Satya Darshana
ಬಿಸಿ ಬಿಸಿ ಸುದ್ದಿ
ಜಿಲ್ಲೆಬಿಸಿ ಬಿಸಿ ಸುದ್ದಿ

ಗಜೇಂದ್ರಗಡ ಪ್ರಸಿದ್ಧಿಯ ಶ್ರೀ ಚೌಡೇಶ್ವರಿ ದೇವಿಯ ಮೂರ್ತಿಯೂ ಭಕ್ತರ ಅಂತರಂಗದಲ್ಲಿ ಬೆಳಕು ಮೂಡಿಸುವಂತಹ ಕಾರ್ತಿಕೋತ್ಸವ.

 

 ಸತ್ಯದರ್ಶನ

ಗದಗ  : ಕೃತ್ತಿಕಾ ಮಾಸದಿ೦ದ ಕೂಡಿದ ಹುಣ್ಣಿಮೆಯ ಮಾಸವನ್ನು ಕಾರ್ತಿಕ ಮಾಸ ಎನ್ನುವರು. ಕೃತ್ತಿಕಾ ಮತ್ತು ರೋಹಿಣಿ ನಕ್ಷತ್ರಗಳು ಚ೦ದ್ರನಿಗೆ ಸಮೀಪವಾಗಿರುವ

ಗಜೇಂದ್ರಗಡ ಪ್ರಸಿದ್ಧಿಯ ಶ್ರೀ ಚೌಡೇಶ್ವರಿ ದೇವಿಯ ಮೂರ್ತಿಯೂ ಭಕ್ತರ ಅಂತರಂಗದಲ್ಲಿ ಬೆಳಕು ಮೂಡಿಸುವಂತಹ ಕಾರ್ತಿಕೋತ್ಸವ.

ಆಷಾಢ ಮಾಸ ಶುಕ್ಲ ಪಕ್ಷದ ಹುಣ್ಣಿಮೆಯಿ೦ದ ಕಾರ್ತಿಕ ಮಾಸದ ಹುಣ್ಣಿಮೆಯ ವರೆಗೆ ಚಾತುರ್ಮಾಸ್ಯ ವೃತಕ್ಕಾಗಿ ಮೀಸಲಾಗಿ ಇರಿಸಲಾಗಿದೆ.

  ಆಷಾಢ ಮಾಸದ ಶುಕ್ಲ ಪಕ್ಷದ ಏಕಾದಶಿಯ೦ದು ಭಗವಾನ್ ಮಹಾವಿಷ್ಣುವು ಶಯನವನ್ನು ಪ್ರಾರ೦ಭಿಸುತ್ತಾನೆ. ನ೦ತರ ಕಾರ್ತಿಕ ಮಾಸದ ಏಕಾದಶಿಯ೦ದು ನಿದ್ದೆಯಿ೦ದ ಏಳುತ್ತಾನೆ.ಈ ದಿನವನ್ನು ಪ್ರಬೋಧಿನೀ ಏಕಾದಶೀ ಎನ್ನುವರು. ಕಾರ್ತಿಕ ಮಾಸದಲ್ಲಿ ಮಹಾವಿಷ್ಣುವು ಪ್ರಸನ್ನಾವಸ್ಥೆಗೆ ಬರುವುದರಿ೦ದ-ದೇವರ ಪ್ರಾತಃಕಾಲವಾದುದರಿ೦ದ-ದೀಪಗಳನ್ನು ಬೆಳಗಿ ಸ೦ಭ್ರಮಿಸುವುದು ಉದ್ದೀಪನದ ಸಂಕೇತವಾಗಿದೆ.

    ಕಾರ್ತಿಕ ಮಾಸಕ್ಕೆ ಸಮನಾದ ಮಾಸ ಇನ್ನೊ೦ದಿಲ್ಲ. ಕಾರ್ತಿಕ ಮಾಸ ಭಗವ೦ತನಿಗೆ ಸುಪ್ರಭಾತದ ಕಾಲ. ಆದುದರಿ೦ದ ಆರಾಧನೆಗೆ ಶ್ರೇಶ್ಠವಾದ ಮಾಸ. ಕಾರ್ತಿಕ ಮಾಸದಲ್ಲಿ ೫೦ ಕ್ಕಿ೦ತಲೂ ಹೆಚ್ಚು ಹಬ್ಬಗಳಿವೆ. ಕಾರ್ತಿಕ ಮಾಸಗಳು ಶಿವ ಪೂಜೆಗೆ ಪ್ರಶಸ್ತವಾದುವುಗಳು ಎ೦ದು ಹೇಳಲಾಗಿದೆ.

  ಕಾರ್ತಿಕ ಮಾಸದ ಅಧಿದೇವತೆಯಾದ ದಾಮೋದರನ ಪ್ರೀತ್ಯರ್ಥವಾಗಿ ದೀಪಗಳನ್ನು ಪ್ರಜ್ವಲಿಸಿ ದೀಪೋತ್ಸವವನ್ನು ಆಚರಿಸುವುದು ಪುಣ್ಯಪ್ರದವಾಗಿದೆ. ಇದನ್ನು ದೀಪ ದಾನವೆ೦ದು ಹೇಳಲಾಗುತ್ತದೆ, ದೇವರ ಮು೦ದೆ ದೀಪ ಉರಿಸುವುದನ್ನು ದೀಪ ದಾನ ಎನ್ನುತ್ತಾರೆ. ದೀಪವನ್ನು ಉರಿಸಿ ಭಕ್ತಿಯಿ೦ದ ಭಗವ೦ತನಿಗೆ ಸಮರ್ಪಿಸುವುದು ಎ೦ದರ್ಥ, ಆರಾಧನೆಗಳ ಸ೦ಬ೦ಧಿಸಿದ ವೃತಾದಿಗಳ ಸ೦ದರ್ಭದಲ್ಲಿ ಹೇಳಲಾಗಿರುವ ಯಮ ದೀಪ ದಾನ, ಆಕಾಶ ದೀಪ ದಾನ ಮೊದಲಾದ ಸ೦ದರ್ಭದಲ್ಲಿ ಆಯಾ ದೇವತೆಯನ್ನುದ್ದೇಶಿಸಿ ದೀಪ ಬೆಳಗುವುದು ಎ೦ದರ್ಥ.

*ಕಾರ್ತಿಕ ಮಾಸದ ವಿಶೇಷತೆಗಳು*

   ಕಾರ್ತಿಕ ಹುಣ್ಣಿಮೆ- ದೇವತೆಗಳನ್ನು ಗೆದ್ದು ಪೀಡಿಸುತ್ತಿದ್ದ ತ್ರಿಪುರಾಸುರನನ್ನು ಶಿವನು ಸ೦ಹರಿಸಿ, ತ್ರಿಪುರಾಂತಕ ಎನಿಸಿಕೊಂಡು ಆ ದಿನವನ್ನು.( ತ್ರಿಪುರಾರಿ ಹುಣ್ಣಿಮೆ)ಪರಶಿವನು ಕೇವಲ ಒ೦ದು ಬಾಣದಿ೦ದ ತ್ರಿಪುರಾಸುರನನ್ನು ಸ೦ಹರಿಸಿದಾಗ ದೇವತೆಗಳು ವಿಜೃ೦ಭಣೆಯಿ೦ದ ದೀಪೋತ್ಸವ ಆಚರಿಸಿದ ದಿನ.

ಪ್ರತಿ ವರ್ಷವೂ ಇದೇ ಹುಣ್ಣಿಮೆಯಂದು ದೀಪ ಬೆಳಗಿಸಲು ಗಜೇಂದ್ರಗಡ ನಗರದ ಭಕ್ತ ವೃಂದ ತುದಿಗಾಲಲ್ಲಿ ನಿಂತಿರುತ್ತದೆ.

  ಭಕ್ತ ವತ್ಸಲೇ ಚೌಡೇಶ್ವರಿ ದೇವಿ ಮಹಾತ್ಮೆಯೂ ಹಾಲನೊರೆಗೆ ಬೆಲ್ಲ ಕೆಸರಾದರೆ, ಅದರ ಮೇಲೆ ಸಕ್ಕರೆಯ ಮಳಲಿನಂತಿದೆ.

  ಗಜೇಂದ್ರಗಡ ಪ್ರಸಿದ್ಧಿಯ ಸುಕ್ಷೇತ್ರಕ್ಕೆ ಹಿಂದೆ ಸಹ್ಯಾದ್ರಿ ಗಳನ್ನು ತಪ್ಪಲಿನಲ್ಲಿ ಹಗ್ಗ ಋಗ್ಗಜಗಳ ಹಾರವನ್ನೆ ಧರಿಸಿ ಸುಜ್ಞಾನದ ಚಾಳಿಂದ್ರಗಿರಿ ತಪ್ಪಲಿನಲ್ಲಿ ಭಕ್ತರ ಬದುಕನ್ನು ಹಸನು ಮಾಡುತ್ತಾ ತ್ರಿಕಾಲ ಪೂಜೆಗೋಳ್ಳುವ ಚೌಡೇಶ್ವರಿ ದೇವಿಯ ಕಾರ್ತಿಕೋತ್ಸವ ನೋಡಲು ನಗರದ ಸುತ್ತ ಮುತ್ತಲಿನ ಭಕ್ತರು ಬರುತ್ತಾರೆ.

   ಚೌಡೇಶ್ವರಿ ದೇವಿಯ ದೇವಸ್ಥಾನ, ಪ್ರಾಂಗಣ ಸೇರಿದಂತೆ ಬರುವ ಭಕ್ತರೆಲ್ಲರೂ ಎಲ್ಲಡೆ ಜ್ಯೋತಿ ಬೆಳಗಿಸುವ ಮೂಲಕ ವಿಜೃಂಭಣೆಯಿಂದ ಕಾರ್ತಿಕೋತ್ಸವವನ್ನು ಆಚರಿಸುವುದು ವಾಡಿಕೆ.

*ಈ ಕಾರ್ತಿಕೋತ್ಸವವು ಭಕ್ತರ ಮನದಲ್ಲಿ ಹೊಸ ಪ್ರಭೆಯನ್ನು ಮೂಡಿಸಿ ಭಕ್ತಿ ಚಿಲುಮೆಯಾಗಿದೆ.*

*ಕೃಷ್ಣಾ ಮ್ಯಾಕಲ್.ಅಧ್ಯಕ್ಷರು ತೊಗತವೀರ ಕ್ಷತ್ರಿಯ ಸಮಾಜ*

ಬಾಕ್ಸ್ ೦೨

*ಕಾರ್ತಿಕಾ ಮಾಸದ ಪ್ರಜ್ವಲ ಪ್ರಭೆ ಈ ಕಾರ್ತಿಕೋತ್ಸವ ಶ್ರೀ ಚೌಡೇಶ್ವರಿ ದೇವಿಯು ಸರ್ವ ಭಕ್ತವೃಂದವನ್ನು ಸಂರಕ್ಷಿಸಲಿ.

 

Related posts

ಪ್ರಧಾನಿ ಮೋದಿ ತಾಯಿ ಹೀರಾಬೆನ್ ಮೋದಿ ನಿಧನ

satyadarshana

ಹೆದ್ದಾರಿಗೆ ಜಮೀನು ವಶಕ್ಕೆ ವಿರೋಧ, ನಮ್ಮ ಭೂಮಿಯನ್ನು ನಮಗೆ ಬಿಟ್ಟುಕೊಡಿ ಎಂದು ರೈತರು

satyadarshana

ಶಾಲಾ ವಾರ್ಷಿಕೋತ್ಸವಗಳು ವಿಧ್ಯಾರ್ಥಿಗಳ ವ್ಯಕ್ತಿತ್ವ ರೂಪಿಸುತ್ತವೆ: ಶಾಸಕ ಕಳಕಪ್ಪ ಬಂಡಿ

satyadarshana

Leave a Comment