, ಆರಗ ಜ್ಞಾನೇಂದ್ರ, ತಾಂತ್ರಿಕ ಸಲಹಾ ಸಮಿತಿ ಅಧ್ಯಕ್ಷ ಡಾ. ಸುದರ್ಶನ್, ಸರ್ಕಾರದ ಮುಖ್ಯ ಕಾರ್ಯದರ್ಶಿ ಪಿ. ರವಿಕುಮಾರ್ ಮತ್ತು ಇತರ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.

 

 

Related posts

ಅಕ್ರಮ ಮರಂ ಗಣಿಗಾರಿಕೆ ಹೇಳೋರಿಲ್ಲ ಕೇಳೋರಿಲ್ಲ ಕಣ್ಣು ಮುಚ್ಚಿ ಕುಂತ ಅಧಿಕಾರಿಗಳು.

satyadarshana

ಗಣೇಶ ಮೂರ್ತಿಯ ಪ್ರತಿಷ್ಠಾಪನೆ. ಹುಬ್ಬಳ್ಳಿ ಈದ್ಗಾದಲ್ಲಿ ಚೌತಿ ಆಚರಣೆಗೆ ಹೈಕೋರ್ಟ್‌ ಅಸ್ತು ;

satyadarshana

ಕಟಾವು ಮಾಡಿ ಕಣದಲ್ಲಿಟ್ಟು ಬೆಳೆ ಕಳೆದುಕೊಂಡವರಿಗೆ ನಷ್ಟ’ ಕೊಳೆತ ಬೆಳೆಗಳಿಗೆ ಸಿಗಲ್ಲ ಸರ್ಕಾರದ ಪರಿಹಾರ!

satyadarshana

Leave a Comment