Satya Darshana
ಬಿಸಿ ಬಿಸಿ ಸುದ್ದಿ
ಜಿಲ್ಲೆಬಿಸಿ ಬಿಸಿ ಸುದ್ದಿ

ಕೂಲಿ ಕಾರ್ಮಿಕರ ಮೇಲೆ ಗ್ರಾ.ಪಂ. ಅಧ್ಯಕ್ಷೆ‌ಯ ಪತಿಯಿಂದ ದಬ್ಬಾಳಿಕೆ.ರಕ್ಷಣೆ ನೀಡುವಂತೆ ಪಂಚಾಯತ್ ಇಓ ಮನವಿ

ಕುಷ್ಟಗಿ: ತಾಲೂಕಿನ ಹೂಲಗೇರಾ ಗ್ರಾಮ ಪಂಚಾಯತ್ ಅಧ್ಯಕ್ಷೆ‌ಯ ಪತಿಯ ದಬ್ಬಾಳಿಕೆಗೆ ರೋಸಿ ಹೋದ ಉದ್ಯೊಗ ಖಾತ್ರಿ ಕೂಲಿಕಾರ್ಮಿಕರು ತಮಗೆ ರಕ್ಷಣೆ ನೀಡುವಂತೆ ಕುಷ್ಟಗಿ ತಾಲೂಕು ಪಂಚಾಯತ್ ಇಓ ಡಾ.ಜಯರಾಮ್ ಚೌವ್ಹಾಣ್ ಅವರಿಗೆ ಮನವಿ ಸಲ್ಲಿಸಿದ್ದಾರೆ.

ಉದ್ಯೋಗ ಖಾತ್ರಿ ಯೋಜನೆಯ ಕೆಲಸ ಮಾಡುವ ಕೂಲಿಕಾರರಿಗೆ ಗ್ರಾ.ಪಂ. ಅದ್ಯಕ್ಷೆಯ ಪತಿ ವಿನಾಕಾರಣ ಹಸ್ತಕ್ಷೇಪ‌‌ ಮಾಡುತ್ತಿದ್ದು ಕೂಲಿಕಾರರ ಮೇಲೆ ದಬ್ಬಾಳಿಕೆ ನಡೆಸುತ್ತಿದ್ದಾರೆ ಎಂದು ಆರೋಪಿಸಿದ ಕೂಲಿಕಾರರು, ತಮಗೆ ರಕ್ಷಣೆ ನೀಡುವಂತೆ ಒತ್ತಾಯಿಸಿದರು. ಕೆಲಸ ಕೇಳಿದರೆ ಅದ್ಯಕ್ಷೆ ಪತಿರಾಯ ಅವಾಶ್ಚವಾಗಿ ನಿಂದಿಸುತ್ತಿದ್ದಾರೆಂದು ಆರೋಪಿಸಿದರು.

ಅದೇ ವೇಳೆ ಮಾಜಿ ಶಾಸಕ ದೊಡ್ಡನಗೌಡ ಪಾಟೀಲ ಆಗಮಿಸಿ, ತಾ.ಪಂ. ಇಓ ಸಮಕ್ಷಮದಲ್ಲಿ ಇಂತಹ ಘಟನೆಗಳು ಮರುಕಳಿಸದಂತೆ ಕ್ರಮ ಕೈಗೊಳ್ಳಬೇಕೆಂದು ಸೂಚ್ಯವಾಗಿ ಹೇಳಿದರು.

Related posts

ಹಳೇ ಅಭ್ಯರ್ಥಿಗಳಿಗೆ ಹೊಸ ಸವಾಲು.ಗಂಗಾವತಿ ಕ್ಷೇತ್ರ ಸ್ಥಿತಿ–ಗತಿ

satyadarshana

ಸರ್ವರಿಗೂ ಸಮಾನವಾಗಿ ಅನ್ವಯವಾಗುವ ಹಕ್ಕುಗಳೆ ಮಾನವ ಹಕ್ಕುಗಳು .ಗುಗಲೊತ್ತರ್

satyadarshana

ನರೇಗಾ ಯೋಜನೆಯ ಕಾಮಗಾರಿಗಳ ಪರಿಶೀಲಿಸಿದ ರಾಜ್ಯ ತಂಡ* ರೋಣ ತಾಲೂಕಿನ ಅಬ್ಬಿಗೇರಿ ಹಾಗೂ ಸವಡಿ ಗ್ರಾಪಂ ಗಳಿಗೆ ಭೇಟಿ

satyadarshana

Leave a Comment