Satya Darshana
ಬಿಸಿ ಬಿಸಿ ಸುದ್ದಿ
ಬಿಸಿ ಬಿಸಿ ಸುದ್ದಿರಾಜ್ಯ

ಬೆಳ್ಳಂಬೆಳಗ್ಗೆ ಭ್ರಷ್ಟ ಅಧಿಕಾರಿಗಳಿಗೆ ಎಸಿಬಿ -ಭ್ರಷ್ಟಾಚರ ನಿಗ್ರಹ ದಳ.ಮೀರಿದ ಸಂಪತ್ತು ಇರೋ ಆರೋಪಗಳು ಕೇಳಿ ಬಂದ ಹಿನ್ನೆಲೆ ದಾಳಿ

ಸತ್ಯದರ್ಶನ

 ಗದಗ ಬೆಳ್ಳಂಬೆಳಗ್ಗೆ ಭ್ರಷ್ಟ ಅಧಿಕಾರಿಗಳಿಗೆ ಎಸಿಬಿ ( ACB-ಭ್ರಷ್ಟಾಚರ ನಿಗ್ರಹ ದಳ) ಶಾಕ್ ನೀಡಿದೆ. ರಾಜ್ಯದ 60 ಕಡೆ 100 ಅಧಿಕಾರಿಗಳು ಮತ್ತು 300 ಜನ ಸಿಬ್ಬಂದಿಯ ನೇತೃತ್ವದಲ್ಲಿ ದಾಳಿ ನಡೆದಿದೆ. ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ಕಲಬುರಗಿ, ಬೆಳಗಾವಿ, ಬಳ್ಳಾರಿ ಮತ್ತು ಗದಗ ಸೇರಿದಂತೆ 8 ಜಿಲ್ಲೆಗಳಲ್ಲಿ ಕಡೆ ದಾಳಿ ನಡೆದಿದೆ, ದಾಳಿಗೊಳಗಾದ ಅಧಿಕಾರಿಗಳ ಮೇಲೆ ಅಧಾಯಕ್ಕೂ ಮೀರಿದ ಸಂಪತ್ತು ಇರೋ ಆರೋಪಗಳು ಕೇಳಿ ಬಂದ ಹಿನ್ನೆಲೆ ದಾಳಿ ನಡೆದಿದೆ.

ಬೆಂಗಳೂರು ಗ್ರಾಮಾಂತರ ಜಿಲ್ಲೆ ನೆಲಮಂಗಲ ನಗರದಲ್ಲಿರುವ ಕೆಎಎಸ್ ಅಧಿಕಾರಿ ಎಲ್ ಸಿ ನಾಗರಾಜು ಮನೆಯಲ್ಲಿ ನಗದು ಹಣ ಪತ್ತೆಯಾಗಿದೆ. ಎರಡು ಸಾವಿರ ಹಾಗೂ 500 ಮುಖಬೆಲೆಯ ನೋಟುಗಳು ಪತ್ತೆಯಾಗಿದ್ದು, ಎಸಿಬಿ ಅಧಿಕಾರಿಗಳು ಎಣಿಕೆ ಮಾಡುತ್ತಿದ್ದಾರೆ. ಮನೆಯಲ್ಲಿ ಚಿನ್ನಾಭರಣ ಮತ್ತು ಬೆಳ್ಳಿ ವಸ್ತುಗಳು ಲಭ್ಯವಾಗಿರುವ ಬಗ್ಗೆ ಮಾಹಿತಿ ತಿಳಿದು ಬಂದಿದೆ.

ACB ಅಧಿಕಾರಿಗಳಿಂದ BDA ಭ್ರಷ್ಟರ ಬೇಟೆ: ಬೆಂಗಳೂರಿನ ಈ 4 ಕಚೇರಿಗಳೇ ಇಂದಿನ ಟಾರ್ಗೆಟ್!

1.90 ಲಕ್ಷ ರೂಪಾಯಿಗೆ ಮಾರಾಟವಾಯ್ತು ಮೀನು? ಈ ಮೀನಿಗೆ ಯಾಕಿಷ್ಟು ಬೆಲೆ? ಏನಿದರ ವಿಶೇಷತೆ?

ಕಲಬುರಗಿ PWD ಅಧಿಕಾರಿ ಜೆಇ ಶಾಂತಗೌಡ ಬಿರಾದಾರ ಮನೆಗಳ ಮೇಲೆ ಎಸಿಬಿ ದಾಳಿ ನಡೆದಿದ್ದು ಕೋಟಿಗೂ ಅಧಿಕ ಆಸ್ತಿ ಪತ್ತೆಯಾಗಿದೆ ಎಂದು ತಿಳಿದು ಬಂದಿದೆ. ಕಲಬುರಗಿ ಗುಬ್ಬಿ ಕಾಲೋನಿಯಲ್ಲಿ ಮೂರಂತಸ್ತಿನ ಭವ್ಯ ಬಂಗಲೆ, ವಿವಿ ರಸ್ತೆಯಲ್ಲಿ ಎರಡು ನಿವೇಶನ, ಯಡ್ರಾಮಿ ತಾಲೂಕಿನ ಹಂಗರಗಾ ಗ್ರಾಮದಲ್ಲಿ 40 ಎಕರೆ ಜಮೀನುಮ ಹಂಗರಗಾ ಗ್ರಾಮದಲ್ಲಿ ಮೂರು ಮನೆಗಳು ಸೇರಿ ಕೋಟಿ ಕೋಟಿ ಆಸ್ತಿ ಮತ್ತು ಬೆಂಗಳೂರಿನಲ್ಲಿ ಆಸ್ತಿ ಹೊಂದಿರುವ ಬಗ್ಗೆ ಮಾಹಿತಿ ಲಭ್ಯವಾಗಿದೆ. ಮನೆಯಲ್ಲಿ ಬೆಲೆ ಬಾಳುವ ಎರಡು ಕಾರ್ ಮತ್ತು ಎರಡು ಬೈಕ್ ಸಹ ಇವೆ..ಕೆ ಎಸ್ ಲಿಂಗೇಗೌಡ, ಇಇ ಸ್ಮಾರ್ಟ್ ಸಿಟಿ ಮಂಗಳೂರು.

1.ಕೆ ಎಸ್ ಲಿಂಗೇಗೌಡ, ಇಇ ಸ್ಮಾರ್ಟ್ ಸಿಟಿ ಮಂಗಳೂರು

2.ಶ್ರೀನಿವಾಸ್. ಕೆ,ಎಕ್ಸಿಕ್ಯುಟಿವ್ ಇಂಜಿನಿಯರ್, ಹೆಚ್ ಎಲ್ ಬಿಸಿ ಮಂಡ್ಯ

3 .ಲಕ್ಷ್ಮೀನರಸಿಂಹಯ್ಯ, ರೆವಿನ್ಯೂ ಇನ್ಸ್‌ಪೆಕ್ಟರ್ ದೊಡ್ಡಬಳ್ಳಾಪುರ.

4.ವಾಸುದೇವ, ಮಾಜಿ ಪ್ರಾಜೆಕ್ಟ್ ಮ್ಯಾನೇಜರ್, ನಿರ್ಮಿತಿ ಕೇಂದ್ರ ಬೆಂಗಳೂರು.

5.ಬಿ. ಕೃಷ್ಣಾ ರೆಡ್ಡಿ, ಜನರಲ್ ಮ್ಯಾನೇಜರ್, ನಂದಿನಿ ಡೈರಿ ಬೆಂಗಳೂರು.

6.ಟಿ ಎಸ್ ರುದ್ರೇಶಪ್ಪ, ಜಂಟಿ ನಿರ್ದೇಶಕರು, ಅಗ್ರಿಕಲ್ಚರ್ ಡಿಪಾರ್ಟ್ಮೆಂಟ್ ಗದಗ.

7.ಎ ಕೆ ಮಾಸ್ತಿ, ಕೋ ಆಪರೇಟಿವ್ ಡೆವಲಪ್ಮೆಂಟ್ ಆಫೀಸರ್, ಸವದತ್ತಿ ಬೈಲಹೊಂಗಲ.

8.ಸದಾಶಿವ ಮಾರಲಿಂಗಣ್ಣನವರ್, ಸೀನಿಯರ್ ಮೋಟಾರ್ ಇನ್ಸ್‌ಪೆಕ್ಟರ್ ಗೋಕಾಕ್.

9.ನತಾಜಿ ಹೀರಾಜಿ ಪಾಟೀಲ್, ಗ್ರೂಪ್ ಸಿ ಹೆಸ್ಕಾಂ ಬೆಳಗಾವಿ.

10.ಕೆ ಎಸ್ ಶಿವಾನಂದ, ನಿವೃತ್ತ ಸಬ್ ರಿಜಿಸ್ಟರ್ ಬಳ್ಳಾರಿ.

11.ರಾಜಶೇಖರ್, ಪಿಸಿಯೋಥೆರಾಪಿಸ್ಟ್, ಯಲಹಂಕ ಸರ್ಕಾರಿ ಅಸ್ಪತ್ರೆ.

12.ಮಾಯಣ್ಣ, ಪ್ರಥಮ ದರ್ಜೆ ಕ್ಲರ್ಕ್, ಬಿಬಿಎಂಪಿ ಮೇಜರ್ ರೋಡ್ಸ್ ಆಂಡ್ ಇನ್ಪ್ರಾಸ್ಟ್ರಕ್ಚರ್ ಬೆಂಗಳೂರು.

13.ಎಲ್ ಸಿ ನಾಗರಾಜ್, ಕರ್ನಾಟಕ ಅಡ್ಮಿನಿಸ್ಟ್ರೇಟಿವ್ ಸರ್ವಿಸ್ ಸಕಾಲ ಬೆಂಗಳೂರು

14.ಜಿ ವಿ ಗಿರಿ, ಗ್ರೂಪ್ ಡಿ ಬಿಬಿಎಂಪಿ, ಯಶವಂತಪುರ ಬೆಂಗಳೂರು

15.ಎಸ್ ಎಂ ಬಿರಾದಾರ್, ಜೂನಿಯರ್ ಇಂಜಿನಿಯರ್ ಪಿಡ್ಬ್ಯೂಡಿ ಜೇವರ್ಗಿ.

ನಗದು ಹಣ, ಚಿನ್ನಾಭರಣ, ಬೆಳ್ಳಿ ವಸ್ತುಗಳು ಪತ್ತೆ

 

Related posts

ಇಂಡಿಯಾ ಗೇಟ್ ಬಳಿ ನೇತಾಜಿ ಸುಭಾಷ್ ಚಂದ್ರ ಬೋಸ್ ಪ್ರತಿಮೆ ಅನಾವರಣಗೊಳಿಸಿದ ಪ್ರಧಾನಿ ಮೋದಿ…

satyadarshana

ರೈತರಿಗೆ ಸಬ್ಸಿಡಿ ರಸಗೊಬ್ಬರ ಖರೀದಿಗೆ ‘ಎಫ್.ಐ.ಡಿ’ ಕಡ್ಡಾಯ: ನಿಯಮ ಉಲ್ಲಂಘಿಸಿದರೆ ಜೈಲು ಶಿಕ್ಷೆ

satyadarshana

2023ರ ಚುನಾವಣೆಯಲ್ಲಿ ಪಕ್ಷ ಅಧಿಕಾರಕ್ಕೆ ಬಂದರೆ ದಲಿತರಿಗೆ ಸಿಎಂ ಸ್ಥಾನ ಒಲಿಯಬಹುದೆಂಬ ಕನಸು ಮೂಡಿದೆಯಂತೆ..?

satyadarshana

Leave a Comment