ಸುದ್ದಿಮೂಲ ಸತ್ಯದರ್ಶನ
ಬಿಜೆಪಿ ಅದೇ ಅಸ್ತ್ರ ಪ್ರಯೋಗಿಸಿ ಇಡೀ ರಾಷ್ಟ್ರದಲ್ಲಿ ಹಿಂದೂ ಅಸ್ಮಿತೆ ಮೂಲಕವೇ ಗದ್ದುಗೆ ಹಿಡಿದಿದೆ.. ಈಗ ಅದೇ ಬಿಜೆಪಿ ಅಧಿಕಾರದಲ್ಲಿ ಹುಚ್ಚಗಣಿ ದೇಗುಲ ನೆಲಸಮ ಆಗಿದೆ.. ಇದು ಸರ್ಕಾರಕ್ಕೆ ನುಂಗಲಾರದ ತುತ್ತಾಗಿ ಪರಿಣಮಿಸಿದ್ದಿದೆ.. ಈಗ ಎಚ್ಚೆತ್ತುಕೊಂಡಿರುವ ಸರ್ಕಾರ, ಇದಕ್ಕಾಗಿ ದೇಗುಲಗಳ ರಕ್ಷಣೆಯ ಹೊಸ ಸಾಹಸಕ್ಕೆ ಕೈಹಾಕಿದೆ.
ನಂಜನಗೂಡಿನಲ್ಲಿ ಮಹದೇವಮ್ಮ ದೇಗುಲ ತೆರವು ವಿವಾದದ ಬಳಿಕ ಎಚ್ಚೆತ್ತ ರಾಜ್ಯ ಸರ್ಕಾರ ಡ್ಯಾಮೇಜ್ ಕಂಟ್ರೋಲ್ಗೆ ಸಾಹಸ ಮಾಡ್ತಿದೆ. ದೇಗುಲಗಳನ್ನ ಉಳಿಸಲು ಹೊಸ ತಂತ್ರ ಮಾಡುತ್ತಿರುವ ಸರ್ಕಾರ, ಅಯೋಧ್ಯೆಯ ರಾಮಜನ್ಮ ಭೂಮಿ ಮಾದರಿಯಲ್ಲಿ ಪ್ಲಾನ್ ಒಂದನ್ನ ರಚಿಸ್ತಿದೆ.. ಸುಪ್ರೀಂಕೋರ್ಟ್ ತೀರ್ಪು ಮುಂದಿಟ್ಟು ದೇಗುಲಗಳ ಸಂರಕ್ಷಣೆಗೆ ಮುಂದಾಗಿದೆ..
ದೇಗುಲ ಭಕ್ತರ ಪಾಲಿನ ಭಾವನಾತ್ಮಕ ವಿಷಯ.. ದೇಗುಲಕ್ಕೆ ಆದ ಧಕ್ಕೆ ಭಕ್ತರ ಮೇಲಿನ ದಾಳಿ ಅಂತಲೇ ವ್ಯಾಖ್ಯಾನಿಸಲಾಗುತ್ತೆ.. ದೇಗುಲಗಳು ಸರ್ಕಾರವನ್ನೇ ಬುಡಮೇಲು ಮಾಡಿದ ಇತಿಹಾಸ ಈ ರಾಷ್ಟ್ರದಲ್ಲಿದೆ.. ಹೊಸ ಸರ್ಕಾರ ರಚನೆಗೆ ದೇಗುಲದ ಮಂತ್ರಗಳೇ ಶಕ್ತಿ ಆಗಿ ಪರಿಣಮಿಸಿದ್ದಿದೆ..
ಒಟ್ಟಾರೆ, ದೇವಾಲಯಗಳಿಗೆ ಈ ನಿಯಮ ಜಾರಿಗೆ ತರಲು ಪ್ಲಾನ್ ಮಾಡುತ್ತಿರುವ ರಾಜ್ಯ ಸರ್ಕಾರ, ದೇವಾಲಯಗಳ ಜಾಗವನ್ನು ದೇವರ ಹೆಸರಿನಲ್ಲಿಯೇ ನೋಂದಣಿಗೆ ಮುಂದಾಗಿದೆ.. ಈ ಮೂಲಕ ಹುಚ್ಚಗಣಿ ದೇಗುಲ ವಿಚಾರದಲ್ಲಿ ಆಗಿರುವ ಡ್ಯಾಮೇಜ್ಗೆ ಕಂಟ್ರೋಲ್ ಮಾಡಲು ಪ್ಲಾನ್ ಮಾಡಿದೆ..
ಪಾಣಿ ಪತ್ರದಲ್ಲಿ ಜಾಗ ದೇವರಿಗೆ ಸೇರಿದ್ದು ಎಂದು ನೋಂದಣಿ ಮಾಡಿಸುವುದು
ದೇವರ ಹೆಸರಿನ ಜಾಗ ಎಂದು ನಮೂದಿಸಿದ್ರೆ, ದೇಗುಲ ಧ್ವಂಸಗೊಳಿಸಲು ಆಗಲ್ಲ
ಕರ್ನಾಟಕದಲ್ಲಿ 9,860 ಎಕರೆ ಭೂಮಿ ಹಿಂಪಡೆಯಬಹುದು ಎಂಬ ಲೆಕ್ಕಾಚಾರ
ಜಾಗಕ್ಕೂ ಟ್ರಸ್ಟಿಗಳು ಸಂಬಂಧವಿಲ್ಲದಂತೆ ನೋಡಿಕೊಂಡು ದೇಗುಲ ಜಾಗ ರಕ್ಷಣೆ
