ಗಜೇಂದ್ರಗಡ : ಇಂದು ದಿನಾಂಕ 20.10.2021 ರಂದು ಗದಗ ಜಿಲ್ಲೆಯ ಗಜೇಂದ್ರಗಡ ನಗರದ ಜೆಡಿಎಸ್ ಪಕ್ಷದ ಜನಸಂಪರ್ಕ ಕಾರ್ಯಾಲಯದಲ್ಲಿ ಆದಿಕವಿ ಮಹರ್ಷಿ ವಾಲ್ಮೀಕಿ ಅವರ ಜಯಂತಿಯನ್ನು ಆಚರಿಸಲಾಯಿತು.
ಮಹರ್ಷಿ ವಾಲ್ಮೀಕಿ ಜಯಂತಿಯಂದು ಅನೇಕ ಧಾರ್ಮಿಕ ಕಾರ್ಯಗಳನ್ನು ನಡೆಸಲಾಗುತ್ತದೆ. ವಾಲ್ಮೀಕಿ, ರಾಮ ಸೀತೆಯನ್ನು ಕಾಡಿಗೆ ಕಳುಹಿಸಿದಾಗ ಆಶ್ರಯ ನೀಡಿದ್ದಾರೆ ಎಂದು ಹೇಳಲಾಗುತ್ತದೆ. ವಾಲ್ಮೀಕಿ ಅವರ ಆಶ್ರಮದಲ್ಲಿಯೇ ಸೀತೆ ವಾಸವಾಗಿದ್ದು, ಲವ, ಕುಶ ಕೂಡ ಇಲ್ಲಿಯೇ ಜನಿಸುತ್ತಾರೆ. ಅಲ್ಲದೇ ವಾಲ್ಮೀಕಿ ವಿಶ್ವದ ಮೊದಲ ಶ್ಲೋಕ ರಚಿಸಿದ್ದಾರೆ ಎಂಬ ಹೆಗ್ಗಳಿಕೆಯನ್ನು ಪಡೆದುಕೊಂಡಿದ್ದಾರೆ. ಈ ಎಲ್ಲಾ ಕಾರಣದಿಂದಾಗಿ ಮಹರ್ಷಿ ವಾಲ್ಮೀಕಿ ಜಯಂತಿ ವಿಶೇಷ ಮಹತ್ವ ಪಡೆದಿದೆ.
ಈ ಸಂದರ್ಭದಲ್ಲಿ ಜೆಡಿಎಸ್ ಪಕ್ಷದ ತಾಲೂಕು ಅಧ್ಯಕ್ಷರಾದ ಸನ್ಮಾನ್ಯ ಶ್ರೀ ಎಂ.ವಾಯ್. ಮುಧೋಳ (ಸಾಗರ್) ಅವರು ಮತ್ತು ವಾಲ್ಮೀಕಿ ಸಮಾಜದ ನಾಯಕರಾದ ಶ್ರೀ ಎಲ್. ಡಿ. ತಳವಾರ ಅವರು ಹಾಗೂ ಪಕ್ಷದ ಮುಖಂಡರಾದ ಶ್ರೀ ಜ್ಞಾನೇಶ್ ಗಂಧಳೆ ಮತ್ತು ಸಮಾಜದ ಯುವ ಘಟಕದ ನಾಯಕರು ಜಯಂತಿ ಆಚರಣೆ ಮಾಡಿದರು