Satya Darshana
ಬಿಸಿ ಬಿಸಿ ಸುದ್ದಿ
ಜಿಲ್ಲೆಬಿಸಿ ಬಿಸಿ ಸುದ್ದಿ

ಹಾನಿಗೀಡಾದ ಮೆಣಸಿನಕಾಯಿ ಬೆಳೆ ಕೈಯಲ್ಲಿ ಹಿಡಿದುಕೊಂಡ ಪ್ರತಿಭಟನೆ- ಬೆಳೆ ವಿಮೆಗೆ ಆಗ್ರಹ

ಸತ್ಯ ದರ್ಶನ

ಧಾರವಾಡ: ಹಾನಿಗೀಡಾದ ಮೆಣಸಿನಕಾಯಿ ಬೆಳೆ ಕೈಯಲ್ಲಿ ಹಿಡಿದುಕೊಂಡ ಪ್ರತಿಭಟನೆ ಮಾಡಿದ ರೈತರು ಬೆಳೆ ವಿಮೆಗೆ ಆಗ್ರಹಿಸಿರುವ ಘಟನೆ ಧಾರವಾಡದಲ್ಲಿ ಕಂಡುಬಂದಿದೆ.

ಅಕಾಲಿಕ ಮಳೆಯಿಂದಾಗಿ ರೈತ ಬೆಳೆದ ವಿವಿಧ ಬೆಳೆಗಳು ಹಾನಿಗೀಡಾಗಿದ್ದು, ಸರ್ಕಾರ ಕೂಡಲೇ ಬೆಳೆವಿಮೆ ಬಿಡುಗಡೆ ಮಾಡಿ ರೈತರ ನೆರವಿಗೆ ಬರಬೇಕು ಎಂದು ಆಗ್ರಹಿಸಿ, ಧಾರವಾಡ ಜಿಲ್ಲೆಯ ನವಲಗುಂದ ತಾಲೂಕಿನ ನಾಯಕನೂರು ಗ್ರಾಮದ ರೈತರು ಧಾರವಾಡದಲ್ಲಿ ಪ್ರತಿಭಟನೆ ನಡೆಸಿದ್ದಾರೆ.

ಧಾರವಾಡದ ಜಿಲ್ಲಾಧಿಕಾರಿ ಕಚೇರಿ ಎದುರು ಹಾನಿಗೀಡಾದ ಮೆಣಸಿನಕಾಯಿ ಬೆಳೆ ಕೈಯಲ್ಲಿ ಹಿಡಿದುಕೊಂಡು ಪ್ರತಿಭಟನೆ ನಡೆಸಿದ ರೈತರು, ಅಕಾಲಿಕ ಮಳೆಗೆ ಮೆಣಸಿನಕಾಯಿ, ಹತ್ತಿ, ಕಡಲೆ, ಗೋಧಿ, ಜೋಳದ ಬೆಳೆಗಳು ಸಂಪೂರ್ಣ ನಾಶವಾಗಿದ್ದು, ಸರ್ಕಾರ ಕೂಡಲೇ ರೈತರ ನೆರವಿಗೆ ಬಂದು ಬೆಳೆವಿಮೆ ಬಿಡುಗಡೆ ಮಾಡಬೇಕು ಎಂದು ಆಗ್ರಹಿಸಿದರು

 

 

Related posts

ಬೇಸಿಗೆಯಲ್ಲಿ ಆರೋಗ್ಯದ ರಕ್ಷಣೆ: ಸಾರ್ವಜನಿಕರಿಗೆ ಇಲಾಖೆಯಿಂದ ಮುಂಜಾಗ್ರತ ಕ್ರಮ

satyadarshana

ಗದಗ ಜಿಲ್ಲೆಯ ಪ್ರಮುಖ ಸ್ಥಳಗಳಲ್ಲಿ ಕೋಟಿ ಕಂಠ ಗಾಯನ ಆಯೋಜಿಸಿ ಯಶಸ್ವಿಗೊಳಿಸಿ> ಜಿಲ್ಲಾಧಿಕಾರಿ ವೈಶಾಲಿ ಎಂ.ಎಲ್ಅಧಿಕಾರಿಗಳಿಗೆ ಕರೆ

satyadarshana

ಅಸ್ಪೃಶ್ಯತೆಗೆ ಕಡಿವಾಣ ಹಾಕುವುದು ನಮ್ಮ ಗುರಿ ಕೋಟ ಶ್ರೀನಿವಾಸ ಪೂಜಾರಿ,

satyadarshana

Leave a Comment