Satya Darshana
ಬಿಸಿ ಬಿಸಿ ಸುದ್ದಿ
ಬಿಸಿ ಬಿಸಿ ಸುದ್ದಿರಾಜ್ಯ

ಸರ್ಕಾರಿ ಶಾಲಾ ಮಕ್ಕಳ ಬೇಳೆಯಲ್ಲೂ ಭಾರೀ ಭ್ರಷ್ಟಾಚಾರವಾಗಿದೆ. ಕಳಪೆ ಬೇಳೆ ಕೊಟ್ಟು ಮಕ್ಕಳಿಗೆ ಭಾರೀ ವಂಚನೆ

ಸುದ್ದಿಮೂಲ ಸತ್ಯದರ್ಶನ

ಕೊಪ್ಪಳ : ಸರ್ಕಾರಿ ಶಾಲಾ ಮಕ್ಕಳ ಬೇಳೆಯಲ್ಲೂ ಭಾರೀ ಭ್ರಷ್ಟಾಚಾರವಾಗಿದೆ. ಕಳಪೆ ಬೇಳೆ ಕೊಟ್ಟು ಮಕ್ಕಳಿಗೆ ಭಾರೀ ವಂಚನೆ ಮಾಡಿದ್ದಾರೆ. ಬಿಸಿಯೂಟಕ್ಕೆ ಕಳಪೆ ಬೇಳೆ ಕೊಟ್ಟು ಕೋಟಿ ಕೋಟಿ ಲೂಟಿ ಮಾಡಿದ್ದಾರೆ. ಅಧಿಕಾರಿಗಳು ಬಡ ಮಕ್ಕಳ ಹೊಟ್ಟೆ ಮೇಲೆ ಹೊಡೆಯುತ್ತಿದ್ದು , ರಾಜ್ಯದಲ್ಲಿ ಸೇವನೆಗೆ ಯೋಗ್ಯವಲ್ಲದ ಬೇಳೆ ಸಪ್ಲೈ ಮಾಡುತ್ತಿದ್ದಾರೆ.

ಕರ್ನಾಟಕ ಆಹಾರ ಸರಬರಾಜು ನಿಗಮದ ನಿರ್ದೇಶಕರಿಂದ ಕೊಪ್ಪಳದಲ್ಲಿ ಲೈವ್​ ರೇಡ್​ನಲ್ಲಿ 125 ಕೋಟಿ ಭಾರೀ ಭ್ರಷ್ಟಾಚಾರ ಬಯಲಾಗಿದೆ. ಸರ್ಕಾರದಿಂದ ಬೇಳೆ ಖರೀದಿಗೆ ಪ್ರತಿ ಕೆ.ಜಿಗೆ ತಲಾ 85 ರೂ.ನಿಗದಿ ಮಾಡಿದ್ದು , ಸಪ್ಲೈಯರ್ಸ್ 40 % ಕಳಪೆ ಬೇಳೆ ಖರೀದಿಸಿ ವಂಚಿಸುತ್ತಿದ್ದಾರೆ.

ಭ್ರಷ್ಟಚಾರದಲ್ಲಿ ಆಹಾರ, ಶಿಕ್ಷಣ ಇಲಾಖೆ ಅಧಿಕಾರಿಗಳು ಭಾಗಿಯಾಗಿದ್ದು, ಸರ್ಕಾರ ಒಂದು ಮೂಟೆ ಬೇಳೆ ಖರೀದಿಗೆ 8,500 ರೂ ಕೊಡುತ್ತೆ , ಅಧಿಕಾರಿಗಳು ಪ್ರತಿ ಮೂಟೆ ಮೇಲೆ 2000 ಲಂಚ ಪಡೆಯುತ್ತಿದ್ದಾರೆ.ಏಜೆನ್ಸಿಗಳ ಜೊತೆ ಸೇರಿಕೊಂಡ 2 ಇಲಾಖೆ ಅಧಿಕಾರಿಗಳಿಂದ ಭ್ರಷ್ಟಾಚಾರ ಮಾಡುತ್ತಿದ್ದಾರೆ.

ಕರ್ನಾಟಕ ಆಹಾರ ಸರಬರಾಜು ನಿಗಮದ ನಿರ್ದೇಶಕರಿಂದ ಶ್ರೀರಂಗಪಟ್ಟಣ, ಮದ್ದೂರು, ಕನಕಪುರದಲ್ಲೂ ದಾಳಿ ನಡೆದಿದ್ದು , ಈಗಾಗಲೇ ಮಂಡ್ಯ ಜಿಲ್ಲೆಯಲ್ಲಿ ಕೇಸ್ ದಾಖಲಾಗಿದೆ. ರಾಜ್ಯದ ಎಲ್ಲಾ ಜಿಲ್ಲೆಗಳಲ್ಲೂ ನಿರ್ದೇಶಕರಿಂದ ರೇಡ್ ಆಗಲಿದೆ. ಕಲಬುರಗಿ ಜಿಲ್ಲೆಯಿಂದ ಕಳಪೆ ಬೇಳೆ ಪೂರೈಕೆಯಾಗಿದೆ.

ಕಲಬುರಗಿಯ ಮಯೂರ್ ಪಲ್ಸ್, ಬೀದರ್​​ನ ಮಹಾಲಕ್ಷ್ಮೀ ದಾಲ್​ಮಿಲ್ , ಹುಬ್ಬಳ್ಳಿಯ ಮುರಳಿ ಇಂಡಸ್ಟ್ರೀಸ್ , ಕಲಬುರಗಿಯ ಆಮಿತ್ ಆಗ್ರೋ , ಯಶ್ ಪ್ರೊಟೀನ್ಸ್​ ಪೈ.ಲಿ. ಈ ಎಲ್ಲಾ ಕಂಪನಿಗಳನ್ನು ಬ್ಲಾಕ್​ ಲಿಸ್ಟ್​ಗೆ ಸೇರಿಸಲು ಆಗ್ರಹಿಸಲಾಗಿದೆ.

 

Related posts

ಶ್ರೀ ಅಟಲ್ ಬಿಹಾರಿ ವಾಜಪೇಯಿ ಕಾನೂನು ಮಹಾ ವಿದ್ಯಾಲಯ ಶುಲ್ಕ ಹೆಚ್ಚಳ : ವಿದ್ಯಾರ್ಥಿಗಳಿಂದ ಪ್ರತಿಭಟನೆ

satyadarshana

ಪಿಎಸ್ಐ ಸೇರಿದಂತೆ ಇಬ್ಬರು ಪೇದೆಗಳು ಲೋಕಾಯುಕ್ತ ಬಲೆಗೆ.ಹಣ ಕೊಡುವ ಸಂದರ್ಭದಲ್ಲಿ ಲೋಕಾಯುಕ್ತ ದಾಳಿ

satyadarshana

152ನೇ ಗಾಂಧೀಜಿ ಜಯಂತಿ ಸಂಭ್ರಮ

satyadarshana

Leave a Comment