Satya Darshana
ಬಿಸಿ ಬಿಸಿ ಸುದ್ದಿ
ದೇಶ-ವಿದೇಶಬಿಸಿ ಬಿಸಿ ಸುದ್ದಿ

ಅಫ್ಘಾನ್ ಭೂಮಿಯನ್ನು ಭಯೋತ್ಪಾದನೆಗೆ ಬಳಸಿಕೊಳ್ಳಬೇಡಿ; ಪಾಕಿಸ್ತಾನ, ಚೀನಾಗೆ ಪ್ರಧಾನಿ ಮೋದಿ ಎಚ್ಚರಿಕೆ

ಸುದ್ದಿಮೂಲ ಸತ್ಯದರ್ಶನ
ನ್ಯೂಯಾರ್ಕ್: ವಿಶ್ವಸಂಸ್ಥೆಯ ಸಾಮಾನ್ಯ ಸಭೆಯ ಅಧಿವೇಶನದಲ್ಲಿ ಭಾಷಣ ಮಾಡಿರುವ ಪ್ರಧಾನಮಂತ್ರಿ ನರೇಂದ್ರ ಮೋದಿ ಪಾಕಿಸ್ತಾನ ಹಾಗೂ ಚೀನಾ ವಿರುದ್ಧ ಪರೋಕ್ಷವಾಗಿ ಗುಡುಗಿದ್ದಾರೆ. ಭಯೋತ್ಪಾದನೆಯನ್ನು ರಾಜಕೀಯ ಅಸ್ತ್ರದಂತೆ ಬಳಸ್ತಿದ್ದಾರೆ. ಆದರೆ, ಭಯೋತ್ಪಾದನೆ ಮುಂದೊಂದು ದಿನ ಅವರಿಗೂ ಕಂಟಕವಾಗುತ್ತದೆ ಎಂಬುದನ್ನು ಅವರು ಮರೆಯಬಾರದು. ಅಫ್ಘಾನಿಸ್ತಾನದ ಭೂಮಿ ಭಯೋತ್ಪಾದನೆಗೆ ಬಳಕೆ ಆಗಬಾರದು ಎಂದು ನಾವು ಎಚ್ಚರಿಕೆ ನೀಡುತ್ತಿದ್ದೇನೆ. ಭಯೋತ್ಪಾದನೆ ರಾಜಕೀಯವಾಗಿ ಬಳಕೆಯಾಗುತ್ತಿದೆ ಎಂದು ಹೇಳುವ ಮೂಲಕ ಚೀನಾ ಮತ್ತು ಪಾಕಿಸ್ತಾನಕ್ಕೆ ಎಚ್ಚರಿಕೆ ನೀಡಿದ್ದಾರೆ
ಅಫ್ಘಾನಿಸ್ತಾನದ ಮಹಿಳೆಯರು, ಮಕ್ಕಳು, ಅಲ್ಪಸಂಖ್ಯಾತರಿಗೆ ರಕ್ಷಣೆ ಬೇಕಾಗಿದೆ. ಅಫ್ಘಾನಿಸ್ತಾನದ ಉಗ್ರರನ್ನು ಬಳಸಿಕೊಳ್ಳುವ ಪ್ರಯತ್ನ ಮಾಡಬೇಡಿ. ಅಲ್ಲಿನ ಸೂಕ್ಷ್ಮ ಪರಿಸ್ಥಿತಿಯನ್ನು ಯಾವುದೇ ದೇಶ ಬಳಸಿಕೊಳ್ಳಬಾರದು. ಅಫ್ಘಾನಿಸ್ತಾನದ ಬಿಕ್ಕಟ್ಟನ್ನು ಯಾವುದೇ ದೇಶ ತನ್ನ ಲಾಭಕ್ಕೆ ಬಳಸಬಾರದು. ಸಮುದ್ರ ಸಂಪನ್ಮೂಲ ಬಳಸಿಕೊಳ್ಳಬೇಕೇ ವಿನಃ ದುರ್ಬಳಕೆ ಮಾಡಿಕೊಳ್ಳಬಾರದು ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.
ಈ ವೇಳೆ ಚಾಣಕ್ಯನ ಮಾತುಗಳನ್ನು ಉಲ್ಲೇಖಿಸಿದ ನರೇಂದ್ರ ಮೋದಿ, ಸರಿಯಾದ ಸಮಯದಲ್ಲಿ ಸರಿಯಾದ ಕೆಲಸ ಮಾಡದಿದ್ದರೆ ಸಮಯವೇ ಆ ಕೆಲಸವನ್ನು ಮಾಡುತ್ತದೆ. ಈ ಹಿನ್ನೆಲೆಯಲ್ಲಿ ವಿಶ್ವಸಂಸ್ಥೆಯಲ್ಲಿ ಸುಧಾರಣೆ ಆಗಲೇಬೇಕು. ವಿಶ್ವಸಂಸ್ಥೆ ಬಗ್ಗೆ ಸಾಕಷ್ಟು ಪ್ರಶ್ನೆಗಳು ಎದ್ದಿವೆ. ಕೊವಿಡ್‌, ಹವಾಮಾನ ಬದಲಾವಣೆ, ಭಯೋತ್ಪಾದನೆ, ಅಫ್ಘಾನಿಸ್ತಾನದ ವಿಚಾರದಲ್ಲಿ ವಿಶ್ವಸಂಸ್ಥೆ ಬಗ್ಗೆ ಪ್ರಶ್ನೆ ಎದ್ದಿದೆ ಎಂದು ಪ್ರಧಾನಿ ಮೋದಿ ಹೇಳಿದ್ದಾರೆ.
UNGA 76ನೇ ಅಧಿವೇಶನ ಉದ್ದೇಶಿಸಿ ಮೋದಿ ಭಾಷಣ ಮಾಡುತ್ತಿದ್ದು, ಭಾರತ ಸ್ವಾತಂತ್ರ್ಯದ 75ನೇ ವರ್ಷ ಪ್ರವೇಶಿಸಿದೆ. ಕೊರೊನಾದಿಂದ ಮೃತಪಟ್ಟ ಎಲ್ಲರಿಗೂ ಶ್ರದ್ಧಾಂಜಲಿ ಅರ್ಪಿಸುತ್ತೇನೆ. ಭಾರತ ಉಜ್ವಲ ಪ್ರಜಾಪ್ರಭುತ್ವಕ್ಕೆ ಒಂದು ಉದಾಹರಣೆ ಆಗಿದೆ. ಭಾರತದ ಪ್ರಧಾನಿ ಆಗಿ 4ನೇ ಬಾರಿಗೆ UNGAಯಲ್ಲಿ ಭಾಷಣ ಮಾಡುತ್ತಿದ್ದೇನೆ. ದೇಶದ ಜನರ ಸೇವೆ ಮಾಡುತ್ತಾ 20 ವರ್ಷ ಕಳೆದಿದ್ದೇನೆ. ಪ್ರಜಾಪ್ರಭುತ್ವದಿಂದ ಮಾತ್ರ ಉತ್ತಮ ಆಳ್ವಿಕೆ ಸಾಧ್ಯ. ಅಭಿವೃದ್ಧಿಯಿಂದ ಯಾರನ್ನೂ ಹೊರಗಿಡುವುದಿಲ್ಲ. ಮೊದಲು ಮುಖ್ಯಮಂತ್ರಿಯಾಗು, ಈಗ ಪ್ರಧಾನಮಂತ್ರಿಯಾಗಿ ಜನರ ಕೆಲಸ ಮಾಡ್ತಿದ್ದೇನೆ ಎಂದು ಮೋದಿ ಹೇಳಿದ್ದಾರೆ. ವಿಶ್ವಸಂಸ್ಥೆಯಲ್ಲಿ ಹಿಂದಿ ಭಾಷೆಯಲ್ಲಿ ಪ್ರಧಾನಿ ಮೋದಿ ಮಾತನಾಡಿದ್ದಾರೆ.
ಜನರ ಮನೆ ಬಾಗಿಲಿಗೆ ಕುಡಿಯುವ ನೀರು ಒದಗಿಸುತ್ತಿದ್ದೇವೆ. ಭಾರತದಲ್ಲಿ ಜನರಿಗೆ ಭೂಮಿಯ ಮಾಲೀಕತ್ವದ ಹಕ್ಕು ನೀಡಲಾಗಿದೆ. ಭಾರತದ 6 ಲಕ್ಷಕ್ಕೂ ಹೆಚ್ಚು ಗ್ರಾಮಗಳ ಡ್ರೋನ್ ಮೂಲಕ ಸರ್ವೆ ಮಾಡಲಾಗಿದೆ. ಜನರ ಆಸ್ತಿ ಡಿಜಿಟಲ್ ದಾಖಲೆ ನೀಡುತ್ತಿದ್ದೇವೆ. ಇದರಿಂದ ಬ್ಯಾಂಕ್ ಲೋನ್ ಪಡೆಯಲು ಸಹಾಯವಾಗುತ್ತದೆ. ಭಾರತದ ಕೊವಿನ್ ಪೋರ್ಟಲ್‌ ಮೂಲಕ ಕೋಟಿಗಟ್ಟಲೆ ಲಸಿಕೆ ನೀಡಲಾಗಿದೆ ಎಂದು ನರೇಂದ್ರ ಮೋದಿ ಹೇಳಿದ್ದಾರೆ.

Related posts

ಸರ್ಕಾರಿ ಸಾವಲತ್ತುಗಳನ್ನು ಸಕಾಲದಲ್ಲಿ ಪಡೆದು ಮಹಿಳೆಯರು ಸಭಲರಾಗಿ-ಹಾಲಪ್ಪ ಆಚಾರ್.

satyadarshana

ಅಸ್ಪೃಶ್ಯತೆಗೆ ಕಡಿವಾಣ ಹಾಕುವುದು ನಮ್ಮ ಗುರಿ ಕೋಟ ಶ್ರೀನಿವಾಸ ಪೂಜಾರಿ,

satyadarshana

ಸಮಾಜಕ್ಕೆ ಉತ್ತಮ ಸಂದೇಶವನ್ನು‌ ಸಾರಿ ಹೋದ ಬೀಬಿಫಾತೀಮ ಹಾಗೂ ಹಸನ ಮತ್ತು ಹುಸೇನರ ತ್ಯಾಗ  ನಮ್ಮೆಲ್ಲರಿಗೆ ದಾರಿ ದೀಪ : 

satyadarshana

Leave a Comment