Satya Darshana
ಬಿಸಿ ಬಿಸಿ ಸುದ್ದಿ
ದೇಶ-ವಿದೇಶಬಿಸಿ ಬಿಸಿ ಸುದ್ದಿರಾಜ್ಯ

ರಾಜ್ಯದ ವಿಧಾನಪರಿಷತ್‍ನ 20 ಕ್ಷೇತ್ರಗಳ 25 ಸ್ಥಾನಗಳಿಗೆ ಚುನಾವಣಾ ವೇಳಾಪಟ್ಟಿಯನ್ನು ಕೇಂದ್ರ ಚುನಾವಣಾ ಆಯೋಗ ಘೋಷಿಸಿದ್ದು, ಡಿಸೆಂಬರ್ 10ರಂದು ಮತದಾನ

ಸತ್ಯದರ್ಶನ

ನವದೆಹಲಿ .9.ನ- ರಾಜ್ಯದ ವಿಧಾನಪರಿಷತ್‍ನ 20 ಕ್ಷೇತ್ರಗಳ 25 ಸ್ಥಾನಗಳಿಗೆ ಚುನಾವಣಾ ವೇಳಾಪಟ್ಟಿಯನ್ನು ಕೇಂದ್ರ ಚುನಾವಣಾ ಆಯೋಗ ಘೋಷಿಸಿದ್ದು, ಡಿಸೆಂಬರ್ 10ರಂದು ಮತದಾನ ನಡೆಯಲಿದೆ. ರಾಜಕೀಯ ಪಕ್ಷಗಳ ಜಿದ್ದಾಜಿದ್ದಿನ ಕಣವಾಗಿರುವ ಸ್ಥಳೀಯ ಸಂಸ್ಥೆಗಳ ಈ ಕ್ಷೇತ್ರಗಳಿಗೆ ಚುನಾವಣೆ ನಡೆಸಲು ನ.16ರಂದು ಅಧಿಸೂಚನೆ ಜಾರಿಯಾಗಲಿದೆ. ನ.23ರವರೆಗೆ ನಾಮಪತ್ರ ಸಲ್ಲಿಸಲು ಅವಕಾಶವಿದ್ದು, 24ರಂದು ನಾಮಪತ್ರ ಪರಿಶೀಲನೆಯಾಗಲಿದೆ.

ಚುನಾವಣೆಯಲ್ಲಿ ಸ್ರ್ಪಧಿಸಲು ನಿರಾಸಕ್ತಿ ಹೊಂದಿರುವವರು ನ.26ರೊಳಗೆ ನಾಮಪತ್ರವನ್ನು ಹಿಂಪಡೆದುಕೊಳ್ಳಬಹುದು. ಅಗತ್ಯವಿರುವ ಕ್ಷೇತ್ರಗಳಿಗೆ ಡಿ.10ರಂದು ಶುಕ್ರವಾರ ಬೆಳಗ್ಗೆ 8ರಿಂದ ಸಂಜೆ 4ರವರೆಗೂ ಮತದಾನ ನಡೆಯಲಿದೆ. ಡಿ.14ರಂದು ಮತ ಎಣಿಕೆಯಾಗಿ ಫಲಿತಾಂಶ ಘೋಷಣೆಯಾಗಲಿದೆ. ಡಿ.16ರಂದು ಚುನಾವಣೆ ಪ್ರಕ್ರಿಯೆಗಳು ಮುಕ್ತಾಯಗೊಳ್ಳಲಿವೆ.

ಕರ್ನಾಟಕ ವಿಧಾನಪರಿಷತ್‍ನಲ್ಲಿ ಸ್ಥಳೀಯ ಸಂಸ್ಥೆಗಳಿಂದ 25 ಮಂದಿ ಸದಸ್ಯರು ಆಯ್ಕೆಯಾಗುತ್ತಾರೆ. ಅವುಗಳಲ್ಲಿ 20 ಕ್ಷೇತ್ರಗಳ ಪೈಕಿ 25 ಸ್ಥಾನಗಳ ಸದಸ್ಯರು 2022ರ ಜನವರಿ 5ಕ್ಕೆ ನಿವೃತ್ತರಾಗಲಿದ್ದಾರೆ. ಈ ಸ್ಥಾನಗಳಿಗೆ ಹೊಸ ಸದಸ್ಯರನ್ನು ಆಯ್ಕೆ ಮಾಡಲು ದ್ವೈವಾರ್ಷಿಕ ಚುನಾವಣಾ ವೇಳಾಪಟ್ಟಿಯನ್ನು ಕೇಂದ್ರ ಚುನಾವಣಾ ಆಯೋಗ ಘೋಷಣೆ ಮಾಡಿದೆ.ಬೀದರ್‍ನ ವಿಜಯ್ ಸಿಂಗ್(ಕಾಂಗ್ರೆಸ್), ಕಲಬುರಗಿಯ ಬಿ.ಜಿ.ಪಾಟೀಲ್(ಬಿಜೆಪಿ), ವಿಜಾಪುರದ ಎಸ್.ಆರ್.ಪಾಟೀಲ್(ಕಾಂಗ್ರೆಸ್), ಸುನೀಲ್‍ಗೌಡ ಪಾಟೀಲ್(ಬಿಜೆಪಿ), ಬೆಳಗಾಂನ ಮಹಾಂತೇಶ್ ಕವಟಗಿಮಠ(ಬಿಜೆಪಿ), ವಿವೇಕರಾವ್ ವಸಂತರಾವ್ ಪಾಟೀಲ್(ಕಾಂಗ್ರೆಸ್), ಉತ್ತರ ಕನ್ನಡದ ಶ್ರೀಕಾಂತ್ ಗೋಟ್ನೆಕರ್(ಕಾಂಗ್ರೆಸ್), ಧಾರವಾಡದ ಪ್ರದೀಪ್ ಶೆಟ್ಟರ್(ಕಾಂಗ್ರೆಸ್), ಶ್ರೀನಿವಾಸ್ ಮಾನೆ(ಕಾಂಗ್ರೆಸ್), ರಾಯಚೂರಿನ ಬಸವರಾಜ ಪಾಟೀಲ್ ಇಟಗಿ(ಕಾಂಗ್ರೆಸ್), ಬಳ್ಳಾರಿಯ ಕೆ.ಸಿ.ಕೊಂಡಯ್ಯ(ಕಾಂಗ್ರೆಸ್), ಚಿತ್ರದುರ್ಗದ ರಘು ಆಚಾರ್(ಕಾಂಗ್ರೆಸ್), ಶಿವಮೊಗ್ಗದಆರ್.ಪ್ರಸನ್ನಕುಮಾರ್ (ಕಾಂಗ್ರೆಸ್), ದಕ್ಷಿಣ ಕನ್ನಡದ ಕೆ.ಪ್ರತಾಪ್ ಚಂದ್ರಶೆಟ್ಟಿ(ಕಾಂಗ್ರೆಸ್), ಕೋಟಾ ಶ್ರೀನಿವಾಸ ಪೂಜಾರಿ (ಬಿಜೆಪಿ), ಚಿಕ್ಕಮಗಳೂರಿನ ಎಂ.ಕೆ.ಪ್ರಾಣೇಶ್(ಬಿಜೆಪಿ), ಹಾಸನದ ಎಂ.ಎ.ಗೋಪಾಲಸ್ವಾಮಿ (ಕಾಂಗ್ರೆಸ್), ತುಮಕೂರಿನ ಬೆಮೆಲ್ ಕಾಂತರಾಜ್(ಜೆಡಿಎಸ್) ಮಂಡ್ಯದ ಅಪ್ಪಾಜಿಗೌಡ(ಜೆಡಿಎಸ್), ಬೆಂಗಳೂರಿನ ಎಂ.ನಾರಾಯಣಸ್ವಾಮಿ (ಕಾಂಗ್ರೆಸ್), ಬೆಂಗಳೂರು ಗ್ರಾಮಾಂತರದ ಎಸ್.ರವಿ(ಕಾಂಗ್ರೆಸ್), ಕೋಲಾರದ ಸಿ.ಆರ್.ಮನೋಹರ್( ಜೆಡಿಎಸ್), ಕೊಡುಗಿನ ಸುನೀಲ್ ಸುಬ್ರಹ್ಮಣ್ಯ(ಬಿಜೆಪಿ), ಮೈಸೂರಿನ ಆರ್.ಧರ್ಮಸೇನ(ಕಾಂಗ್ರೆಸ್) ಹಾಗೂ ಸಂದೇಶ್ ನಾಗರಾಜ್(ಜೆಡಿಎಸ್) ನಿವೃತ್ತರಾಗುತ್ತಿದ್ದಾರೆ.

ಕೋವಿಡ್‍ನ ನಿಯಮಾವಳಿಗಳನ್ನು ಪಾಲನೆ ಮಾಡಿ ಚುನಾವಣೆ ನಡೆಸಲು ಸೂಚಿಸಲಾಗಿದೆ. ಕರ್ನಾಟಕದ ಜೊತೆಗೆ ತೆಲಂಗಾಣ, ಆಂಧ್ರಪ್ರದೇಶ, ಮಹಾರಾಷ್ಟ್ರ ವಿಧಾನಪರಿಷತ್‍ನ ಕ್ಷೇತ್ರಗಳಿಗೂ ಚುನಾವಣೆ ನಡೆಸಲಾಗುತ್ತದೆ. ಆಂಧ್ರಪ್ರದೇಶದಲ್ಲಿ 8 ಕ್ಷೇತ್ರಗಳ 11 ಸ್ಥಾನಗಳಿಗೆ, ತೆಲಂಗಾಣದಲ್ಲಿ ಜನವರಿ 4ರಂದು ತೆರವಾಗುವ 9 ಕ್ಷೇತ್ರಗಳ 11ಸ್ಥಾನಗಳಿಗೆ, ಮಹಾರಾಷ್ಟ್ರದಲ್ಲಿ ಜನವರಿ 1ರಂದು ತೆರವಾಗುವ 05 ಕ್ಷೇತ್ರಗಳ 6 ಸ್ಥಾನಗಳಿಗೆ ಡಿ.10ರಂದು ಮತದಾನ ನಡೆಯಲಿದೆ.

Related posts

ವಿಶ್ವಕಪ್ ಫೈನಲ್: ಪ್ರಧಾನಿ ಮೋದಿ, ಅಮಿತಾಬ್ ಬಚ್ಚನ್, ರಜನಿಕಾಂತ್ ಸೇರಿ ಕ್ರಿಕೆಟ್ ದಿಗ್ಗಜರು ಪಂದ್ಯ ವೀಕ್ಷಣೆ

satyadarshana

ರಾತ್ರಿ ಕಾಮಗಾರಿ.ಸರ್ಕಾರಿ ನಿಯಮಕ್ಕಿಲ್ಲ ಬೆಲೆ | ಅಕ್ರಮ ಕಂಡರೂ ಕಾಣದಂತೆ ವರ್ತಿಸುತ್ತಿರುವ ಅಧಿಕಾರಿಗಳು

satyadarshana

ನರೇಗಲ್‌ನಿಂದ ಗಡ್ಡಿ ಹಳ್ಳದವರೆಗೆ ರಸ್ತೆ ಸಂಚಾರಕ್ಕೆ ತೊಂದರೆ; ಒಂದೇ ವಾಹನ ಸಂಚಾರ

satyadarshana

Leave a Comment