ಸತ್ಯ ದರ್ಶನ
ಗದಗ. :ಪೊಲೀಸ್ ಇಲಾಖೆಯಿಂದ ಶ್ರೀಗಳಿಗೆ ಸರ್ಕಾರಿ ಗೌರವ ಸಲ್ಲಿಕೆ ಮಾಡಲಾಗಿದೆ. ಗದಗ ಜಿಲ್ಲೆಯ ಹಾಲಕೆರೆ ಮಠದಲ್ಲಿ ಶ್ರೀಗಳ ಪಾರ್ಥಿವ ಶರೀರಕ್ಕೆ ರಾಷ್ಟ್ರಧ್ವಜ ಹೊದಿಸಿ ಇಂದು (ನವೆಂಬರ್ 23) ಗೌರವ ಸಮರ್ಪಣೆ ಮಾಡಲಾಗಿದೆ. ಹಾಲಕೆರೆ ರಥ ಬೀದಿಯಲ್ಲಿ ಅಂತಿಮ ಯಾತ್ರೆ ಮೆರವಣಿಗೆ ಸಾಗಿದೆ. ನಂತರ ಕ್ರೀಯಾ ಸಮಾಧಿಯಲ್ಲಿ ವೀರಶೈವ ಲಿಂಗಾಯತ ವಿಧಿವಿಧಾನಗಳ ಮೂಲಕ ಅಂತ್ಯಕ್ರಿಯೆ ನೆರವೇರಿಸಲಾಗಿದೆ.
ಚಿಕ್ಕವರಿರುವಾಗಲೇ ತಾಯಿಯನ್ನು ಕಳೆದುಕೊಂಡ ಶ್ರೀಗಳು, ಬೈಲಹೊಂಗಲದ ಕುಂಬಾರಗೇರಿ ಮಠದ ಶಿವಬಸಯ್ಯನವರ ಆಶ್ರಯದಲ್ಲಿ ಪ್ರಾಥಮಿಕ ವಿದ್ಯಾಭ್ಯಾಸ ಮುಗಿಸಿದ್ದರು. ಕೆಲವು ದಿನ ಹಾಲಕೆರೆ ಅನ್ನದಾನೇಶ್ವರ ಮಠದ ಶಾಲೆಯಲ್ಲೂ ಓದಿದ್ದರು. ಮುಂದೆ ಸಂಗನಬಸವ ಶ್ರೀಗಳನ್ನು ಜಮಖಂಡಿಯ ವಿರಕ್ತ ಮಠಕ್ಕೆ ನೇಮಿಸಿ, ಮುಂದಿನ ಅಭ್ಯಾಸಕ್ಕಾಗಿ ಶಿವಯೋಗ ಮಂದಿರಕ್ಕೆ ಸೇರಿಸಲಾಯಿತು.
ಹನ್ನೆರಡು ವರ್ಷ ಶಿವಯೋಗಮಂದಿರದಲ್ಲಿದ್ದು ಶಿವಯೋಗ ಸಾಧನೆಗೆ ತಮ್ಮನ್ನು ಪರಿಪೂರ್ಣ ಒಡ್ಡಿಕೊಂಡರು. ಕನ್ನಡ, ಇಂಗ್ಲಿಷ್, ಸಂಸ್ಕೃತ ಮತ್ತು ಹಿಂದಿ ಭಾಷೆಗಳ ಅಭ್ಯಾಸದ ಜತೆಗೆ ವಚನಶಾಸ್ತ್ರ, ತತ್ವಶಾಸ್ತ್ರ, ಯೋಗಶಾಸ್ತ್ರದಂತಹ ಆಧ್ಯಾತ್ಮಿಕ ವಿಷಯಗಳಲ್ಲಿಯೂ ಅಧ್ಯಯನ ನಡೆಸಿದರು. ಮುಂದೆ ಹೆಚ್ಚಿನ ಅಭ್ಯಾಸಕ್ಕಾಗಿ ಕಾಶಿಗೂ ತೆರಳಿ ದರ್ಶನ ಶಾಸ್ತ್ರ, ವ್ಯಾಕರಣ ಶಾಸ್ತ್ರಗಳನ್ನು ಅಭ್ಯಸಿಸಿ, ಕಾಶೀ ವಿವಿಯಿಂದ “ಕಾವ್ಯ ತೀರ್ಥ’, “ವೇದಾಂತಾಚಾರ್ಯ’, “ಯೋಗ ತಂತ್ರಾಚಾರ್ಯ’ ಪದವಿಗಳನ್ನು ಪ್ರಥಮ ದರ್ಜೆಯಲ್ಲಿ ಪಡೆದರು. ಹಿಂದಿಯಲ್ಲಿಯೂ ಎಂ ಎ
ಸಂಗನಬಸವ ಸ್ವಾಮೀಜಿ’ಯಾಗಿ 1972ರಲ್ಲಿ ಹೊಸಪೇಟೆಯ ಕೊಟ್ಟೂರುಸ್ವಾಮಿ ಸಂಸ್ಥಾನ ಮಠದ ಪೀಠಾಧಿಪತಿಯಾಗಿ ಹಾಗೂ 1987ರಲ್ಲಿ ‘ಅಭಿನವ ಅನ್ನದಾನ ಸ್ವಾಮೀಜಿ’ ಎಂಬ ಹೆಸರಿನಿಂದ ಗದಗ ಜಿಲ್ಲೆಯ ಹಾಲಕೆರೆಯ ಅನ್ನದಾನೇಶ್ವರ ಮಠದ 12ನೇ ಪೀಠಾಧಿಪತಿಯಾಗಿ ನೇಮಕಗೊಂಡಿದ್ದರು.
ಅಲ್ಲಿಂದ ವಾಪಸ್ ಬಂದ ಬಳಿಕ ಹಂಪಿ, ಹೊಸಪೇಟೆ, ಬಳ್ಳಾರಿಗಳಲ್ಲಿ ಪ್ರಮುಖ ಶಾಖೆಗಳನ್ನು ಹೊಂದಿದ್ದ ಕೊಟ್ಟೂರು ಸ್ವಾಮಿಗಳ ಸಂಸ್ಥಾನಮಠದ ಜವಾಬ್ದಾರಿ ವಹಿಸಿಕೊಂಡರು. 1972, ಜೂ.1ರಂದು 19ನೇ ಪೀಠಾಧಿ ಕಾರಿಗಳಾಗಿ ಅ ಧಿಕಾರ ಸ್ವೀಕರಿಸಿದರು. ಇದಾದ ಬಳಿಕ ಗ್ರಾಮೀಣ ಪ್ರದೇಶದಲ್ಲಿ ಶೈಕ್ಷಣಿಕ ಕ್ರಾಂತಿ ಮಾಡಿದ್ದ ಹಾಲಕೆರೆಯ ಅನ್ನದಾನೀಶ್ವರ ಸಂಸ್ಥಾನಮಠದ ಪೀಠಾಧಿ ಕಾರಿಗಳಾಗಿದ್ದ ಶ್ರೀ ಗುರು ಅನ್ನದಾನೀಶ್ವರ ಮಹಾಸ್ವಾಮೀಜಿ ಲಿಂಗೈಕ್ಯ ಅನಂತರ ಹಾಲಕೆರೆಯ ಸಂಸ್ಥಾನಮಠದ ಜವಾಬ್ದಾರಿಯನ್ನೂ ವಹಿಸಿಕೊಂಡರು.
ದಣಿವರಿಯದ ಕಾಯಕಯೋಗಿ: 1987, ಆ.27ರಂದು ಹಾಲಕೆರೆ ಸಂಸ್ಥಾನ ಮಠದ ಅ ಧಿಕಾರ ವಹಿಸಿಕೊಂಡ ಡಾ|ಅಭಿನವ ಅನ್ನದಾನ ಸ್ವಾಮೀಜಿ, ಗದಗ, ಬಳ್ಳಾರಿ ಹಾಗೂ ಶಿವಯೋಗ ಮಂದಿರವನ್ನು ಧಾರ್ಮಿಕ ಹಾಗೂ ಶೈಕ್ಷಣಿಕ ನಾಡನ್ನಾಗಿ ರೂಪಿಸಿದರು. ಹಂಪಿಯ ಮಹಾಕವಿ ಹರಿಹರ ಸ್ಮಾರಕ, ಹೇಮಕೂಟದ ಸಂಶೋಧನಾ ಸಂಸ್ಥೆ ಕಟ್ಟಿ ಬೆಳೆಸಿದರು. “ಸುಕುಮಾರ’ ಮಾಸಿಕ ಪತ್ರಿಕೆ ಮುನ್ನಡೆಸಿದರು, ನೂರಾರು ಶಾಲಾ-ಕಾಲೇಜು ಆರಂಭಿಸಿ ಬಡ ರೈತ ಮಕ್ಕಳಿಗೆ ನೆರವಾದರು. ಸ್ತ್ರೀ ಸಮಾನತೆಗೆ ಆದ್ಯತೆ ನೀಡಿದರು, ಸಾವಯವ ಕೃಷಿ ಅಭಿವೃದ್ಧಿ, ಗೋ ಸಂರಕ್ಷಣೆಗೆ ಶ್ರಮಿಸಿದರು. ಗೋಡಂಬಿ, ದಾಲಿcನ್ನಿ, ಮಹಾಘನಿಯಂತಹ ಬೆಲೆ ಬಾಳುವ ಸಸಿಗಳನ್ನು ನೆಟ್ಟು ಪೋಷಿಸಿದರು. ಜನಜಾಗೃತಿ, ಧರ್ಮ ಸಂಸ್ಕಾರ, ಉಳವಿಗೆ 261 ಚಕ್ಕಡಿಯಾತ್ರೆ ಆರಂಭಿಸಿದರು. ಲಿಂ|ಗುರು ಅನ್ನದಾನ ಶ್ರೀಗಳ ಪ್ರತಿಯ ಸಂಕೇತವಾಗಿ 2005ರಲ್ಲಿ 180 ಕೆಜಿ ಬೆಳ್ಳಿಯಿಂದ 16 ಅಡಿ ಎತ್ತರದ ಬೆಳ್ಳಿ ರಥ ನಿರ್ಮಿಸಿ ಸಮಾಜಮುಖೀಯಾದ ಶ್ರೀಗಳು, ಎರಡು ಮಹಾಸಂಸ್ಥಾನಗಳ ಪ್ರಗತಿಗೆ ತಮ್ಮನ್ನೇ ತಾವು ಅರ್ಪಿಸಿಕೊಂಡು ದಣಿವರಿಯದೆ ದುಡಿದರು.
ಶತಮಾನದ ಇತಿಹಾಸ ಹೊಂದಿರುವ ವೀರಶೈವರ ಧಾರ್ಮಿಕ ಗುರುಕುಲ ಎಂದೇ ಪರಿಗಣಿತವಾದ ಬಾದಾಮಿ ತಾಲೂಕಿನ ಶಿವಯೋಗ ಮಂದಿರದಲ್ಲಿ ಬದಲಾವಣೆಯ ಕ್ರಾಂತಿಯನ್ನೇ ಮಾಡಿದರು. ವಟುಗಳಿಗೆ ಎಲ್ಲ ರೀತಿಯ ಶಿಕ್ಷಣ, ಬಸವ ತಣ್ತೀ ಬೋಧಿಸಿ ಆಧ್ಯಾತ್ಮಿಕತೆಗೆ ಹೊಸ ರೂಪ ನೀಡಿದರು. ಸ್ವಧರ್ಮ ನಿಷ್ಠೆ, ಪರಧರ್ಮ ಸಹಿಷ್ಣುತೆ ಜತೆಗೆ ರಾಷ್ಟ್ರಧರ್ಮದ ಅರಿವು ಮೂಡಿಸಿದರು. ಉತ್ತರ ಕರ್ನಾಟಕ ಮಾತ್ರವಲ್ಲ ರಾಜ್ಯಾದ್ಯಂತ ಇರುವ ಪ್ರಮುಖ ಲಿಂಗಾಯತ ಮಠಗಳಿಗೆ ಶ್ರೀಗಳನ್ನು ಸೃಷ್ಟಿಸಿ ಜ್ಞಾನ ಜ್ಯೋತಿ ಬೆಳಗಿದರು.
ಕ್ಷಣ ಕ್ಷಣಕ್ಕೂ ಕುಮಾರಯೋಗಿ ಧ್ಯಾನ ಸಂಗನಬಸವ ಶ್ರೀಗಳು ವಕೀಲನಾಗುವ ಕನಸು ಕಂಡಿದ್ದರು. ಆದರೆ ಕುಮಾರ ಶಿವಯೋಗಿಗಳ ದಿವ್ಯ ಪುರಾಣ, ಶ್ರೀಗಳ ಪವಿತ್ರ ಜೀವನವನ್ನು ಒಳಗೊಂಡ ಕೃತಿಗಳನ್ನು ಓದಿ ಸ್ವಾಮಿತ್ವದ ದೀಕ್ಷೆ ತೊಟ್ಟರು. ಅವರ ತತ್ವಾದರ್ಶಗಳನ್ನು ಅಳವಡಿಸಿ ಕೊಂಡು ಪ್ರತಿದಿನ ಕುಮಾರೇಶನ ನೆನೆದು ಪ್ರಸಾದ ತೆಗೆದುಕೊಂಡು ಜೀವಿಸುತ್ತಿದ್ದರು.
